ಹಿರೇಕುಂಬಿ ದರ್ಗಾ ವಾರ್ಷಿಕ ಮಹೋತ್ಸವ ಸೆ.22, 23

ಹಿರೇಕುಂಬಿ ದರ್ಗಾ ವಾರ್ಷಿಕ ಮಹೋತ್ಸವ ಸೆ.22, 23  Hirekumbi Dargah Annual Festival on September 22 and 23


ಸವದತ್ತಿ ಸೆ.21: ತಾಲೂಕಿನ ಐತಿಹಾಸಿಕ ಪ್ರಸಿದ್ಧ ಹಿರೇಕುಂಬಿ ಗ್ರಾಮದಲ್ಲಿರುವ ಸರ್ವಧರ್ಮೀಯರ ಸಮನ್ವಯದ ಪ್ರತೀಕವಾದ ಹಜರತ್ ಸಯ್ಯಿದ ಮಗದುಮ್ ಶಾ ಹುಸೇನಿ ಅವರ ವಾರ್ಷಿಕ ಮಹೋತ್ಸವ ಹಾಗೂ ಉರುಸ್ ಕಾರ್ಯಕ್ರಮಗಳು ಸೆ.22 ಮತ್ತು 23ರಂದು ವಿಜೃಂಭಣೆಯಿಂದ ನಡೆಯಲಿವೆ.  

ಸೆ.22ರಂದು ಸಂಜೆ ಸಡಗರದಿಂದ ಗಂಧ ಸಮರೆ​‍್ಣ ಹಾಗೂ ನೈರಳ ಕಾರ್ಯಕ್ರಮ ನಡೆಯಲಿದೆ. ಸೆ.23ರಂದು ಮುಖ್ಯ ಉರುಸ್ ಮಹೋತ್ಸವ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಈ ಸಂದರ್ಭದಲ್ಲಿ ಸುತ್ತಮುತ್ತಲಿನ ಗ್ರಾಮಗಳು ಹಾಗೂ ವಿವಿಧ ಪ್ರದೇಶಗಳಿಂದ ಆಗಮಿಸುವ ಭಕ್ತರು ದರ್ಗಾಕ್ಕೆ ಹೂವಿನ ಚಾದರ್ ಸಮರ​‍್ಿಸಲಿದ್ದಾರೆ.  

ಉರುಸ್ಗೆ ಆಗಮಿಸುವ ಸಾರ್ವಜನಿಕರು ಹಾಗೂ ಭಕ್ತರಿಗೆ ಅಗತ್ಯವಿರುವ ಎಲ್ಲ ಮೂಲಸೌಕರ್ಯಗಳನ್ನು ಕಲ್ಪಿಸಲಾಗಿದೆ ಎಂದು ಸ್ಥಳೀಯ ದರ್ಗಾ ಸಮಿತಿ ಹಾಗೂ ಧರ್ಮಗುರುಗಳು ತಿಳಿಸಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡು ದರ್ಗಾದ ದರ್ಶನ ಪಡೆದು ಜಾತ್ರಾ ಮಹೋತ್ಸವವನ್ನು ಯಶಸ್ವಿಗೊಳಿಸುವಂತೆ ಮನವಿ ಮಾಡಿದ್ದಾರೆ.