ವಿದ್ಯಾರ್ಥಿನಿಯರಿಗೆ ಋತುಚಕ್ರ, ಆರೋಗ್ಯ ಕುರಿತು ಉಪನ್ಯಾಸ

ವಿದ್ಯಾರ್ಥಿನಿಯರಿಗೆ ಋತುಚಕ್ರ, ಆರೋಗ್ಯ ಕುರಿತು ಉಪನ್ಯಾಸ  Lecture for female students on menstruation and health


ತಾಳಿಕೋಟಿ 23 : ಪಟ್ಟಣದ ಸರ್ವಜ್ಞ ವಿದ್ಯಾಪೀಠ ಕನ್ನಡ ಮತ್ತು ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿನಿಯರಿಗಾಗಿ ಕರ್ನಾಟಕ ರಾಜ್ಯ ಪ್ರಸೂತಿ ಹಾಗೂ ಸ್ತ್ರೀರೋಗ ಸಂಘದ ಸಹಯೋಗದಲ್ಲಿ ಋತುಚಕ್ರ, ಆಹಾರ ಪದ್ಧತಿ, ಆರೋಗ್ಯ ಮತ್ತು ವಿದ್ಯಾರ್ಥಿನಿಯರಿಗೆ ಸಂಬಂಧಿಸಿದ ವಿಷಯಗಳ ಕುರಿತು ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಡಾ. ಗಂಗಾಂಬಿಕಾ ಪಾಟೀಲ, ಡಾ. ವಿಜಯಲಕ್ಷ್ಮಿ ಹಜೇರಿ ಹಾಗೂ ಡಾ. ಮಧುಬಾಲಾ ಸಿಂಘಾಲ ಅವರು ಆರೋಗ್ಯಕರ ಜೀವನಶೈಲಿ, ಋತುಚಕ್ರದ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆಗಳು ಹಾಗೂ ಬೊಜ್ಜು ತಡೆಗಟ್ಟುವ ವಿಧಾನಗಳ ಕುರಿತು ವಿದ್ಯಾರ್ಥಿನಿಯರಿಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಡಾ. ಸರೋಜಾ ವಿಜಯಕುಮಾರ ಕಾರ್ಚಿ, ಡಾ. ಪ್ರಿಯಾ ಆನಂದ ಭಟ್, ಸರ್ವಜ್ಞ ವಿದ್ಯಾಪೀಠದ ಸಂಸ್ಥಾಪಕ ಅಧ್ಯಕ್ಷ ಸಿದ್ಧನಗೌಡ ಬಿ. ಮಂಗಳೂರ, ಮುಖ್ಯಗುರು ಸಂತೋಷ ಪವಾರ, ಶಿಕ್ಷಕರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು. ಕುಮಾರಿ ಸ್ವಪ್ನ ದೇಸಾಯಿ ಮತ್ತು ಸ್ವರ್ಣ ಕುಲಕರ್ಣಿ ಪ್ರಾರ್ಥನೆ ಗೀತೆ ಹಾಡಿದರು. ಶಿಕ್ಷಕ ರಾಜು ಜವಳಗೇರಿ ಕಾರ್ಯಕ್ರಮ ನಿರೂಪಿಸಿದರು.