ವೇತನ ಹೆಚ್ಚಳ ಮತ್ತು ಹಿಂಬಾಕಿ ಪಾವತಿಗಾಗಿ ಕರ್ನಾಟಕ ರಸ್ತೆ ಸಾರಿಗೆ ನೌಕರರು ಮೇ 20ರಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ"

ವೇತನ ಹೆಚ್ಚಳ ಮತ್ತು ಹಿಂಬಾಕಿ ಪಾವತಿಗಾಗಿ ಕರ್ನಾಟಕ ರಸ್ತೆ ಸಾರಿಗೆ ನೌಕರರು ಮೇ 20ರಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ" Karnataka road transport employees to go on indefinite strike from May 20 for wage hike and arrears

ಲೋಕದರ್ಶನ ವರದಿ 

ಗದಗ 19:  ಸಾರಿಗೆ ನೌಕರರ ವೇತನ ಹೆಚ್ಚಳಕ್ಕಾಗಿ, ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರು ಮೇ 20ರಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ್ದು, ಆದರೆ ಸಾರ್ವಜನಿಕರಿಗೆ ತೊಂದರೆಯಾದಲ್ಲಿ ಇದಕ್ಕೆ ನೇರವಾಗಿ ಸರಕಾರವೇ ಹೊಣೆ ಎಂದು ಸಾರಿಗೆ ನೌಕರರ ಮುಖಂಡ ಶಾಂತಪ್ಪ ಮುಳವಾಡ ತಿಳಿಸಿದರು. ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ನೌಕರರ ಮೂಲ ವೇತನದಲ್ಲಿ ಶೇಕಡಾ 25 ರಷ್ಟು ಹೆಚ್ಚಳಕ್ಕೆ ಆಗ್ರಹವಿದ್ದು, ಈಗಾಗಲೇ ಸಾರಿಗೆ ಮಂತ್ರಿಗಳು ಏಕಪಕ್ಷೀಯವಾಗಿ 12.50ಅ ಪ್ರತಿಷತ  ಮಾಡರುವುದನ್ನ ನಾವು ವಿರೋಧಿಸುತ್ತೇವೆ. ನಮ್ಮ  ಬಹುದಿನಗಳ ಬೇಡಿಕೆ ಈಡೇರಿಸದ ಸರಕಾರ ಇದಕ್ಕೆ ನಮ್ಮ ಒಪ್ಪಿಗೆ ಇಲ್ಲ ಎಂದರು.

ನಮ್ಮ ಮುಷ್ಕರದಿಂದ ಸಾರ್ವಜನಿಕರಿಗೆ ತೊಂದರೆ ಆದಲ್ಲಿ ನೇರವಾಗಿ ಸರಕಾರವೇ ಹೊಣೆ.ನಮಗೆ ತುಂಬಾ ತೊಂದರೆ ಆಗಿದ್ದು ಸರಕಾರ ನಮ್ಮ ಮೇಲೆ ದಬ್ಬಾಳಿಕೆ ಮಾಡುತ್ತಿದೆ.ಬೇಡಿಕೆ ಈಡೇರಿಕೆಗೆ ನಮ್ಮ ಹೋರಾಟ ಅನಿವಾರ್ಯವಾಗಿದ್ದು, ನಮ್ಮ ಕುಟುಂಬದ ನಿರ್ವಹಣೆ ಕಷ್ಟಕರವಾಗಿದೆ. 38 ತಿಂಗಳುಗಳ ವೇತನ ಹಿಂಬಾಕಿ ಪಾವತಿಸಬೇಕೆಂದು ಸರಕಾರಕ್ಕೆ ಒತ್ತಾಯಿಸಿ ಈಗಾಗಲೇ ಹಮ್ಮಿಕೊಳ್ಳಲಾಗಿತ್ತು ಆದರೆ ಕಾರಣಾಂತರಗಳಿಂದ ಮೂಂದೂಡಲಾಗಿ ಸರಕಾರ ಕೇವಲ 26 ತಿಂಗಳುಗಳ ಹಿಂಬಾಕಿ ನೀಡುವುದಾಗಿ ಹೇಳುತ್ತಾ ಬಂದಿದೆ. ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರೀಯಾ ಸಮಿತಿ  4 ನಿಗಮಗಳ ವ್ಯವಸ್ಥಾಪಕ ನಿರ್ದೇಶಕರ ಜೊತೆಗೆ ಮಾತುಕತೆಗಳನ್ನ ನಡೆಸಿದರು ಯಾವುದೇ ಪ್ರಯೋಜನ ಆಗಿಲ್ಲ.

ಆದ್ದರಿಂದ ಅನಿವಾರ್ಯವಾಗಿ ಮೇ 20 ರಂದು ಮುಷ್ಕರ ನಡೆಸುವುದಾಗಿ ಸಾರಿಗೆ ಮುಖಂಡರು ತಿಳಿಸಿರುತ್ತಾರೆ ಅದಕ್ಕೆ ನಮ್ಮ ಬೆಂಬಲ ಇದೇ ಎಂದು ಶಾಂತಪ್ಪ ಮುಳವಾಡ ತಿಳಿಸಿದರು. ನ್ಯಾಯ ಮೂರ್ತಿಗಳಲ್ಲಿ ಮನವಿ ಮಾಡಿದ ಅವರು ನಮ್ಮ ಅನಾನೂಕೂಲಗಳ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಇದೇ ವೇಳೆ ಮನವಿ ಮಾಡಿದರು.                   ಪತ್ರಿಕಾ ಗೋಷ್ಠಿ ವೇಳೆ ಸಾರಿಗೆ ಇಲಾಖೆ ಮುಖಂರುಗಳಾದ ಆರ್ ಎಸ್ ಕಾಶಿಗೌಡ್ರ, ವಿ ಎಚ್ ರಾಮೇನಹಳ್ಳಿ, ಗೋಪಾಲ, ಎಂ ಆಂಜನೇಯ, ಎ ಕೆ ಕರಣಾಚಿ, ಶಿವಣ್ಣ ಕಟ್ಟಿ ಸೇರಿದಂತೆ ಇತರರಿದ್ದರು.