ಮುಂಗಾರು ಬೆಳೆ ವಿಮೆಗೆ ಜುಲೈ 31 ಕೊನೆಯ ದಿನ: ರೈತರು ನೋಂದಣಿ ಮಾಡಿಸಿಕೊಳ್ಳಲು ಮನವಿ

ಮುಂಗಾರು ಬೆಳೆ ವಿಮೆಗೆ ಜುಲೈ 31 ಕೊನೆಯ ದಿನ: ರೈತರು ನೋಂದಣಿ ಮಾಡಿಸಿಕೊಳ್ಳಲು ಮನವಿ  Last date for monsoon crop insurance is July 31: Farmers urged to register

ಲೋಕದರ್ಶನ ವರದಿ  

ಮುಂಡಗೋಡ 01 : 2026ನೇ ಸಾಲಿನ ಮುಂಗಾರು ಹಂಗಾಮಿಗೆ ಮರುವಿನ್ಯಾಸಗೊಳಿಸಿದ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆ ಅಡಿಯಲ್ಲಿ ರೈತರ ನೋಂದಣಿ ಪ್ರಕ್ರಿಯೆ ಆರಂಭಗೊಂಡಿದ್ದು, ಅರ್ಹ ರೈತರು ಜುಲೈ 31ರೊಳಗೆ ನೋಂದಣಿ ಮಾಡಿಸಿಕೊಳ್ಳುವಂತೆ ತೋಟಗಾರಿಕೆ ಇಲಾಖೆ ಮನವಿ ಮಾಡಿದೆ. ಕರ್ನಾಟಕ ಸರ್ಕಾರದ ಆದೇಶದಂತೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂಡಸ್‌ಇಂಡ್ ಜನರಲ್ ಇನ್ಷೂರೆನ್ಸ್‌ ಕಂಪನಿಯನ್ನು ಅಧಿಸೂಚಿತ ವಿಮಾ ಅನುಷ್ಠಾನ ಸಂಸ್ಥೆಯಾಗಿ ನೇಮಕ ಮಾಡಲಾಗಿದೆ. ಮುಂಡಗೋಡ ತಾಲೂಕಿನಲ್ಲಿ ಅಡಿಕೆ, ಮಾವು ಹಾಗೂ ಶುಂಠಿ ಬೆಳೆಗಳನ್ನು ಬೆಳೆಯುವ ರೈತರಿಗೆ ಈ ಯೋಜನೆಯಡಿ ಬೆಳೆ ವಿಮೆ ಸೌಲಭ್ಯ ದೊರೆಯಲಿದೆ.  

ಬೆಳೆ ಸಾಲ ಪಡೆದಿರುವ ಹಾಗೂ ಸಾಲ ಪಡೆಯದ ರೈತರು ಸಹ ಯೋಜನೆಯ ಲಾಭ ಪಡೆಯಬಹುದಾಗಿದೆ. ವಿಮೆಗೆ ನೋಂದಾಯಿಸಿಕೊಳ್ಳಲು ರೈತರು ಕಡ್ಡಾಯವಾಗಿ ಈಋ ಹೊಂದಿರಬೇಕು. ಅಲ್ಲದೆ, ನಿಗದಿತ ಅರ್ಜಿ ನಮೂನೆ, ಬ್ಯಾಂಕ್ ಪಾಸ್ಬುಕ್ ಪ್ರತಿ, ಬೆಳೆ ವಿವರ ಹೊಂದಿರುವ ಪಹಣಿ, ಸ್ವಯಂ ದೃಢೀಕರಣ ಪತ್ರ, ನಾಮಿನಿ ವಿವರ ಹಾಗೂ ಆಧಾರ್ ಕಾರ್ಡ್‌ ಪ್ರತಿಯೊಂದಿಗೆ ಬ್ಯಾಂಕ್, ಸಾಮಾನ್ಯ ಸೇವಾ ಕೇಂದ್ರ ಅಥವಾ ಗ್ರಾಮ್ ಒನ್ ಕೇಂದ್ರಗಳಲ್ಲಿ ನೋಂದಣಿ ಮಾಡಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಮುಂಡಗೋಡ ತಾಲ್ಲೂಕು ತೋಟಗಾರಿಕೆ ಇಲಾಖೆ ಕಚೇರಿ ಅಥವಾ ಸಮೀಪದ ಬ್ಯಾಂಕ್, ಸಾಮಾನ್ಯ ಸೇವಾ ಕೇಂದ್ರ ಹಾಗೂ ಗ್ರಾಮ್ ಒನ್ ಕೇಂದ್ರಗಳನ್ನು ಸಂಪರ್ಕಿಸುವಂತೆ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ (ಜಿ.ಪಂ.)  ಕೃಷ್ಣಾ ಟಿ. ಕುಳ್ಳೂರ ತಿಳಿಸಿದ್ದಾರೆ.