ಜಿಟಿಟಿಸಿ ಧಾರವಾಡದಲ್ಲಿ ಜರುಗಿದ ಇಂಟರ್ನ್‌ಶಿಪ್ ತರಬೇತಿ ಕಾರ್ಯಕ್ರಮ
Internship training program held at GTTC Dharwad
ಲೋಕದರ್ಶನ ವರದಿ
ಧಾರವಾಡ ಸೆ.25: ಜಿಟಿಟಿಸಿ ಧಾರವಾಡ ವತಿಯಿಂದ ಜೆಎಸ್‌ಎಸ್ ಕೌಶಲ್ಯ ಐಟಿಐ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದ್ದ ಇಂಟರ್ನ್‌ಶಿಪ್ ತರಬೇತಿ ಕಾರ್ಯಕ್ರಮವು ಯಶಸ್ವಿಯಾಗಿ ಪೂರ್ಣಗೊಂಡಿತು. ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಅನುಭವ ಹಾಗೂ ಕೈಗಾರಿಕಾ ಆಧಾರಿತ ತಾಂತ್ರಿಕ ಕೌಶಲ್ಯಗಳನ್ನು ಒದಗಿಸುವ ಉದ್ದೇಶದಿಂದ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಕೌಶಲ್ಯ ಅಭಿವೃದ್ಧಿ ಘಟಕದ ಮುಖ್ಯಸ್ಥ ಬಸವರಾಜ ಬಿ ಅವರು ಮಾತನಾಡಿ, ವಿದ್ಯಾರ್ಥಿಗಳು ಇಂತಹ ಪ್ರಾಯೋಗಿಕ ಹಾಗೂ ಕೈಗಾರಿಕಾ ಆಧಾರಿತ ತರಬೇತಿ ಕಾರ್ಯಕ್ರಮಗಳನ್ನು ಸದುಪಯೋಗಪಡಿಸಿಕೊಂಡು ತಮ್ಮ ತಾಂತ್ರಿಕ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿಕೊಳ್ಳಬೇಕು ಹಾಗೂ ಭವಿಷ್ಯದ ಉದ್ಯೋಗಾವಕಾಶಗಳಿಗೆ ತಮ್ಮನ್ನು ತಾವು ಸಿದ್ಧಪಡಿಸಿಕೊಳ್ಳಬೇಕು ಎಂದು ಹೇಳೀದರು.
ಜಿಟಿಟಿಸಿ ಪ್ರಾಂಶುಪಾಲ ಶಿವಾನಂದ ಬಿ. ಕುಂಬಾರ, ಅಧ್ಯಕ್ಷೀಯ ಭಾಷಣ ಮಾಡುತ್ತಾ, ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ವಿದ್ಯಾರ್ಥಿಗಳು, ಬೋಧಕ ಸಿಬ್ಬಂದಿ ಹಾಗೂ ಸಂಯೋಜಕರನ್ನು ಅಭಿನಂದಿಸಿದರು.
ಯುವಜನರಿಗೆ ಕೌಶಲ್ಯ ಆಧಾರಿತ, ಪ್ರಾಯೋಗಿಕ ಹಾಗೂ ಕೈಗಾರಿಕಾ ಆಧಾರಿತ ತರಬೇತಿಯನ್ನು ಒದಗಿಸುವ ಮೂಲಕ ಅವರನ್ನು ಸಬಲಗೊಳಿಸುವುದು ಮತ್ತು ಉತ್ತಮ ಉದ್ಯೋಗಾವಕಾಶಗಳಿಗೆ ಸಿದ್ಧಪಡಿಸುವುದು ಜಿಟಿಟಿಸಿ ಧಾರವಾಡದ ನಿರಂತರ ಬದ್ಧತೆಯಾಗಿದೆ ಎಂದರು.
ಜೆಟಿಓಗಳಾದ ಲಿಂಗರಾಜ್ ಹಾಗೂ ಶ್ರೀನಾಥ್ ಮಡಿವಾಳರ್ ಅವರು ಈ ಉಪಕ್ರಮವನ್ನು ಶ್ಲಾಘಿಸಿ, ತಮ್ಮ ವಿದ್ಯಾರ್ಥಿಗಳಿಗೆ ಉತ್ತಮ ತಾಂತ್ರಿಕ ತರಬೇತಿ ಅವಕಾಶವನ್ನು ಕಲ್ಪಿಸಿದ ಜಿಟಿಟಿಸಿ ಧಾರವಾಡಕ್ಕೆ ಧನ್ಯವಾದಗಳನ್ನು ಸಲ್ಲಿಸಿದರು. ಕಾರ್ಯಕ್ರಮವನ್ನು ಸಂಯೋಜಕ ಮಹೇಶ್ ಜಕ್ಕಳಿ, ಎಲೆಕ್ಟ್ರಿಕಲ್ ಫ್ಯಾಕಲ್ಟಿ ಪೂಜ್ಟಾ ಅವರು ಸಂಯೋಜಿಸಿದರು.
ಗಣೇಶ ವಿಸರ್ಜನೆ ವೇಳೆ ದುರಂತ : ಬೆಳಗಾವಿಯ ಯುವಕ ನೀರಲ್ಲಿ ಮುಳುಗಿ ಸಾವು
ಚನ್ನಮ್ಮ ಪ್ರತಿಮೆ ಪ್ರತಿಷ್ಠಾಪನೆಗೆ ನವೆಂಬರ 1ರ ಗಡುವು ನೀಡಿದ ಕನ್ನಡ ಸಂಘಟನೆಗಳು
ಎನ್ಒಸಿ ನೀಡಲು ಲಂಚ : ಖಾನಾಪುರ ತಾಲೂಕು ಆರೋಗ್ಯಾಧಿಕಾರಿ ಲೋಕಾಯುಕ್ತ ಬಲೆಗೆ
ಅರ್ಧಕ್ಕೆ ನಿಂತ ಚನ್ನಮ್ಮ ಪ್ರತಿಮೆ ಕಾಮಗಾರಿ: ಅವ್ಯವಹಾರದ ಶಂಕೆ : ಲೆಕ್ಕ ಕೊಡಿ ಹೋರಾಟಕ್ಕೆ ಕನ್ನಡ ಹೋರಾಟಗಾರರು ಸಜ್ಜು
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ 