ಮಾರುತೇಶ್ವರ ದರ್ಶನ ಪಡೆದ ಶಾಸಕ ನಾಡಗೌಡ
MLA Nad Gowda who visited Maruteshwara
ತಾಳಿಕೋಟಿ 12: ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಹಾಗೂ ಮುದ್ದೇಬಿಹಾಳ ಮತಕ್ಷೇತ್ರದ ಶಾಸಕರಾದ ಸಿ.ಎಸ್.ನಾಡಗೌಡ (ಅಪ್ಪಾಜಿ) ಅವರು ಹೊಸಳ್ಳಿ ಗ್ರಾಮದ ಶ್ರೀ ಮಾರುತೇಶ್ವರ ನೂತನ ಮಂದಿರಕ್ಕೆ ಭೇಟಿ ನೀಡಿದರು. ತಾಳಿಕೋಟಿ ತಾಲೂಕಿನ ಸುಕ್ಷೇತ್ರ ಹೊಸಹಳ್ಳಿ ಗ್ರಾಮದಲ್ಲಿ ಇತ್ತೀಚಿಗೆ ಲೋಕಾರೆ್ಣಗೊಂಡಿರುವ ಶ್ರೀ ಮಾರುತೇಶ್ವರರ ನೂತನ ಮಂದಿರಕ್ಕೆ ಶನಿವಾರ ಸಂಜೆ ಭೇಟಿ ನೀಡಿದ ಶಾಸಕ ಅಪ್ಪಾಜಿ ನಾಡಗೌಡರು ವಿಶೇಷ ಪೂಜೆ ಸಲ್ಲಿಸಿ ದರ್ಶನ ಪಡೆದುಕೊಂಡರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಶ್ರೀ ಮಾರುತೇಶ್ವರರ ನೂತನ ಮಂದಿರವನ್ನು ನಿರ್ಮಾಣ ಮಾಡಿ ಉಜ್ಜಯಿನಿ ಜಗದ್ಗುರುಗಳಿಂದ ಇದನ್ನು ಲೋಕಾರೆ್ಣ ಗೊಳಿಸಿರುವುದು ಅತ್ಯಂತ ಪುಣ್ಯದ ಕಾರ್ಯವಾಗಿದೆ.
ಈ ಕಾರ್ಯಕ್ರಮದಲ್ಲಿ ನನಗೂ ಭಾಗವಹಿಸಬೇಕಾಗಿತ್ತು ಉಪಚುನಾವಣೆಯ ಕೆಲಸಗಳ ಒತ್ತಡದಿಂದಾಗಿ ಬರಲು ಸಾಧ್ಯವಾಗಲಿಲ್ಲ ನಿಷ್ಕಳಂಕ ಮನಸ್ಸಿನಿಂದ ಈ ದೇವಸ್ಥಾನದ ನಿರ್ಮಾಣದಲ್ಲಿ ಸಹಕರಿಸಿದ ಎಲ್ಲರಿಗೂ ಶ್ರೀ ಮಾರುತೇಶ್ವರ ಒಳ್ಳೆಯದನ್ನು ಮಾಡಲೆಂದು ಹಾರೈಸುತ್ತೇನೆ ಎಂದರು. ಇದೇ ಸಂದರ್ಭದಲ್ಲಿ ಶಾಸಕ ಅಪ್ಪಾಜಿ ನಾಡಗೌಡರನ್ನು ಗ್ರಾಮದ ಹಿರಿಯರು ಸನ್ಮಾನಿಸಿ ಗೌರವಿಸಿದರು. ಈ ಸಮಯದಲ್ಲಿ ಗಣ್ಯರಾದ ಸೋಮನಗೌಡ ಹಾದಿಮನಿ, ಬಸನಗೌಡ ಬಿರಾದಾರ, ಸಿದ್ದನಗೌಡ ಪಾಟೀಲ(ನಾವದಗಿ), ಪ್ರಭುಗೌಡ ಮದರಕಲ್ಲ,ಎಚ್.ಬಿ.ಬಿರಾದಾರ, ನಂದನಗೌಡ, ಮಲ್ಲನಗೌಡ ಬಿರಾದಾರ, ಹಣಮಂತ್ರಾಯಗೌಡ, ಪರ್ಥಗೌಡ ಮತ್ತಿತರರು ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 