ಮಹಿಳೆಯರಿಗೆ ಕಾನೂನು ಅರಿವು ಅವಶ್ಯಕ
Legal awareness is essential for women
ಲೋಕದರ್ಶನ ವರದಿ
ಗಜೇಂದ್ರಗಡ 18 : ಕಾನೂನಿನ ಜ್ಞಾನದಿಂದ ಅನ್ಯಾಯಗಳನ್ನು ಎದುರಿಸಲು ಸಾಧ್ಯವಾಗುತ್ತದೆ. ಕಾನೂನು ಅರಿವು ಪ್ರತಿಯೊಬ್ಬರ ಜೀವನದಲ್ಲಿ ಅತ್ಯಂತ ಅಗತ್ಯವಾಗಿದೆ. ಭಾರತದಲ್ಲಿ ಮಕ್ಕಳು ಮತ್ತು ಮಹಿಳೆಯರರಿಗೆ ವಿಶೇಷ ಕಾನುನೂಗಳಿವೆ. ಆದ್ದರಿಂದ ಮಹಿಳೆಯರು ಕಾನೂನನ್ನು ತಿಳಿದುಕೊಂಡು ಮಹಿಳೆಯರ ಮೇಲೆ ನಡೆಯುವ ಕಾನೂನು ಬಾಹಿರ ಚಟುವಟಿಕೆಗಳಿಗೆ ಮತ್ತು ದೌರ್ಜನ್ಯಗಳಿಗೆ ಧ್ವನಿ ಎತ್ತಿ ನಿಲ್ಲಬೇಕುಎಂದು ನ್ಯಾಯವಾದಿ ದಾವಲಸಾಬ ತಾಳಿಕೋಟಿ ಹೇಳಿದರು.ಪಟ್ಟಣದ ಶಿವಾಜಿ ಪೇಟೆಯಲ್ಲಿ ಜ್ಞಾನವಿಕಾಸ ಕೇಂದ್ರದಿಂದ ಆಯೋಜಿಸಿದ್ದ ಮಹಿಳಾ ಕಾನೂನುಗಳ ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
“ಮಹಿಳೆಯರು ಸಮಾಜದ ಭಾಗವಾಗಿದ್ದು, ಅವರಗೌರವ, ಸುರಕ್ಷತೆ ಮತ್ತು ಸಮಾನತೆಕಾಪಾಡಲು ಕಾನೂನು ಅತ್ಯಂತ ಪ್ರಮುಖಪಾತ್ರ ವಹಿಸುತ್ತದೆ. ಕಾನೂನು ಅರಿವು ಮಹಿಳೆಯರಿಗೆ ಆತ್ಮ ವಿಶ್ವಾಸ ನೀಡುವುದುರಜೊತೆಗೆತಮ್ಮ ಹಕ್ಕುಗಳನ್ನು ರಕ್ಷಸಿಕೊಳ್ಳಲು ಶಕ್ತಿಯನ್ನುಒದಗಿಸುತ್ತದೆ. ಕಾನೂನು ಮಹಿಳೆಯರಿಗೆ ಶಿಕ್ಷಣ ಉದ್ಯೋಗ ಆಸ್ತಿ ಮದುವೆ ಮತ್ತು ವಿಚ್ಛೇದನ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಮಹಿಳೆಯರ ಹಕ್ಕುಗಳನ್ನು ಕಾನೂನು ಸ್ವಸ್ಥವಾಗಿ ಗುರುತಿಸಿದೆ” ಎಂದು ಹೇಳಿದರು.
ಗೃಹಹಿಂಸೆ ತಡೆಕಾಯ್ದೆ 2005, ಲೈಂಗಿಕ ಕಿರುಕುಳ ತಡೆಕಾಯ್ದೆ 2013, ಸಮಾನ ವೇತನಕಾಯ್ದೆ, ವರದಕ್ಷಿಣೆ ನಿಷೇಧಕಾಯ್ದೆ, ಇನ್ನು ಮುಂತಾದ ಕಾನುನೂಗಳು ಮಹಿಳೆಯರ ಮೇಲೆ ನಡೆಯುವ ಹಿಂಸೆ ಮತ್ತುದೌರ್ಜನ್ಯವನ್ನುತಡೆಯಲು ಸಹಾಯವಾಗಿದೆ” ಎಂದು ಕಾಯಿದೆಗಳ ಬಗ್ಗೆ ಸವಿಸ್ತಾರವಾಗಿ ತಿಳಿಸಿಕೊಟ್ಟರು.“ಅನ್ಯಾಯ ಸಂಭವಿಸಿದಾಗ ಪೊಲೀಸ್ಠಾಣೆ. ನ್ಯಾಯಾಲಯ, ಮಹಿಳಾ ಆಯೋಗ, ಕಾನೂನು ಸೇವಾ ಪ್ರಾಧಿಕಾರಿಗಳ ಮೂಲಕ ನ್ಯಾಯ ಪಡೆಯಲ್ಲು ಕಾನೂನು ಮಹಿಳೆಯರಿಗೆ ಅವಕಾಶ ಕಲ್ಪಸುತ್ತದೆ” ಎಂದು ತಿಳಿಸಿದರು. ಕಾರ್ಯಕ್ರಮದಲಿ ್ಲ ಜ್ಞಾನ ವಿಕಾಸ ಕೇಂದ್ರದ ಅಧ್ಯಕ್ಷೆ ರೇಣುಕಾ ಗೌಡರ, ಸೇವಾಪ್ರತಿನಿಧಿ ಕವಿತಾ ಕೋಟಗಿ, ರೋಣ ತಾಲೂಕಿನ ಜ್ಞಾನವಿಕಾಸ ಸಮನ್ವಯಾಧಿಕಾರಿ ಲಕ್ಷ್ಮೀ, ಸಂಘದ ಸದಸ್ಯರಾದ ರೇಖಾ ಎಲಿಗಾರ, ಅನ್ನಪೂರ್ಣ ಕಂಬಳಿ, ಗಂಗಮ್ಮ, ಲಾಲಬಿ ತಾಳಿಕೋಟಿ, ವಿಜಯಲಕ್ಷ್ಮಿ, ಜಯಶ್ರೀ, ಪಾರಮ್ಮ ಬೊಯಿಟೆ ಸೇರಿದಂತೆ ಇತರ ಸದಸ್ಯರು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 