ಗುರುಗಳನ್ನು ಗೌರವಿಸುವುದು ವಿದ್ಯಾರ್ಥಿಗಳ ಕರ್ತವ್ಯ
It is the duty of students to respect their teachers
ಬೀಳಗಿ 21: ಅಕ್ಷರ ಜ್ಞಾನ ನೀಡಿ ಬದುಕಿಗೆ ದಾರೀದೀಪವಾದ ಗುರುಗಳನ್ನು ಸ್ಮರಿಸಿ ಗೌರವಿಸುವುದು ಪ್ರತಿಯೊಬ್ಬ ವಿದ್ಯಾರ್ಥಿಯ ಕರ್ತವ್ಯ ಎಂದು ನಿವೃತ್ತ ಮುಖ್ಯೋಪಾಧ್ಯಾಯ ಎಂ.ಸಿ. ಯಾಳವಾರ ಹೇಳಿದರು. ತಾಲೂಕಿನ ಕುಂದರಗಿ ಗ್ರಾಮದ ರಾಮಲಿಂಗೇಶ್ವರ ಪ್ರೌಢಶಾಲೆಯ 1994-95ನೇ ಸಾಲಿನ ಎಸ್‌ಎಸ್‌ಎಲ್ಸಿ ಹಳೆಯ ವಿದ್ಯಾರ್ಥಿಗಳು ಆಯೋಜಿಸಿದ್ದ ಗುರುವಂದನಾ ಹಾಗೂ ಸ್ನೇಹಸಮ್ಮಿಲನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸುಮಾರು ಮೂರು ದಶಕಗಳ ಬಳಿಕ ಹಳೆಯ ಸಹಪಾಠಿಗಳು ಒಂದೆಡೆ ಸೇರಿ ತಮ್ಮ ಗುರುಗಳನ್ನು ಗೌರವಿಸುತ್ತಿರುವುದು ಶ್ಲಾಘನೀಯ. ತಂದೆ-ತಾಯಿಗಳು ಮಕ್ಕಳಿಗೆ ಬಾಲ್ಯದಿಂದಲೇ ಸಂಸ್ಕಾರ ಹಾಗೂ ಸಂಸ್ಕೃತಿಯ ಮೌಲ್ಯಗಳನ್ನು ಬೆಳೆಸಬೇಕು ಎಂದರು.
ಚರಂತಿಮಠದ ಪೂಜ್ಯ ವೀರಸಂಗಮೇಶ್ವರ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿ, ವಿದ್ಯಾರ್ಥಿ ಜೀವನದಲ್ಲಿ ಗುರುವಿನ ಸ್ಥಾನ ಅತ್ಯುನ್ನತವಾದದ್ದು. ಅಕ್ಷರ ಕಲಿಸಿದ ಗುರುಗಳನ್ನು ಗೌರವಿಸುವ ಇಂತಹ ಕಾರ್ಯಕ್ರಮಗಳು ಸಮಾಜಕ್ಕೆ ಮಾದರಿಯಾಗಿವೆ ಎಂದರು.
ಉಪನ್ಯಾಸಕ ವಾದಿರಾಜ ಕಡಿವಾಳ ಮಾತನಾಡಿ, ಪ್ರತಿಯೊಬ್ಬರ ಬದುಕಿನಲ್ಲಿ ಗುರುವಿನ ಮಾರ್ಗದರ್ಶನ ಅಗತ್ಯ. ಗುರುಗಳ ಬೋಧನೆ ಹಾಗೂ ಮಾರ್ಗದರ್ಶನವನ್ನು ಶಿಷ್ಯರು ಸದಾ ಸ್ಮರಿಸಬೇಕು ಎಂದರು.
ರಾವಿವ ಸಂಘದ ಅಧ್ಯಕ್ಷ ಬಸವರಾಜ ಖೋತ ಮಾತನಾಡಿ, ಹಣ-ಆಸ್ತಿಯನ್ನು ಕಳೆದುಕೊಂಡರೂ ಮತ್ತೆ ಗಳಿಸಬಹುದು. ಆದರೆ ಕಲಿತ ವಿದ್ಯೆ ಹಾಗೂ ಜ್ಞಾನವನ್ನು ಕಳೆದುಕೊಳ್ಳಲು ಸಾಧ್ಯವಿಲ್ಲ. ವಿದ್ಯೆ ನೀಡಿದ ಗುರುಗಳನ್ನು ಜೀವನದುದ್ದಕ್ಕೂ ಗೌರವದಿಂದ ಸ್ಮರಿಸಬೇಕು ಎಂದರು.
ಕಾರ್ಯಕ್ರಮಕ್ಕೂ ಮುನ್ನ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಹಳೆ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಶಿಕ್ಷಕರನ್ನು ಸಾರೋಟಿನಲ್ಲಿ ಕೂರಿಸಿ ದೇವಸ್ಥಾನದಿಂದ ಶಾಲೆಯವರೆಗೆ ವಿವಿಧ ವಾದ್ಯಮೇಳಗಳೊಂದಿಗೆ ಮೆರವಣಿಗೆ ನಡೆಸಲಾಯಿತು.
ಹಳೆ ವಿದ್ಯಾರ್ಥಿಗಳು ತಾವು ಕಲಿತ ರಾಮಲಿಂಗೇಶ್ವರ ಪ್ರೌಢಶಾಲೆಗೆ 21 ಸಾವಿರ ಹಾಗೂ ಶಾಸಕರ ಸರ್ಕಾರಿ ಮಾದರಿ ಕೇಂದ್ರ ಶಾಲೆಗೆ 11 ಸಾವಿರ ದೇಣಿಗೆ ನೀಡಿದರು. ನಿವೃತ್ತ ಮುಖ್ಯೋಪಾಧ್ಯಾಯ ಎಂ.ಸಿ. ಯಾಳವಾರ, ಜಿ.ಕೆ. ಹೊಸಮನಿ, ಎಂ.ಬಿ. ಸಿದ್ದಗೋಣಿ, ಜಿ.ಬಿ. ಗುಳೇದ, ಉಪಪ್ರಾಚಾರ್ಯ ಸಿ.ಎಸ್. ಕಾಂಬಳೆ ಸೇರಿದಂತೆ ಶಿಕ್ಷಕರನ್ನು ಸನ್ಮಾನಿಸಲಾಯಿತು.
ಹಳೆ ವಿದ್ಯಾರ್ಥಿಗಳಾದ ಶ್ರೀಶೈಲ ಹೂಗಾರ, ಎಂ.ಡಿ. ಮಾದರ, ಶಿವಪ್ಪ ಪೂಜಾರಿ, ಬಸು ಗಾಣಿಗೇರ, ಗುರು ಉಳಾಗಡಿ, ಸೋಮರಾಯ ಪೂಜಾರಿ, ಡಿ.ಡಿ. ಮಾದರ, ಈರಣ್ಣ ಕುಂದರಗಿ, ಮಳಿಯಪ್ಪ ಆಗೋಜಿ, ನೀಲವ್ವ ಅಂಕಲಗಿ, ಕಸ್ತೂರಿ ಕಬ್ಬಲಗೇರಿ, ವೀಣಾ ಮಂಡಿ, ರೇಣುಕಾ ಗೌಡರ, ಮಂಜುಳಾ ಮಾಲಗಿ, ಶಿವಲೀಲಾ ಹಿರೇಮಠ, ನಾಗವ್ವ ಗೌಡರ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಮಹಾಂತೇಶ ಹಾನಾಪುರ ಪ್ರಾರ್ಥಿಸಿದರು. ಹನಮಂತ ಸನಗೌಡ್ರ ಪ್ರಾಸ್ತಾವಿಕ ಮಾತನಾಡಿದರು. ಬಸವರಾಜ ನಿರಾಕಾರಿ ಹಾಗೂ ಬಸವರಾಜ ದಾವಣಗೆರೆ ಸ್ವಾಗತಿಸಿ, ನಿರೂಪಿಸಿದರು.
ಅರ್ಧಕ್ಕೆ ನಿಂತ ಚನ್ನಮ್ಮ ಪ್ರತಿಮೆ ಕಾಮಗಾರಿ: ಅವ್ಯವಹಾರದ ಶಂಕೆ : ಲೆಕ್ಕ ಕೊಡಿ ಹೋರಾಟಕ್ಕೆ ಕನ್ನಡ ಹೋರಾಟಗಾರರು ಸಜ್ಜು
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ 