ಪುರಾಣ ಪ್ರವಚನ ಆಲಿಸುವುದರಿಂದ ಜೀವನ ಪಾವನ
Listening to the Puranas purifies life.
ಲೋಕದರ್ಶನ ವರದಿ
ತಾಳಿಕೋಟಿ 23: ಶಿರಹಟ್ಟಿಯ ಫಕೀರೇಶ್ವರ ಸ್ವಾಮೀಜಿಯವರು ಮಹಾನ್ ಸಂತರಾಗಿದ್ದು ಹಿಂದೂ-ಮುಸ್ಲಿಂ ಭಾವೈಕ್ಯತೆಯ ಹರಿಕಾರರಾಗಿದ್ದಾರೆ ಎಂದು ಗುಂಡಕನಾಳ ಸಂಸ್ಥಾನ ಬ್ರಹನ್ಮಠದ ಷ.ಬ್ರ.ಗುರುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು. ತಾಲೂಕಿನ ಬಂಡೆಪ್ಪನಹಳ್ಳಿ ಗ್ರಾಮದ ದೈವವಾದ ಬಂಡಿಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡ "ಶ್ರೀ ಶಿರಹಟ್ಟಿ ಫಕೀರೇಶ್ವರ ಮಹಾಪುರಾಣ" ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಆಶೀರ್ವನ ನೀಡಿದರು. ಇಂತಹ ಮಹಾನ್ ಸಂತರ ಜೀವನ ಚರಿತ್ರೆಯನ್ನು ತಿಳಿದುಕೊಳ್ಳುವುದರಿಂದ ನಮಗೆ ಧರ್ಮಗಳ ನಿಜವಾದ ಅರ್ಥವು ತಿಳಿದು ಸಹಬಾಳ್ವೆ ನಡೆಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ವಿಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ಎಸ್.ಪಾಟೀಲ(ಯಾಳಗಿ) ಮಾತನಾಡಿ ಪುರಾಣ ಪ್ರವಚನಗಳನ್ನು ಆಲಿಸುವುದರಿಂದ ಸನ್ಮಾರ್ಗದಲ್ಲಿ ನಡೆಯಲು ಸಾಧ್ಯವಾಗುತ್ತದೆ ಮೇ 1ರವರೆಗೆ ನಡೆಯಲಿರುವ ಈ ಪುರಾಣ ಕಾರ್ಯಕ್ರಮದ ಸದುಪಯೋಗವನ್ನು ತಾವೆಲ್ಲರೂ ಮಾಡಿಕೊಳ್ಳಬೇಕು ಎಂದರು. ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ಆರ್.ಎಸ್.ಪಾಟೀಲ(ಕೂಚಬಾಳ), ವಿಶ್ವನಾಥ ಜಹಗೀರದಾರ ಹಾಗೂ ಸಾಹಿತ್ಯ ಶ್ರೀಕಾಂತ ಪತ್ತಾರ ಮಾತನಾಡಿದರು. ತಾಳಿಕೋಟಿಯ ವಿಭೂತಿಮಠದ ಮಹಾಂತದೇವರು ಪುರಾಣ ಕಾರ್ಯಕ್ರಮ ನಡೆಸಿಕೊಟ್ಟರು. ಸಂಗೀತ ಶಿಕ್ಷಕ ಬಸವರಾಜ ಬಂಟನೂರ ಹಾಗೂ ಸಂಗಡಿಗರು ಸಂಗೀತ ಸೇವೆಗೈದರು. ವೇದಿಕೆಯಲ್ಲಿ ಬಂಡೆಪ್ಪನಹಳ್ಳಿ ಸಣ್ಣಕೆಪ್ಪ ದೊಡ್ಡ ಪೂಜಾರಿ, ನಿಂಗಣ್ಣ ಸಣ್ಣಪೂಜಾರಿ,ಬಿ.ಬಿ.ಚೋಕಾವಿ,ವಿಜು ಗಬಸಾವಳಗಿ, ಶಶಿಧರ ಹಿರೇಮಠ ಇದ್ದರು. ಕಾರ್ಯಕ್ರಮದಲ್ಲಿ ಬಂಡೆಪ್ಪನಹಳ್ಳಿ ಹಾಗೂ ಬಿ. ಸಾಲವಾಡಗಿ ಗ್ರಾಮದ ಭಕ್ತಾದಿಗಳು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 