ಧಾರವಾಡ ಎಸ್‌ಪಿ ಗುಂಜನ್ ಆರ್ಯ ಅವರಿಂದ ವಿನೂತ ಕ್ರಮ ; ಮನೆ ಕಳ್ಳತನ ತಪ್ಪಿಸಲು ಜಿಲ್ಲೆಯಲ್ಲಿ ಲಾಕ್ಡ್‌ ಹೌಸ್ ಬೀಟ್ ಸಿಸ್ಟಮ್ ಜಾರಿ

ಧಾರವಾಡ ಎಸ್‌ಪಿ ಗುಂಜನ್ ಆರ್ಯ ಅವರಿಂದ ವಿನೂತ ಕ್ರಮ ; ಮನೆ ಕಳ್ಳತನ ತಪ್ಪಿಸಲು ಜಿಲ್ಲೆಯಲ್ಲಿ ಲಾಕ್ಡ್‌ ಹೌಸ್ ಬೀಟ್ ಸಿಸ್ಟಮ್ ಜಾರಿ   Innovative action by Dharwad SP Gunjan Arya; Locked house beat system implemented in the district to

ಲೋಕದರ್ಶನ ವರದಿ 

ಧಾರವಾಡ 15: ಧಾರವಾಡ ಜಿಲ್ಲೆಯಲ್ಲಿ ರಾತ್ರಿ ಸಮಯದಲ್ಲಿ ನಡೆಯುವ ಕಳ್ಳತನ ಹಾಗೂ ಸ್ವತ್ತಿನ ಅಪರಾಧ ಪ್ರಕರಣಗಳನ್ನು ತಡೆಗಟ್ಟಲು ಧಾರವಾಡ ಜಿಲ್ಲಾ ಪೊಲೀಸ್ ವತಿಯಿಂದ ಒಂದು ವಿನೂತನವಾದ ಲಾಕ್ಡ್‌ ಹೌಸ್ ಬೀಟ್ ಸಿಸ್ಟಮ್  ಕಲಘಟಗಿ, ಅಳ್ನಾವರ, ಕುಂದಗೋಳ ಪಟ್ಟಣ ಪಂಚಾಯತ ಹಾಗೂ ಅಣ್ಣಿಗೇರಿ ಮತ್ತು ನವಲಗುಂದ ಪುರಸಭೆ ವ್ಯಾಪ್ತಿಯಲ್ಲಿ ಜಾರಿಗೆ ತರಲಾಗುತ್ತಿದೆ.  ಲಾಕ್ಡ್‌ ಹೌಸ್ ಬೀಟ್ ಸಿಸ್ಟಮ್ ಕುರಿತ ಮಾಹಿತಿವುಳ್ಳ ಬಿತ್ತಿಪತ್ರವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ ಅವರು ತಮ್ಮ ಕಚೇರಿಯಲ್ಲಿ ಇಂದು ಬಿಡುಗಡೆ ಮಾಡಿದರು.  

ಸಾರ್ವಜನಿಕರು ಪ್ರವಾಸ, ಮದುವೆ, ದೇವಸ್ಥಾನ, ಜಾತ್ರೆಗಳು ಸೇರಿದಂತೆ ವಿವಿಧ ರೀತಿಯ ಇನ್ನೀತರ ಸಮಾರಂಭಗಳಿಗಾಗಿ ಬೇರೆ ಊರುಗಳಿಗೆ ತೆರಳುವಾಗ ಸಾರ್ವಜನಿಕರು ಧಾರವಾಡ ಪೊಲೀಸ್ ಇಲಾಖೆ ಆರಂಭಿಸಿರುವ ಲಾಕ್ಡ್‌ ಹೌಸ್ ಬೀಟ್ ಸಿಸ್ಟಮ್  ಎಂಬ ವಿನೂತನವಾದ ವ್ಯವಸ್ಥೆಯನ್ನು ಉಪಯೋಗಿಸಿಕೊಳ್ಳಬೇಕು. ಮನೆಗೆ ಬೀಗ ಹಾಕಿ, ಮನೆ ಬಿಟ್ಟು ತೆರಳುವ ಸಂದರ್ಭದಲ್ಲಿ ತಮ್ಮ ಹೆಸರು, ವಿಳಾಸ, ಸಂಪರ್ಕ ಸಂಖ್ಯೆ ಹಾಗೂ ಗೂಗಲ್ ಲೊಕೇಶನ್ ಮಾಹಿತಿಯನ್ನು ಕಂಟ್ರೋಲ್ ರೂಮ್ ಸಹಾಯವಾಣಿ ಸಂಖ್ಯೆ - 8277968343 ಗೆ ಸಂದೇಶದ ಮೂಲಕ ಅಥವಾ ವಾಟ್ಸಪ್ ಕಳುಹಿಸುವ ಮೂಲಕ ಕಳ್ಳತನದಂತಹ ಪ್ರಕರಣಗಳನ್ನು ತಪ್ಪಿಸಲು ಸಹಕರಿಸಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ ಅವರು ತಿಳಿಸಿದ್ದಾರೆ.  ಧಾರವಾಡ ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿಯ ಸಾರ್ವಜನಿಕರಿಗಾಗಿ ಜಾರಿಗೆ ತರಲಾದ ಲಾಕ್ಡ್‌ ಹೌಸ್ ಬೀಟ್ ಸಿಸ್ಟಮ್  ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಬೇಕೆಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.