ಚಿಕ್ಕೋಡಿ

ರಸ್ತೆ ಅಭಿವೃದ್ಧಿಗೆ ಕಾಮಗಾರಿಗಳಿಗೆ ಶಾಸಕ ಐಹೊಳೆ ಚಾಲನೆ

ರಸ್ತೆ ಅಭಿವೃದ್ಧಿಗೆ ಕಾಮಗಾರಿಗಳಿಗೆ ಶಾಸಕ ಐಹೊಳೆ ಚಾಲನೆ

ಚಿಕ್ಕೋಡಿ, 26 ; ಪ್ರತಿಯೊಂದು ಗ್ರಾಮಕ್ಕೂ ಉತ್ತಮ ರಸ್ತೆ ಸಂಪರ್ಕ ಕಲ್ಪಿಸುವುದು ನನ್ನ ಆದ್ಯತೆ ಎಂದು ಶಾಸಕ ದುರ್ಯೋಧನ ಐಹೊಳೆ ಹೇಳಿದರು. 

ತಾಲೂಕಿನ ಕಬ್ಬೂರಹಿಕೆಂಚನಟ್ಟಿ ರಸ್ತೆ ಹಾಗೂ ಮೀರಾಪೂರಹಟ್ಟಿಹಿಮಾಡಲಗಿ ರಸ್ತೆ ಕಾಮಗಾರಿಗಳಿಗೆ ಚಾಲನೆ ನೀಡಿದ ಬಳಿಕ ಅವರು ಮಾತನಾಡಿ, ಈ ಎರಡೂ ರಸ್ತೆ ಕಾಮಗಾರಿಗಳಿಗೆ ತಲಾ 50 ಲಕ್ಷ ರೂ., ಒಟ್ಟು 1 ಕೋಟಿ ರೂ. ಅನುದಾನವನ್ನು ಸರ್ಕಾರದಿಂದ ಮಂಜೂರಾಗಿದೆ ಇದರಿಂದ ಜನರ ದೀರ್ಘಕಾಲದ ಬೇಡಿಕೆಗೆ ಸ್ಪಂದಿಸಿರುವುದಾಗಿ ತಿಳಿಸಿದರು. 

ಗ್ರಾಮೀಣ ಜನತೆಯ ಬದುಕಿಗೆ ರಸ್ತೆ ಅವಶ್ಯಕ. ಉತ್ತಮ ರಸ್ತೆ ಇದ್ದರೆ ಶಿಕ್ಷಣ, ಆರೋಗ್ಯ, ವ್ಯಾಪಾರ, ಕೃಷಿ ಎಲ್ಲವೂ ಸುಗಮವಾಗುತ್ತದೆ. ಅಭಿವೃದ್ಧಿಯ ಬಾಗಿಲು ರಸ್ತೆ ಮೂಲಕವೇ ತೆರೆಯುತ್ತದೆ. ಆದ್ದರಿಂದ ಪ್ರತಿಯೊಂದು ಗ್ರಾಮಕ್ಕೂ ಗುಣಮಟ್ಟದ ರಸ್ತೆ ಒದಗಿಸುವುದು ನನ್ನ ಕರ್ತವ್ಯ ಎಂದು ಅಭಿಪ್ರಾಯಪಟ್ಟರು. 

ಈ ವೇಳೆ ದುರೀಣ  ಸುರೇಶ ಬೆಲ್ಲದ, ಮಹಾದೇವ ಜಿವಣಿ, ಬಸಲಿಂಗ ಕಾಡೇಶಗೋಳ, ಕೆಂಚ್ಚಪ್ಪ ಕಾಮಗೌಡ, ಶ್ರೀಶೈಲ ತೇರದಾಳೆ, ಮಹಾದೇವ ಪ್ರದಾನಿ, ಜೆ.ಆರ್‌.ಪಾಟೀಲ, ವರ್ದಮಾನ ಖೆಮಲಾಪುರೆ, ಮಲ್ಲು ಜಿವನಿ, ಸುನಿಲ ಇನಾಮದಾರ, ವಿಠ್ಠಲ ಕುಕನೂರ, ಶಿವನಂದ ಮಠಪತಿ, ಎಸ್‌.ಎಸ್,ಹೊಸಮನಿ, ಮಾರುತಿ ಹುಡೇದ, ಶ್ರೀಶೈಲ ತಲ್ಲೂರ, ಮಾಹಾದೇವ ಹುಡೇದ, ಕೃಷ್ಟ ಮದರ, ಅಶೋಕ ರೊಟ್ಟಿ, ರಮೇಶ ಖಿಲಾರಿ, ಗುರುನಾಥ ಪಾಟೀಲ, ಸುರೇಶ ಖಜಿಡೋಣಿ, ಅಜೀತ ಖೋತ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. 


ಸುದ್ದಿ ಓದಿ