ಭೂಮಿ ವರ್ಗಾವಣೆ ಆರೋಪ: ದಾಖಲೆ ಪರೀಶೀಲನೆಗೆ ಉಮಾ ಆಗ್ರಹ

ಭೂಮಿ ವರ್ಗಾವಣೆ ಆರೋಪ: ದಾಖಲೆ ಪರೀಶೀಲನೆಗೆ ಉಮಾ ಆಗ್ರಹ  Land transfer allegations: Uma demands scrutiny of documents


         ಯಲಬುರ್ಗಾ   27: ಕುಟುಂಬಕ್ಕೆ ಸೇರಿದ 18 ಎಕರೆ 19 ಗುಂಟೆ ಜಮೀನು ಇತರರ ಹೆಸರಿಗೆ ವರ್ಗಾವಣೆಯಾಗಿದೆ ಎಂದು ಆರೋಪಿಸಿರುವ ಶ್ರೀಮತಿ ಉಮಾ, ಆಸ್ತಿ ದಾಖಲೆಗಳನ್ನು ಸಮಗ್ರವಾಗಿ ಪರೀಶೀಲಿಸಿ ಕಾನೂನುಬದ್ಧ ತನಿಖೆ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.  

         ಪಟ್ಟಣದ ವಿದ್ಯಾಸಾಗರ ಕಾಲೋನಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿರೇಮ್ಯಾಗೇರಿ ಗ್ರಾಮದ ಸರ್ವೆ ನಂ. 262ರ ಜಮೀನು ತಮ್ಮ ಪತಿ ದಿವಂಗತ ನರೇಂದ್ರ ಗದಗಿನಮಠ ಅವರ ಕುಟುಂಬಕ್ಕೆ ಸೇರಿದ್ದಾಗಿದೆ ಎಂದು ತಿಳಿಸಿದ್ದಾರೆ.

        ನರೇಂದ್ರ ಅವರು ಸರ್ಕಾರಿ ನೌಕರರಾಗಿದ್ದು, 2010ರ ಅಕ್ಟೋಬರ್ 4ರಂದು ನಿಧನರಾಗಿದ್ದಾರೆ. ಪತಿಯ ನಿಧನದ ಬಳಿಕ ಅನುಕಂಪದ ಆಧಾರದ ಮೇಲೆ ಸರ್ಕಾರಿ ನೌಕರಿಗೆ ಸೇರಿ ಮುಳಗುಂದದಲ್ಲಿ ವಾಸವಾಗಿದ್ದ ಕಾರಣ ಆಸ್ತಿ ದಾಖಲೆಗಳ ನಿರಂತರ ಪರೀಶೀಲನೆ ಸಾಧ್ಯವಾಗಿರಲಿಲ್ಲ ಎಂದು ಹೇಳಿದ್ದಾರೆ.  

         ಇತ್ತೀಚೆಗೆ ದಾಖಲೆಗಳನ್ನು ಪರೀಶೀಲಿಸಿದಾಗ, ಜಮೀನು ಪ್ರಸನ್ನ, ರೇಣುಕಾ ಹಾಗೂ ವಾಗೀಶ್ ಪಂಡಿತ್ ಅವರ ಹೆಸರಿಗೆ ಖಾತೆ/ವರ್ಗಾವಣೆಯಾಗಿರುವುದು ಕಂಡುಬಂದಿದೆ ಎಂದು ಉಮಾ ಆರೋಪಿಸಿದ್ದಾರೆ.