ಕಾರವಾರ

ಜಮೀರ್ ದರ್ಗಾವಾಲೆ ಹತ್ಯೆ ಪ್ರಕರಣ : ಐವರ ಬಂಧನ

ಜಮೀರ್ ದರ್ಗಾವಾಲೆ ಹತ್ಯೆ ಪ್ರಕರಣ : ಐವರ ಬಂಧನ

ಕಾರವಾರ 26 : ರಿಯಲ್ ಎಸ್ಟೇಟ್  ಉದ್ಯಮಿ ಜಮೀರ್ ಅಹಮ್ಮದ್ ದರ್ಗಾವಾಲೆ ಹತ್ಯೆ ಪ್ರಕರಣದ ಐವರನ್ನು ಬೆಂಗಳೂರು ಸಮೀಪದ ನೆಲ ಮಂಗಲದ ಬಳಿ ಬಂಧಿಸಲಾಗಿದೆ. ಮುಂಡಗೋಡ ಪೊಲೀಸರು ಬಂಧಿತರನ್ನು ಮುಂಡಗೋಡಕ್ಕೆ ಕರೆ ತಂದಿದ್ದಾರೆ. ದರ್ಗಾವಾಲೆ ಹತ್ಯೆ ಸಂಬಂಧ 5 ಆರೋಪಿಗಳ ಬಂಧಿಸಲಾಗಿದೆ.  ಶಿಗ್ಗಾಂವ್ ಮಾರುತಿ ನಗರದ ನಿವಾಸಿ ಮಂಜುನಾಥ ನಾಗೇಂದ್ರ ಕಾಜಗಾರ (35), ಮುಂಡಗೋಡದಶ್ರೀಕಾಂತ ರಾಜಶೇಖರ ಕಿರಣ್ಣನವರ್ (22),ಮಲ್ಲಿಕಾರ್ಜುನ ಬಡಶೆಟ್ಟಿ (22), ಧಾರವಾಡದ ಮಂಜುನಾಥ್ ವಿಷ್ಣು ಬೆಳಗಾಠ (20) , ಹುಬ್ಬಳ್ಳಿಯದೀಪಕ ನಾಗರಾಜ ನವಲೆ (22), ಎಂಬುವವರನ್ನು ಬಂಧಿಲಾಗಿದೆ. ಬಂಧಿತರಿಂದ  ಕಂಟ್ರಿ ಮೇಡ್ ಪಿಸ್ತೂಲ್ ವಶಕ್ಕೆ ಪಡೆಯಲಾಗಿದೆ.  

ವೃತ್ತಿ ವೈಷಮ್ಯ ಕೊಲೆಗೆ ಕಾರಣ ಎನ್ನಲಾಗಿದೆ. ದರ್ಗಾವಾಲೆ ಸಹ ಹತ್ತಾರು ಜನರ ಮೇಲೆ ಚೆಕ್ ಬೌನ್ಸ ಕೇಸ್ ದಾಖಲಿಸಿದ್ದ. ಅಲ್ಲದೆ ಮಂಜುನಾಥ ಕಾಜಗಾರ ಬಳಿಯ ಕೆಲಸಗಾರರನ್ನು ತನ್ನತ್ತ ಸೆಳೆದುಕೊಂಡಿದ್ದ ಎನ್ನಲಾಗುತ್ತಿದೆ. ಪೊಲೀಸರು ಸಮಗ್ರ ತನಿಖೆ ಆರಂಭಿಸಿದ್ದಾರೆ.ಮೀಟರ್ ಬಡ್ಡಿ ವ್ಯವಹಾರ ಹಾಗೂ ರಿಯಲ್ ಎಸ್ಟೆಟ್ ಉದ್ಯಮಕ್ಕೆ ದರ್ಗಾವಾಲೆ  ಅಡ್ಡಿಯಾದ ಎಂಬ ಕಾರಣಕ್ಕೆ ಮುಂಡಗೋಡ ಮಂಜುನಾಥ ಕಾಜಗಾರ ಎಂಬಾತ ದರ್ಗಾವಾಲೆ  ಹತ್ಯೆಗೆ  ಹುಬ್ಬಳ್ಳಿಯ ಯುವಕರಿಗೆ ಸುಫಾರಿ ನೀಡಿದ್ದರು ಎಂಬ ಸಂಗತಿಯನ್ನು ಪೊಲೀಸರು ತನಿಖೆಯ ವೇಳೆ ಕಂಡುಕೊಂಡಿದ್ದಾರೆ. ಕೊಲೆಗೆ ಸುಫಾರಿ ಕೊಟ್ಟವ ಸಹ ಹರ್ಷಾ ಎಂಬಾತನ  ಕೊಲೆಯ ಆರೋಪಿಯಾಗಿದ್ದಾನೆ.  ಕೆಲ ತಿಂಗಳುಗಳ ಹಿಂದೆ ಜಮೀರ್ ದರ್ಗಾವಾಲೆ ಬಳಿ 30 ಲಕ್ಷ ಹಣ ಇದ್ದಾಗ ಅಪಹರಿಸಲಾಗಿತ್ತು. ನಂತರ ಹಣ ಸಹಿತ ದರ್ಗಾವಾಲೆ ಯನ್ನು ಸುರಕ್ಷಿತವಾಗಿ ಮರಳಿದ್ದರು . ದರ್ಗಾವಾಲೆ ಮೀಟರ್ ಬಡ್ಡಿ ವ್ಯವಹಾರಕ್ಕೆ ಅಡ್ಡಿಯಾದ ಕಾರಣಕ್ಕೆ ಹುಬ್ಬಳ್ಳಿಗೆ ಮಂಜುನಾಥ ಕಾಜಗಾರ ಶಿಫ್ಟ್‌ ಆಗಿದ್ದರು..... 


ಸುದ್ದಿ ಓದಿ