ಕೆಎಲ್‌ಎಸ್ ಐಎಂಇಆರ್ : ಬೆಳಗಾವಿಯಲ್ಲಿ ಭವ್ಯ ಯೋಗ ಸ್ಪರ್ಧೆ ಆಯೋಜನೆ

ಕೆಎಲ್‌ಎಸ್ ಐಎಂಇಆರ್ : ಬೆಳಗಾವಿಯಲ್ಲಿ ಭವ್ಯ ಯೋಗ ಸ್ಪರ್ಧೆ ಆಯೋಜನೆ  KLS IMER: Grand Yoga Competition organized in Belgaum

ಲೋಕದರ್ಶನ ವರದಿ 

 ಬೆಳಗಾವಿ ಜೂನ್ 6 : ಕೆಎಲ್‌ಎಸ್ ಐಎಂಇಆರ್, ಬೆಳಗಾವಿ ವತಿಯಿಂದ ಜೂನ್ 6, 2026 ರಂದು ಯಶಸ್ವಿಯಾಗಿ ಯೋಗ ಸ್ಪರ್ಧೆಯನ್ನು ಆಯೋಜಿಸಲಾಯಿತು. ಕರ್ನಾಟಕ ಹಾಗೂ ನೆರೆಯ ಮಹಾರಾಷ್ಟ್ರ ರಾಜ್ಯದ ವಿವಿಧಭಾಗಗಳಿಂದ ಆಗಮಿಸಿದ ಯೋಗಾಸಕ್ತರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿದ ಈಸ್ಪರ್ಧೆಗೆ ಅಭೂತ ಪೂರ್ವ ಸ್ಪಂದನೆ ದೊರೆಯಿತು. ಪುರುಷರು ಮತ್ತು ಮಹಿಳೆಯರಿಗಾಗಿ ಪ್ರತ್ಯೇಕವಾಗಿ ಆರು ವಿಭಾಗಗಳಲ್ಲಿ ನಡೆದ ಈ ಸ್ಪರ್ಧೆಯಲ್ಲಿ 180 ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿದರು.  

ಬೆಳಗಾವಿ, ಹುಬ್ಬಳ್ಳಿ, ಧಾರವಾಡ, ಕೊಪ್ಪಳ, ಮೈಸೂರು, ಬೆಂಗಳೂರು, ದಾವಣಗೆರೆ, ಗೋಕಾಕ್, ಬೈಲಹೊಂಗಲ, ಉತ್ತರಕನ್ನಡ, ಕೊಲ್ಹಾಪುರ, ಬಾಗಲಕೋಟೆ ಹಾಗೂ ಇತರೆ ಅನೇಕಸ್ಥಳಗಳಿಂದ ಆಗಮಿಸಿದ ಸ್ಪರ್ಧಿಗಳು ತಮ್ಮಪ್ರತಿಭೆ, ಶಿಸ್ತು ಮತ್ತು ಪ್ರಾಚೀನ ಯೋಗ ಕಲೆಯ ಮೇಲಿನ ಸಮರೆ​‍್ಣಯನ್ನು ಪ್ರದರ್ಶಿಸಿದರು.  

ಉದ್ಘಾಟನಾ ಸಮಾರಂಭಕ್ಕೆ ಖ್ಯಾತ ವೈದ್ಯರು ಹಾಗೂ ಯೋಗಾಸಕ್ತರಾದ ಡಾ. ದಿನಾನಾಥ ಪಾಟೀಲ ಮುಖ್ಯಅತಿಥಿಗಳಾಗಿ ಆಗಮಿಸಿದ್ದರು. ತಮ್ಮಭಾಷಣದಲ್ಲಿ ಅವರು ದೈಹಿಕ ಆರೋಗ್ಯ, ಮಾನಸಿಕ ನೆಮ್ಮದಿ ಮತ್ತು ಉತ್ತಮ ಜೀವನಮಟ್ಟವನ್ನು ಕಾಪಾಡಿಕೊಳ್ಳಲು ಯೋಗದ ಮಹತ್ವವನ್ನು ವಿವರಿಸಿದರು.  

ಶ್ರೀಮುರಳಿ ಪ್ರಭುಗೌರವ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ, ಎಲ್ಲಾವಯೋ ಮಾನದ ಜನರಲ್ಲಿ ಯೋಗಮತ್ತು ಆರೋಗ್ಯಕರಜೀವನ ಶೈಲಿಯನ್ನು ಉತ್ತೇಜಿಸುವಲ್ಲಿ ಕೆಎಲ್‌ಎಸ್‌ಐಎಂಇಆರ್ ಕೈಗೊಂಡಿರುವ ಪ್ರಯತ್ನಗಳನ್ನು ಶ್ಲಾಘಿಸಿದರು.  

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆಎಲ್‌ಎಸ್ ಐಎಂಇಆರ್ನ ನಿರ್ದೇಶಕರಾದ ಡಾ. ಆರಿಫ್ಶೇಖ್ವಹಿಸಿದ್ದರು. ಅವರುಸ್ಪರ್ಧಿಗಳನ್ನುಸ್ವಾಗತಿಸಿ, ಕ್ರೀಡೆ, ದೈಹಿಕಕ್ಷಮತೆ ಹಾಗೂಆರೋಗ್ಯ ಚಟುವಟಿಕೆಗಳ ಮೂಲಕ ಸಮಗ್ರವ್ಯಕ್ತಿತ್ವ ವಿಕಾಸಕ್ಕೆ ಉತ್ತೇಜನ ನೀಡುವಸಂಸ್ಥೆಯ ಬದ್ಧತೆಯನ್ನು ವಿವರಿಸಿದರು.  

ಈ ಕಾರ್ಯಕ್ರಮವನ್ನು ದೈಹಿಕ ಶಿಕ್ಷಣ ನಿರ್ದೇಶಕರಾದ ಶ್ರೀಪರ್ವತ ಗೌಡ ಸಂಕಪ್ಪನವರ್ ಅವರು ಸಮರ್ಥವಾಗಿ ಸಂಯೋಜಿಸಿದರು. ಗ್ರಂಥಾಲಯ ಸಿಬ್ಬಂದಿ ಹಾಗೂ ಇತರ ಸಿಬ್ಬಂದಿಯ ಸಮರ​‍್ಿತ ಸಹಕಾರದಿಂದ ಸ್ಪರ್ಧೆಯು ಸುಗಮವಾಗಿ ನಡೆಯಿತು ಮತ್ತು ಭಾಗವಹಿಸಿದ ಎಲ್ಲ ಸ್ಪರ್ಧಿಗಳು ಹಾಗೂ ಅತಿಥಿಗಳಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಯಿತು.  

ಈ ಸ್ಪರ್ಧೆಯು ಯೋಗಸಾಧಕರಿಗೆ ತಮ್ಮ ಕೌಶಲ್ಯವನ್ನು ಪ್ರದರ್ಶಿಸಲು, ಪರಸ್ಪರಜ್ಞಾನ ವಿನಿಮಯ ಮಾಡಿಕೊಳ್ಳಲುಹಾಗೂ ಆರೋಗ್ಯಕರ ಸ್ಪರ್ಧಾತ್ಮಕ ಮನೋಭಾವವನ್ನು ಬೆಳೆಸಿಕೊಳ್ಳಲು ಉತ್ತಮವೇದಿಕೆಯನ್ನು ಒದಗಿಸಿತು.  ಸ್ಪರ್ಧೆಯನ್ನು ಯಶಸ್ವಿಗೊಳಿಸಿದ ಎಲ್ಲಾ ಸ್ಪರ್ಧಿಗಳು, ಅತಿಥಿಗಳು, ತೀಪುಗಾರರು, ಸ್ವಯಂಸೇವಕರು ಹಾಗೂ ಬೆಂಬಲಿಗರಿಗೆ ಆಯೋಜಕರು ಹೃತ್ಪೂರ್ವಕ ಕೃತಜ್ಞತೆ.