ಜಾಮಿಯಾ ಮಸೀದಿಗೆ ಶಾಸಕ ನಾಡಗೌಡ ಭೇಟಿ
MLA Nadagouda visits Jamia Masjid
ತಾಳಿಕೋಟಿ 25: ಪುಟ್ಟಣದ ಐತಿಹಾಸಿಕ ಸಾತೋ ಶಹೀದ ಜಾಮೀಯಾ ಮಸೀದಿಗೆ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷರು ಹಾಗೂ ಶಾಸಕ ಅಪ್ಪಾಜಿ ನಾಡಗೌಡರು ಶುಕ್ರವಾರ ಭೇಟಿ ನೀಡಿದರು. ಅವರು ಧಾರ್ಮಿಕ ಮುಖಂಡ ಸಯ್ಯದ್ ಶಕೀಲ ಅಹಮದ್ ಖಾಜಿ ಹಾಗೂ ಮಸೀದಿ ಮುಖ್ಯಸ್ಥರೊಂದಿಗೆ ಮಸೀದಿ ನಿರ್ಮಾಣದ ಕುರಿತು ಮಾತನಾಡಿ ಸರ್ಕಾರದ ಸೌಲಭ್ಯಗಳು ಪಡೆಯಲು ತಿಳಿಸಿದರು. ಮಸೀದಿ ಸುಂದರವಾಗಿ ನಿರ್ಮಾಣಗೊಂಡಿರುವುದಕ್ಕೆ ಶಾಸಕರು ಸಂತೋಷ ವ್ಯಕ್ತಪಡಿಸಿದರು. ಜಾಮೀಯಾ ಮಸೀದಿ ಕಮಿಟಿ ವತಿಯಿಂದ ಶಾಸಕ ನಾಡಗೌಡರನ್ನು ಸನ್ಮಾನಿಸಿ ಗೌರವಿಸಲಾಯಿತು.
ಧಾರ್ಮಿಕ ಮುಖಂಡ ಸಯ್ಯದ್ ಶಕೀಲ ಅಹಮದ್ ಕಾಜಿ ಅವರು ಶಾಸಕರಿಗೆ ಸಚಿವ ಸ್ಥಾನ ಸಿಗಲಿ ಎಂದು ಅಲ್ಲಾಹನಲ್ಲಿ ಪ್ರಾರ್ಥಿಸಿದರು. ಗಣ್ಯರಾದ ವಿ.ಸಿ.ಹಿರೇಮಠ, ಸಿದ್ದನಗೌಡ ಪಾಟೀಲ ನಾವದಗಿ, ಸಂಗನಗೌಡ ಅಸ್ಕಿ, ಹಸನಸಾಬ ಮನಗೂಳಿ, ಮುರ್ತುಜಾ ಮೇತ್ರಿ, ಮೋದಿನಸಾ ನಗಾರ್ಚಿ, ಮುಸ್ಲಿಂ ಬ್ಯಾಂಕ್ ಅಧ್ಯಕ್ಷ ಮಹೆಬೂಬ ಕೆಂಭಾವಿ, ಮಂಜೂರಲಿ ಬೇಪಾರಿ, ತನ್ವೀರ್ ಮನಗೂಳಿ, ಆಸೀಫ್ ಕೆಂಭಾವಿ, ಮಲ್ಲನಗೌಡ ದೇಸಾಯಿ ಮತ್ತೀತರರು ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 