ಗ್ರಾಮದೇವಿ ಜಾತ್ರೆಗೆ ಶಾಸಕ ವಿಶ್ವಾಸ ವೈದ್ಯರಿಂದ 11.11 ಲಕ್ಷ ವೈಯಕ್ತಿಕ ದೇಣಿಗೆ
MLA Vishwas Vaidya donates Rs 11.11 lakh personally for Gramdevi fair
ಸವದತ್ತಿ 06: ಸುಮಾರು 45 ವರ್ಷಗಳ ಸುದೀರ್ಘ ಅಂತರದ ನಂತರ ನಗರದಲ್ಲಿ ಜರುಗುತ್ತಿರುವ ಶ್ರೀ ಗ್ರಾಮದೇವತೆ ಜಾತ್ರಾ ಮಹೋತ್ಸವವು ಇದೀಗ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಭಕ್ತಿ ಮತ್ತು ಸಂಭ್ರಮದ ಶಿಖರಕ್ಕೇರಿದೆ. ಈ ಐತಿಹಾಸಿಕ ಪರ್ವಕಾಲದಲ್ಲಿ ಶಾಸಕ ವಿಶ್ವಾಸ ವೈದ್ಯ ಅವರು ಭಕ್ತಿಪೂರ್ವಕವಾಗಿ ಪಾಲ್ಗೊಂಡು ದೇವಿಯ ದರ್ಶನ ಪಡೆದರು.ಜಾತ್ರಾ ಮಹೋತ್ಸವದ ಅಂಗವಾಗಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ. ಗ್ರಾಮದೇವತೆಯ ದರ್ಶನ ಪಡೆದು ಪುನೀತರಾದರು. ಜಾತ್ರಾ ಮಹೋತ್ಸವದ ಯಶಸ್ಸಿಗಾಗಿ ತಮ್ಮ ವೈಯಕ್ತಿಕ ವತಿಯಿಂದ ಹನ್ನೊಂದು ಲಕ್ಷದ ಹನ್ನೊಂದು ಸಾವಿರದ ನೂರ ಹನ್ನೊಂದು ರೂ. ಬೃಹತ್ ಮೊತ್ತದ ದೇಣಿಗೆಯನ್ನು ಸಮಿತಿ ಪದಾಧಿಕಾರಿಗಳಿಗೆ ಹಸ್ತಾಂತರಿಸಿದರು.ಬಳಿಕ ಮಾತನಾಡಿದ ಅವರು ದೀರ್ಘ ಕಾಲದ ನಂತರ ನಡೆಯುತ್ತಿರುವ ಈ ಜಾತ್ರೆಯು ಇಡೀ ನಗರಕ್ಕೆ ಹಬ್ಬದ ಕಳೆಯನ್ನು ತಂದಿದೆ.
ದೇವಿಯ ಆಶೀರ್ವಾದ ಕ್ಷೇತ್ರದ ಸಮಸ್ತ ಜನತೆಯ ಮೇಲಿರಲಿ ಹಾಗೂ ಎಲ್ಲರ ಬದುಕಿನಲ್ಲಿ ಸುಖ, ಶಾಂತಿ ಮತ್ತು ಸಮೃದ್ಧಿ ನೆಲೆಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಹಾರೈಸಿದರು.ಜಾತ್ರೆಯ ಸಡಗರದಲ್ಲಿ ಜನಸಾಮಾನ್ಯರಂತೆ ಬೆರೆತ ಭಕ್ತಾದಿಗಳೊಂದಿಗೆ ಸಂವಾದ ನಡೆಸಿದರು. ಜಾತ್ರಾ ಕಮೀಟಿಯವರು, ಹಾಗೂ ಭಕ್ತರು ಹಮ್ಮಿಕೊಂಡಿದ್ದ ಅನ್ನದಾಸೋಹ ಕೇಂದ್ರಗಳಿಗೆ ಭೇಟಿ ನೀಡಿ, ಅಲ್ಲಿನ ವ್ಯವಸ್ಥೆಯನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.45 ವರ್ಷಗಳ ನಂತರ ನಡೆಯುತ್ತಿರುವ ಈ ಅದ್ಧೂರಿ ಜಾತ್ರೆಯಲ್ಲಿ ಭಕ್ತರಿಗಾಗಿ ನಗರದ ಎಪಿಎಂಸಿ ಆವರಣ ಹಾಗೂ ಗಡೇಕಾರ ಪ್ಲಾಟ್ಗಳಲ್ಲಿ ಹಗಲಿರುಳು ಅನ್ನಪ್ರಸಾದದ ವ್ಯವಸ್ಥೆ ಮಾಡಲಾಗಿದೆ. ಸಹಸ್ರಾರು ಭಕ್ತರು ಈ ದಾಸೋಹದಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸುತ್ತಿರುವುದು ಸಂತಸದ ವಿಷಯ ಎಂದು ಅವರು ಹೇಳಿದರು. ಸವದತ್ತಿ ನಗರವು ಭಕ್ತ ಸಾಗರದಿಂದ ತುಂಬಿ ತುಳುಕುತ್ತಿದ್ದು, ಹಳೆಯ ಸಂಪ್ರದಾಯ ಮತ್ತು ಆಧುನಿಕ ಸಡಗರದ ಸಮ್ಮಿಲನದಂತೆ ಈ ಐತಿಹಾಸಿಕ ಜಾತ್ರೆ ಕಂಗೊಳಿಸುತ್ತಿದೆ ಎಂದರು. ಈ ಸಂದರ್ಭದಲ್ಲಿ ಊರಿನ ಮುಖಂಡರು, ಯುವಕರು ಹಾಗೂ ಸಹಸ್ರಾರು ಭಕ್ತಾದಿಗಳು ಉಪಸ್ಥಿತರಿದ್ದರು.
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ
ಹಳೆ ವೈಷಮ್ಯ : ಬೆಳಗಾವಿಯಲ್ಲಿ ಯುವಕನ ಕೊಚ್ವಿ ಹತ್ಯೆ 