ವಿವಾಹಿತೆಯ ಜೊತೆ ಪಲಾಯನ ಮಾಡಿದ ಯುವಕನ ಮನೆ ಧ್ವಂಸ : ಮಾರಕಾಸ್ತ್ರ ಹಿಡಿದು 50ಕ್ಕು ಹೆಚ್ಚು ಜನರಿಂದ ಕೃತ್ಯ
ಬೆಳಗಾವಿ : ವಿವಾಹಿತೆಯನ್ನು ಪಲಾಯ ಮಾಡಿದ ಯುವಕನ ಮನೆಯನ್ನು ಸುಮಾರು 50ಕ್ಕು ಹೆಚ್ವು ಜನರಿದ್ದ ತಂಡವು ಕೈಯಲ್ಲಿ ಮಾರಕಾಸ್ತ್ರ ಹಿಡಿದು ಬಂದು ಮನೆಯನ್ನು ಸಂಪೂರ್ಣ ದ್ವಂಸ ಮಾಡಿರುವ ಘಟನೆ ಬೆಳಗಾವಿ ತಾಲೂಕಿನ ಭರಮ್ಯಾನಟ್ಟಿ ಗ್ರಾಮದಲ್ಲಿ ನಡೆದ ಹೇಯ ಕೃತ್ಯ ನಡೆದಿದೆ.
ಮಗ ಮಾಡಿದ ತಪ್ಪಿಗೆ ಮನೆಯನ್ನೇ ಧ್ವಂಸ ಮಾಡಿರುವ ಕಿಡಿಗೇಡಿಗಳು ಮಾರಕಾಸ್ತ್ರ ಸಮೇತ 50ಕ್ಕೂ ಅಧಿಕ ಜನರಿಂದ ಯುವಕನ ಮನೆ ಮೇಲೆ ದಾಳಿ ನಡೆದಿದೆ ಬೆಳಗಾವಿ ತಾಲೂಕಿನ ಭರಮ್ಯಾನಟ್ಟಿ ಗ್ರಾಮದಲ್ಲಿ ನಡೆದ ಹೇಯ ಕೃತ್ಯ ಇದಾಗಿದೆ. ತಳವಾರ, ಜಂಬೆ, ಕುಡಗೋಲು, ಬಡಿಗೆ ಸಮೇತ ಆಗಮಿಸಿ ದುಷ್ಕರ್ಮಿಗಳ ಅಟ್ಟಹಾಸ ಮೆರೆದಿದ್ದಾರೆ.
ಮನೆಯಲ್ಲಿದ್ದ ಯುವಕನ ಕುಟುಂಬಸ್ಥರ ಹತ್ಯೆಗೆ ದುಷ್ಕರ್ಮಿಗಳ ಯತ್ನ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ವಿವಾಹಿತೆಯ ಪೋಷಕರು, ಪತಿಯ ಪೋಷಕರಿಂದ ಯುವಕನ ಮನೆ ಮೇಲೆ ದಾಳಿ ನಡೆದಿದೆ ಎನ್ನಲಾಗಿದೆ.
ವಿವಾಹಿತೆ ನಾಗವ್ವ ಜೊತೆಗೆ ಎರಡು ದಿನಗಳ ಹಿಂದೆ ಯಲ್ಲಪ್ಪ ನಾಯಿಕ ಎಂಬ ಯುವಕ ಓಡಿ ಹೋಗಿರುವ ಹೋಗಿದ್ದಾನೆ. ಕಳೆದ ವರ್ಷವಷ್ಟೇ ನಾಗವ್ವ ನಾಯಕ ಈತಳ ಮದುವೆ ಬಸಪ್ಪ ನಾಯಕ ಜೊತೆಗೆ ಆಗಿತ್ತು.
ಬಸಪ್ಪ ನಾಯಕ ಹಾಗೂ ಯಲ್ಲಪ್ಪ ನಾಯಕ ಇಬ್ಬರೂ ಆತ್ಮೀಯ ಸ್ನೇಹಿತರಾಗಿದ್ದರು. ಬೆಳಗಾವಿಯ ಉದ್ಯಮಭಾಗದಲ್ಲಿ ಒಂದೇ ಕಂಪನಿಯಲ್ಲಿ ಬಸಪ್ಪ ದಂಪತಿ, ಯಲ್ಲಪ್ಪ ನಾಯಕ ಕೆಲಸ ಮಾಡ್ತಿದ್ದರು. ಉದ್ಯಮಭಾಗದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡ್ತಿದ್ದ ಮೂವರು
ಈ ವೇಳೆ ಸಲುಗೆ ಬೆಳೆದು ಯಲ್ಲಪ್ಪ ನಾಯಕ ಈತ ನಾಗವ್ವ ಜೊತೆಗೆ ಓಡಿ ಹೋಗಿದ್ದಾನೆ. ಇದರಿಂದ ಆಕ್ರೋಶಗೊಂಡು ಯಲ್ಲಪ್ಪ ನಾಯಕ ಕುಟುಂಬಸ್ಥರನ್ನು ಟಾರ್ಗೆಟ್ ಮಾಡಿ ದಾಳಿ ಮಾಡಲಾಗಿದೆ.
ಈ ದಾಳಿ ವೇಳೆ ಮನೆಯ ಹಂಚುಗಳು ಪುಡಿ ಪುಡಿ, ಟ್ರಜುರಿ, ಟಿವಿ ದ್ವಂಸ ಮಾಡಲಾಗಿದೆ. ಯಲ್ಲಪ್ಪನ ಪೋಷಕರು ಓಡಿ ಹೋಗಿ ಪ್ರಾಣ ಉಳಿಸಿಕೊಂಡಿದ್ದಾರೆ.
ದಾಳಿ ನಂತರ ಮನೆಯಲ್ಲಿದ್ದ ಚಿನ್ನಾಭರಣ, ಹಣ, 25 ಕುರಿ ಜೊತೆಗೆ ದುಷ್ಕರ್ಮಿಗಳು ಪರಾರಿಯಾಗಿದ್ದಾರೆಂಬ ಆರೋಪ ಕೇಳಿಬಂದಿದೆ. ದಾಳಿಯ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕ್ಕಾಗಿ ಪೊಲೀಸ್ ಆಯುಕ್ತರ ಬಳಿ ಸಂತ್ರಸ್ತ ಕುಟುಂಬ ಕೈಚಾಚಿದೆ.