ವಿಜಯಪುರ

ಕಡಣಿ ಸೇತುವೆ ನಿರ್ಮಾಣ ಭೂಮಿ ಪೂಜೆ : ಜಾರಕಿಹೊಳಿ

ಕಡಣಿ ಸೇತುವೆ ನಿರ್ಮಾಣ ಭೂಮಿ ಪೂಜೆ : ಜಾರಕಿಹೊಳಿ

ಆಲಮೇಲ  26 :  ತಾಲೂಕಿನ ಕಡಣಿ ಯಿಂದ ಮಹಾರಾಷ್ಟ್ರಕ್ಕೆ ಸಂಪರ್ಕ ಹೊಂದಿರುವ ಬೀಮಾ ನದಿ ಸೇತುವೆ ಅನೇಕ  ವರ್ಷಗಳಿಂದ  ನೆನಗುದ್ದಿಗೆ ಬಿದ್ದಿದ ಬ್ರಿಡ್ಜ್‌ ಇಂದಿನ ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿ ಅವರ ಅಮೃತ ಹಸ್ತದಿಂದ ಭೂಮಿ ಪೂಜಾ ನೆರವೇರಿತು. ಲೋಕೋಪಯೋಗಿ ಇಲಾಖೆ ಉಪಯೋಗ 2026 - 26ನೇ ಸಾಲಿನ ಲೆಕ್ಕ ಶೀರ್ಷಿಕೆ  ಪ್ರಮುಖ ಸೇತುವೆಗಳು ಬಂಡವಾಳ ವೆಚ್ಚಗಳು ಅಡಿಯಲ್ಲಿ 44. 50 ಕೋಟಿ ಅನುದಾನ ಅಡಿಯಲ್ಲಿ ಪ್ರಾರಂಭಿಸಲಾಯಿತು. ಈ ಭಾಗದ ಜನರಿಗೆ ಅನುಕೂಲಕ್ಕಾಗಿ ಇಲ್ಲಿನ ಸ್ಥಳೀಯರು ಸೇತುವೆ ನಿರ್ಮಾಣದಿಂದ ಹರುಷ ವ್ಯಕ್ತಪಡಿಸಿದರು. ಇದೇ ವೇಳೆ ಸ್ಥಳೀಯ ರೈತರು ಹಳೆ ಸೇತುವೆ ಗೇಟ್ ಅಳವಡಿಸುವ ಕುರಿತು ರೈತರು ಬಿಜಾಪುರ ಉಸ್ತುವಾರಿ ಸಚಿವರಾದ ಎಂ. ಬಿ ಪಾಟೀಲ್ ಅವರಿಗೆ ಮನವಿ ನೀಡಿದರು.

ಬೇಸಿಗೆ ಕಾಲದಲ್ಲಿ ಜಾಲವಾರುಗಳಿಗೆ ಕೃಷಿ ಚಟುವಟಿಕೆ ಸಂಪೂರ್ಣ ಭೀಮಾ ನದಿಯಾದ ಒಳಹರಿವು ನೀರಿನ ಮಟ್ಟ ಬೇಸಿಗೆಯಲ್ಲಿ ಕಡಿಮೆಯಾಗುವ ಕಾರಣ ಗೇಟ್ ಅಳವಡಿಸಬೇಕು ಸಚಿವರಲ್ಲಿ ಮನವಿ ಮಾಡಿಕೊಂಡರು. ಸಿಂದಗಿ ಶಾಸಕರಾದ ಅಶೋಕ ಮನಗೂಳಿ ಅಲಮೇಲ್ ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ಸಾಧಿಕ್ ಸುಂಬುಡ. ಕಡಣಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಬಸವರಾಜ ತಾವರಗೇರಿ. ಹನುಮಂತರಾಯ ಕಳಸಗೊಂಡ. ಭೋಗಣ್ಣ ಲಾಳಸಂಗಿ.ರಾಜು ವಡ್ಡರ. ಎಸ್ ಡಿ ಎಂ ಸಿ ಅಧ್ಯಕ್ಷರಾದ ಶಿವಯೋಗಿ ಕತ್ತಿ. ಈರಣ್ಣ ಸುತಾರ  ಪ್ರಕಾಶ ಕಟ್ಟಿಮನಿ. ಅನೇಕ ರಾಜಕೀಯ ಮುಖಂಡರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು 


ಸುದ್ದಿ ಓದಿ