ಮಕ್ಕಳಿದ್ದರೂ ಅನಾಥ ಸ್ಥಿತಿಯಲ್ಲಿ ಕೋಳಿವಾಡ ಕುಟುಂಬ
Koliwada family remains orphaned despite having children
ಗದಗ 29: ರಾಜೀವ್ ಗಾಂಧಿನಗರದ 75 ವರ್ಷದ ಮಹಾಂತೇಶ್ ಪರ್ಪ ಕೋಳಿವಾಡ ಅವರ ಕಷ್ಟಕರ ಬದುಕು ಇದೀಗ ಸಾರ್ವಜನಿಕ ಚರ್ಚೆಗೆ ಕಾರಣವಾಗಿದೆ. ವೃದ್ಧಾಪ್ಯದಲ್ಲಿಯೂ ಕುಟುಂಬದ ಹೊಣೆ ಹೊತ್ತು ಕೈಗಾಡಿ ಎಳೆಯುವ ಇವರ ಸ್ಥಿತಿ ಮನಕಲುಕುವಂತಿದೆ.
ಮಕ್ಕಳಿದ್ದರೂ ಕುಟುಂಬದ ಆಸರೆ ಇಲ್ಲದೆ, ಇಬ್ಬರು ಮೊಮ್ಮಕ್ಕಳ ಜವಾಬ್ದಾರಿಯೂ ಸೇರಿ ಐದು ಜನರ ಕುಟುಂಬದ ಹೊಣೆ ಈ ಹಿರಿಯ ಶ್ರಮಜೀವಿಯ ಮೇಲೆಯೇ ಬಿದ್ದಿದೆ. ದಿನವೂ ನಾಲ್ಕು ರಿಂದ ಐದು ಕ್ವಿಂಟಲ್ ಭಾರ ಹೊತ್ತು ಕೈಗಾಡಿ ಜಗ್ಗುವ ಮೂಲಕ ಅವರು ಜೀವನ ಸಾಗಿಸುತ್ತಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಮಗಳು ಮನೆ ಕೆಲಸದಿಂದ ಅಲ್ಪ ಆದಾಯ ತಂದುಕೊಡುತ್ತಿದ್ದರೆ, ಇನ್ನೊಬ್ಬ ಪುತ್ರ ಸ್ವತಂತ್ರ ಜೀವನ ನಡೆಸುತ್ತಿರುವ ಕಾರಣ ಕುಟುಂಬಕ್ಕೆ ಯಾವುದೇ ಸ್ಥಿರ ಆಸರೆ ಇಲ್ಲದಂತಾಗಿದೆ. ಪ್ರಸ್ತುತ ಸರ್ಕಾರದಿಂದ ದೊರೆಯುತ್ತಿರುವ ?1,200 ವೃದ್ಧಾಪ್ಯ ವೇತನ ಜೀವನಕ್ಕೆ ಸಾಕಾಗದ ಸ್ಥಿತಿಯಲ್ಲಿದೆ.
ಈ ಹಿನ್ನೆಲೆಯಲ್ಲಿ ಸಾಮಾಜಿಕ ಕಾರ್ಯಕರ್ತ ಕೃಷ್ಣಾ ಎಚ್. ಹಡಪದ ಹಾಗೂ ಹಿರಿಯ ಸಮಾಜ ಸೇವಕ ಹೀರಾಲಾಲ ಸಿಂಗ್ರಿ ಅವರು ಈ ಕುಟುಂಬವನ್ನು ‘ವಿಶೇಷ ಪ್ರಕರಣ’ವಾಗಿ ಪರಿಗಣಿಸಿ ಪ್ರತಿ ತಿಂಗಳು ?10,000 ವಿಶೇಷ ಮಾಸಾಶನ ಹಾಗೂ ವಾಸಸ್ಥಳ ನೀಡಬೇಕೆಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 