ಮೀಸಲು ಶಿರಹಟ್ಟಿ ಮತಕ್ಷೇತ್ರದಲ್ಲಿ ರಾಜ್ಯ ರೈತೋದಯ ಹಸಿರು ಸೇನೆಯಿಂದ ಸಂಚಾರ ರೈತರ ಸಮಸ್ಯೆಗಳ ಮಾಹಿತಿ

ಮೀಸಲು ಶಿರಹಟ್ಟಿ ಮತಕ್ಷೇತ್ರದಲ್ಲಿ ರಾಜ್ಯ ರೈತೋದಯ ಹಸಿರು ಸೇನೆಯಿಂದ ಸಂಚಾರ ರೈತರ ಸಮಸ್ಯೆಗಳ ಮಾಹಿತಿ  Information on the problems of migrant farmers from the State Rythodaya Green Army in the reserved S

ಲಕ್ಷ್ಮೇಶ್ವರ   09: ಗದಗ ಜಿಲ್ಲೆಯ ಮೀಸಲು ವಿಧಾನಸಭಾ ಕ್ಷೇತ್ರ ಶಿರಹಟ್ಟಿ ಮತಕ್ಷೇತ್ರದಲ್ಲಿ ಕರ್ನಾಟಕ ರಾಜ್ಯ ರೈತೋದಯ ಹಸಿರು ಸೇನೆ ಸಂಸ್ಥಾಪಕ ರಾಜ್ಯ ಅಧ್ಯಕ್ಷ ಸಾವಿರದ ಎಂಟು ರೈತ ಕಲ್ಯಾಣ ನೆರವೇರಿಸಿದ ಕಲ್ಯಾಣ ಪುರುಷ ಬಿ ಟಿ ಚಂದ್ರಶೇಖರ್ ಅವರು ಸೋಮವಾರ ಲಕ್ಷ್ಮೇಶ್ವರ ತಾಲೂಕಿನ ವಡ್ಡರ್ ಬಸಾಪುರ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮದಲ್ಲಿ ಇರುವ ರಸ್ತೆ ಚರಂಡಿ ಕುಡಿಯುವ ನೀರು ಬೀದಿ ದೀಪ ಸೇರಿದಂತೆ ಮೂಲ ಸೌಲಭ್ಯಗಳನ್ನು ವೀಕ್ಷಿಸಿದ ಅವರು ಗ್ರಾಮದ ಎಲ್ಲಾ ರೈತರೊಂದಿಗೆ ಜಮೀನುಗಳಿಗೆ ತೆರಳುವ ರಸ್ತೆಯನ್ನು ಜಮೀನವರಿಗೆ ನಡೆದುಕೊಂಡು ಹೋಗಿ ವೀಕ್ಷಿಸಿದರು ಹಾಗೂ ಎಲ್ಲ ರೈತರು ಎದುರಿಸುತ್ತಿರುವ ಸಮಸ್ಯೆಗಳನ್ನು ಅವರ ಮುಖಾಂತರವೇ ತಿಳಿದುಕೊಂಡ ಅವರು ಇವುಗಳಿಗೆಲ್ಲಾ ಶಾಶ್ವತ ಪರಿಹಾರ ಕೊಂಡುಕೊಳ್ಳಲು ನಮ್ಮ ಕರ್ನಾಟಕ ರಾಜ್ಯ ರೈತೋದಯ ಹಸಿರು ಸೇನೆಶಿರಹಟ್ಟಿ ಮತಕ್ಷೇತ್ರದಲ್ಲಿ ಸಂಚಾರ ಮಾಡುತ್ತಿದ್ದು ಅದಕ್ಕೆ ಎಲ್ಲ ರೈತರು ಸಹಕಾರ ಇರಬೇಕು ಎಂದು ರೈತರಿಗೆ ಮನವಿ ಮಾಡಿ ಮಾತನಾಡಿದರು.