ವೇತನ ಹೆಚ್ಚಳ ಮತ್ತು ಹಿಂಬಾಕಿ ಪಾವತಿಗಾಗಿ ಸಾರಿಗೆ ನೌಕರರು ಮೇ 20ಕ್ಕೆ ಅನಿರ್ದಿಷ್ಟಾವಧಿ ಮುಷ್ಕರ
Transport employees to go on indefinite strike on May 20 for wage hike and back pay
ಲೋಕದರ್ಶನ ವರದಿ
ಗದಗ 19: ಸಾರಿಗೆ ನೌಕರರ ವೇತನ ಹೆಚ್ಚಳಕ್ಕಾಗಿ, ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯರಸ್ತೆ ಸಾರಿಗೆ ನೌಕರರು ಮೇ 20ರಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ್ದು, ಆದರೆ ಸಾರ್ವಜನಿಕರಿಗೆ ತೊಂದರೆಯಾದಲ್ಲಿ ಇದಕ್ಕೆ ನೇರವಾಗಿ ಸರಕಾರವೇ ಹೊಣೆ ಎಂದು ಸಾರಿಗೆ ನೌಕರರ ಮುಖಂಡ ಶಾಂತಪ್ಪ ಮುಳವಾಡ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ನೌಕರರ ಮೂಲ ವೇತನದಲ್ಲಿ ಶೇಕಡಾ 25 ರಷ್ಟು ಹೆಚ್ಚಳಕ್ಕೆ ಆಗ್ರಹವಿದ್ದು, ಈಗಾಗಲೇ ಸಾರಿಗೆ ಮಂತ್ರಿಗಳು ಏಕಪಕ್ಷೀಯವಾಗಿ 12.50ಅ ಪ್ರತಿಷತ ಮಾಡರುವುದನ್ನ ನಾವು ವಿರೋಧಿಸುತ್ತೇವೆ. ನಮ್ಮ ಬಹುದಿನಗಳ ಬೇಡಿಕೆ ಈಡೇರಿಸದ ಸರಕಾರಇದಕ್ಕೆ ನಮ್ಮಒಪ್ಪಿಗೆಇಲ್ಲ ಎಂದರು. ನಮ್ಮ ಮುಷ್ಕರದಿಂದ ಸಾರ್ವಜನಿಕರಿಗೆತೊಂದರೆಆದಲ್ಲಿ ನೇರವಾಗಿ ಸರಕಾರವೇ ಹೊಣೆ. ನಮಗೆ ತುಂಬಾತೊಂದರೆ ಆಗಿದ್ದು ಸರಕಾರ ನಮ್ಮ ಮೇಲೆ ದಬ್ಬಾಳಿಕೆ ಮಾಡುತ್ತಿದೆ. ಬೇಡಿಕೆ ಈಡೇರಿಕೆಗೆ ನಮ್ಮ ಹೋರಾಟ ಅನಿವಾರ್ಯವಾಗಿದ್ದು, ನಮ್ಮಕುಟುಂಬದ ನಿರ್ವಹಣೆ ಕಷ್ಟಕರವಾಗಿದೆ.
38 ತಿಂಗಳುಗಳ ವೇತನ ಹಿಂಬಾಕಿ ಪಾವತಿಸಬೇಕೆಂದು ಸರಕಾರಕ್ಕೆ ಒತ್ತಾಯಿಸಿ ಈಗಾಗಲೇ ಹಮ್ಮಿಕೊಳ್ಳಲಾಗಿತ್ತು ಆದರೆ ಕಾರಣಾಂತರಗಳಿಂದ ಮೂಂದೂಡಲಾಗಿ ಸರಕಾರ ಕೇವಲ 26 ತಿಂಗಳುಗಳ ಹಿಂಬಾಕಿ ನೀಡುವುದಾಗಿ ಹೇಳುತ್ತಾ ಬಂದಿದೆ.ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿಕ್ರೀಯಾ ಸಮಿತಿ 4 ನಿಗಮಗಳ ವ್ಯವಸ್ಥಾಪಕ ನಿರ್ದೇಶಕರಜೊತೆಗೆ ಮಾತುಕತೆಗಳನ್ನ ನಡೆಸಿದರು ಯಾವುದೇ ಪ್ರಯೋಜನಆಗಿಲ್ಲ. ಆದ್ದರಿಂದ ಅನಿವಾರ್ಯವಾಗಿ ಮೇ 20 ರಂದು ಮುಷ್ಕರ ನಡೆಸುವುದಾಗಿ ಸಾರಿಗೆ ಮುಖಂಡರು ತಿಳಿಸಿರುತ್ತಾರೆ ಅದಕ್ಕೆ ನಮ್ಮ ಬೆಂಬಲ ಇದೇಎಂದು ಶಾಂತಪ್ಪ ಮುಳವಾಡ ತಿಳಿಸಿದರು.
ನ್ಯಾಯ ಮೂರ್ತಿಗಳಲ್ಲಿ ಮನವಿ ಮಾಡಿದಅವರು ನಮ್ಮ ಅನಾನೂಕೂಲಗಳ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆಇದೇ ವೇಳೆ ಮನವಿ ಮಾಡಿದರು.ಪತ್ರಿಕಾ ಗೋಷ್ಠಿ ವೇಳೆ ಸಾರಿಗೆ ಇಲಾಖೆ ಮುಖಂರುಗಳಾದ ಆರ್ಎಸ್ ಕಾಶಿಗೌಡ್ರ, ವಿ ಎಚ್ ರಾಮೇನಹಳ್ಳಿ, ಗೋಪಾಲ, ಎಂ ಆಂಜನೇಯ, ಎ ಕೆ ಕರಣಾಚಿ, ಶಿವಣ್ಣ ಕಟ್ಟಿ ಸೇರಿದಂತೆ ಇತರರಿದ್ದರು.
ನೀಲಣ್ಣವರ ಪರ ಮಹಾರಾಷ್ಟ್ರದ ಹೂಡಿಕೆದಾರನ ಬ್ಯಾಟಿಂಗ್: ಪೊಲೀಸರ ವಿರುದ್ದ ಆಕ್ರೋಶದ ಅಡಿಯೊ ವೈರಲ್
ಒಳಚರಂಡಿಗೆ ನುಗ್ಗುತ್ತಿದೆ ಮಳೆಯ ನೀರು : ಗಲ್ಲಿಯಲ್ಲಾ ಗಬ್ಬು ವಾಸನೆ, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜನರ ಹಿಡಿಶಾಪ
ಭಾರಿ ಮಳೆ, ಗಾಳಿಯಿಂದ ಹಾರಿಹೋದ ಸರ್ಕಾರಿ ಶಾಲೆಗಳ ಮೇಲ್ಚಾವಣಿ : ಮರ ಕಂಬಗಳು ಧರೆಗೆ
ಅಗಲಿದ ಅನಾಥನಿಗೆ ಅಗ್ನಿಸ್ಪರ್ಶ ಮಾಡಿ ಆಪತ್ಭಾಂದವನಾದ ವಿಜಯ ಮೋರೆ: ಅಂತ್ಯಕ್ರಿಯೆಗೆ ಮಾರ್ಕೆಟ್ ಪೊಲೀಸರ ಸಾಥ್
ದ್ವಿಚಕ್ರವಾಹನ ಕಳ್ಳರ ಬಂಧನ : 6.10 ಲಕ್ಷ ಮೌಲ್ಯದ 14 ವಾಹನಗಳ ವಶಕ್ಕೆ ಎಸ್ ಪಿ ರಾಮರಾಜನ್
ಸಾವಿರಾರು ಕೋಟಿ ವಂಚನೆ, ವರ್ಗಾವಣೆ ಆರೋಪ: ಶಿವಾನಂದ ನೀಲಣ್ಣವರ ಬಂಧನ 