ರಾತ್ರಿಯ ವೇಳೆ ಚಿರತೆ ಸಂಚಾರ: ಅರಣ್ಯ ಇಲಾಖೆ ಮುನ್ನೆಚ್ಚರಿಕೆ

 ರಾತ್ರಿಯ ವೇಳೆ ಚಿರತೆ ಸಂಚಾರ: ಅರಣ್ಯ ಇಲಾಖೆ ಮುನ್ನೆಚ್ಚರಿಕೆ  Leopard movement at night: Forest Department issues advisory

ಲೋಕದರ್ಶನ ವರದಿ 

ದಾಂಡೇಲಿ  08: ಸುತ್ತಮುತ್ತಲಿನ ಗ್ರಾಮ ಹಾಗೂ ನಗರ ಪ್ರದೇಶಗಳಲ್ಲಿ ಇತ್ತೀಚೆಗೆ ರಾತ್ರಿಯ ವೇಳೆ ಚಿರತೆಗಳ ಸಂಚಾರ ಕಂಡುಬರುತ್ತಿರುವುದು ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ. ಚಿರತೆಗಳು ಕಾಣಿಸಿಕೊಂಡಿರುವ ಬಗ್ಗೆ ಹಲವು ಬಾರಿ ಗಮನಕ್ಕೆ ಬಂದಿದ್ದರೂ, ಇದುವರೆಗೆ ಮಾನವರ ಮೇಲೆ ದಾಳಿ ನಡೆದಿರುವ ಬಗ್ಗೆ ಯಾವುದೇ ಘಟನೆ ವರದಿಯಾಗಿಲ್ಲ.  

ಕಾಡಂಚಿನ ಪ್ರದೇಶಗಳಲ್ಲಿ ಬೀದಿ ನಾಯಿಗಳ ಸಂಖ್ಯೆ ಹೆಚ್ಚಿರುವುದು ಚಿರತೆಗಳು ಜನವಸತಿ ಪ್ರದೇಶಗಳತ್ತ ಬರಲು ಪ್ರಮುಖ ಕಾರಣವಾಗಿರಬಹುದು ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ. ರಾತ್ರಿ ವೇಳೆ ಬೀದಿ ನಾಯಿಗಳು ಸುಲಭವಾಗಿ ದೊರೆಯುವ ಬೇಟೆಯಾಗಿರುವುದರಿಂದ, ಆಹಾರ ಅರಸಿ ಚಿರತೆಗಳು ಗ್ರಾಮ ಹಾಗೂ ನಗರ ಪ್ರದೇಶಗಳತ್ತ ಬರುತ್ತಿವೆ ಎನ್ನಲಾಗಿದೆ.  

ಚಿರತೆಗಳ ಸಂಚಾರವನ್ನು ಸಂಪೂರ್ಣವಾಗಿ ತಡೆಯುವುದಕ್ಕಿಂತ ಅವು ಮಾನವ ವಸತಿ ಪ್ರದೇಶಗಳಿಗೆ ಆಕರ್ಷಿತರಾಗದಂತೆ ಪರಿಸರ ನಿರ್ವಹಣೆ, ಬೀದಿ ನಾಯಿಗಳ ನಿಯಂತ್ರಣ ಹಾಗೂ ರಾತ್ರಿ ಅನಗತ್ಯ ಸಂಚಾರಕ್ಕೆ ಕಡಿವಾಣ ಹಾಕುವುದು ಹೆಚ್ಚು ಪರಿಣಾಮಕಾರಿ ಕ್ರಮವಾಗಿದೆ.