ನೂತನ ಸಿಪಿಐ ರಮೇಶ್ ಹನಾಪುರರಿಗೆ ಕುರುಬ ಸಮುದಾಯದ ಅಭಿನಂದನೆ
Kuruba community congratulates new CPI leader Ramesh Hanapura
ಲೋಕದರ್ಶನ ವರದಿ
ಮುಂಡಗೋಡ 21: ಇಲ್ಲಿನ ಪೊಲೀಸ್ ಠಾಣೆಗೆ ನೂತನ ಸಿಪಿಐ ಆಗಿ ಆಗಮಿಸಿರುವ ರಮೇಶ್ ಹನಾಪುರ ಅವರಿಗೆ ಕುರುಬ ಸಮುದಾಯದ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು. ಕುರುಬ ಸಮುದಾಯದ ಮುಖಂಡರು ಸಿಪಿಐ ರಮೇಶ್ ಹನಾಪುರ ಹಾಗೂ ಪಿಎಸ್ಐ ಮಂಜುನಾಥ್ ಗೌಡರ್ ಅವರಿಗೆ ಶಾಲು ಹೊದಿಸಿ ಗೌರವಿಸಿದರು. ಅವರ ಸೇವಾ ಅವಧಿಯಲ್ಲಿ ತಾಲೂಕಿನ ಜನತೆಗೆ ಉತ್ತಮ ಪೊಲೀಸ್ ಸೇವೆ ದೊರಕಲಿ ಎಂದು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಕುರುಬ ಸಮುದಾಯದ ಅಧ್ಯಕ್ಷ ಶಿವಾನಂದ ಕುರುಬರ, ರಾಜು ಗುಬ್ಬಕನವರ, ಎಸ್.ಎಸ್. ಪಾಟೀಲ, ಮಂಜುನಾಥ ಕೋಣಕೇರಿ, ಯಲ್ಲಪ್ಪ ಕುರುಬರ, ಬಸವರಾಜ ತನಕೇದಾರ, ಮಂಜು, ರವಿ ಮಲ್ಲೂರು ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 