ಶಾಸಕರಿಂದ ಮನ ಒಲಿಕೆ: ಹೋರಾಟ ತಾತ್ಕಾಲಿಕ ಮುಂದೂಡಿಕೆ
MLA Persuades: Protest Temporarily Postponed
ತಾಳಿಕೋಟಿ 25: ತಾಲೂಕಿನ ಕಲಕೇರಿಯಿಂದ ಬಿಂಜಲಬಾವಿ ಗ್ರಾಮದ ಮಾರ್ಗವಾಗಿ ಕೆಸರಟ್ಟಿಯವರೆಗೆ ರಸ್ತೆ ಡಾಂಬರೀಕರಣ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ರಾಷ್ಟ್ರೀಯ ರೈತ ಸಂಘ ತಾಲೂಕು ಘಟಕದ ಪದಾಧಿಕಾರಿಗಳು ಬಿಂಜಲಭಾವಿ ಗ್ರಾಮದ ಹತ್ತಿರ ನಡೆಸುತ್ತಿರುವ ಧರಣಿ ಸತ್ಯಾಗ್ರಹದ ನಾಲ್ಕನೆಯ ದಿನವಾದ ಶುಕ್ರವಾರ ದೇವರ ಹಿಪ್ಪರಗಿ ಶಾಸಕ ರಾಜುಗವಡ ಪಾಟೀಲ ಕುದರಿ ಸಾಲವಾಡಗಿ ಭೇಟಿ ನೀಡಿದರು.
ಹೋರಾಟಗಾರರೊಂದಿಗೆ ಮಾತನಾಡಿ ಇದೇ ಸೋಮವಾರದಿಂದಲೇ ರಸ್ತೆ ದುರಸ್ತಿ ಕಾರ್ಯವನ್ನು ಪ್ರಾರಂಭಿಸಲಾಗುವುದು. ಮರ್ಮು ಹೊಡೆಸಿ, ತೆಗ್ಗುಗಳನ್ನು ಮುಚ್ಚಿ ರಸ್ತೆ ಸಮ ಮಾಡಲಾಗುವುದು, ಈ ರಸ್ತೆ ದುರಸ್ತಿಗೆ ಈಗಾಗಲೇ ಪ್ರಸ್ತಾವನೆಯನ್ನು ಸಲ್ಲಿಸಲಾಗಿದ್ದು ಮತ್ತೊಮ್ಮೆ ಲೊಕೋಪಯೋಗಿ ಇಲಾಖೆಯ ಸಚಿವರಿಗೆ ಭೇಟಿಯಾಗಿ ಅನುಮೋದನೆಗೆ ಒತ್ತಾಯಿಸುತ್ತೇನೆ. ಮೂರ್ನಾಲ್ಕು ತಿಂಗಳಲ್ಲಿ ಸರ್ಕಾರದ ಆದೇಶ ಪಡೆದು ಟೆಂಡರ್ ಮೂಲಕ ಕಾಮಗಾರಿ ಪ್ರಾರಂಭಿಸಲಾಗುವುದು.
ಹಾಗೂ ಇನ್ನುಳಿದ ಬೇಡಿಕೆಗಳನ್ನು ಹಂತಹಂತವಾಗಿ ಕಾಲಮಿತಿಯಲ್ಲಿ ಈಡೇರಿಸಲಾಗುವುದು. ಆದ್ದರಿಂದ ಧರಣಿ ಸತ್ಯಾಗ್ರಹವನ್ನು ಕೈ ಬಿಡುವಂತೆ ಮನ ಒಲಿಸಿದರು. ಶಾಸಕರ ಮಾತುಗಳಿಗೆ ಪ್ರತಿಕ್ರಿಯಿಸಿದ ಹೋರಾಟಗಾರರು, ಸೋಮವಾರದವರೆಗೆ ಕಾಯುತ್ತೇವೆ. ಒಂದು ವೇಳೆ ಸೋಮವಾರದಂದು ರಸ್ತೆ ದುರಸ್ತಿ, ಚಾಲನೆ ಆಗದಿದ್ದರೆ ಅಂದೇ ಸಂಜೆಗೆ ಮತ್ತೆ ಧರಣಿ ಸತ್ಯಾಗ್ರಹ ಮುಂದುವರೆಸಲಾಗುವುದು ಎಂದು ತಿಳಿಸಿ ತಮ್ಮ ಸತ್ಯಾಗ್ರಹವನ್ನು ಮುಕ್ತಾಯಗೊಳಿಸಿದರು.
ರಾಷ್ಟ್ರೀಯ ರೈತರ ಸಂಘದ ತಾಳಿಕೋಟೆ ತಾಲೂಕು ಘಟಕದ ಅಧ್ಯಕ್ಷ ಅಶೋಕಗೌಡ ಪಾಟೀಲ, ಜಿಲ್ಲಾ ಯುವಮೋರ್ಚಾ ಅಧ್ಯಕ್ಷ ಹಣಮಂತ ವಡ್ಡರ, ತಾಲೂಕು ಯುವಮೋರ್ಚಾ ಅಧ್ಯಕ್ಷ ಗೌಡಪ್ಪಗೌಡ ಹಳಿಮನಿ ಅಸ್ಕಿ, ಜಿಲ್ಲಾ ಉಪಾಧ್ಯಕ್ಷ ಮೈಬುಬಭಾಷಾ ಮನಗೂಳಿ, ದೇವರ ಹಿಪ್ಪರಗಿ ತಾಲೂಕು ಅಧ್ಯಕ್ಷ ಶಿವಪ್ಪ ಡೊಣೂರ, ಸಿದ್ದಣ್ಣ ಅಸ್ಕಿ, ನಿಂಗನಗೌಡ ಪಾಟೀಲ್, ಸಂಗಮೇಶ ಹುಣಸಗಿ, ತಹಶೀಲ್ದಾರ ಡಾ.ವಿನಯಾ ಹೂಗಾರ, ತಾಲೂಕಾ ಜೆಡಿಎಸ್ ಅಧ್ಯಕ್ಷ ಮಡುಸಾಹುಕಾರ ಬಿರಾದಾರ, ಕಾಶೀಮ ನಾಯ್ಕೊಡಿ ಇಲಾಖೆಯ ಅಧಿಕಾರಿಗಳು ಇತರರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 