ದಾಂಡೇಲಿಯಲ್ಲಿ ವೀರಶೈವ ಲಿಂಗಾಯತ ಮಹಾಸಭೆಯ ನೂತನ ಪದಾಧಿಕಾರಿಗಳ ಪದಗ್ರಹಣ
ಲೋಕದರ್ಶನ ವರದಿ
ದಾಂಡೇಲಿ 27 : ದಾಂಡೇಲಿಯ ಮೃತ್ಯುಂಜಯ ಮಠದ ಸಭಾಂಗಣದಲ್ಲಿ ಭಾನುವಾರ ನಡೆದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ದಾಂಡೇಲಿ ತಾಲೂಕಾ ಘಟಕದ ನೂತನ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳ ಪದಗ್ರಹಣ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ವೀರಶೈವ ಸಮಾಜವು ಪ್ರಸ್ತುತ ಹಲವು ಸವಾಲುಗಳನ್ನು ಎದುರಿಸುತ್ತಿದೆ. ಶಿಕ್ಷಣ, ಉದ್ಯೋಗ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿ ಸಮಾಜದ ಪ್ರಾತಿನಿಧ್ಯ ಹೆಚ್ಚಾಗಬೇಕಿದ್ದು, ಸಮಾಜದ ಸಮಗ್ರ ಅಭಿವೃದ್ದಿಗಾಗಿ ಎಲ್ಲರು ಒಗ್ಗಟ್ಟಿನಿಂದ ಶ್ರಮಿಸಬೇಕೆಂದು ಅವರು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾಲೂಕ ಘಟಕದ ಅಧ್ಯಕ್ಷ ಸಿದ್ದಪ್ಪಾ ಆರ್. ಕುರುಗುಂದ ಮಾತನಾಡಿ ಸಮಾಜವನ್ನು ಸದೃಡವಾಗಿ ಮುನ್ನಡೆಸಲು ಎಲ್ಲರ ಸಹಕಾರ ಅತ್ಯಗತ್ಯ ಎಲ್ಲರನ್ನು ಒಗ್ಗೂಡಿಸಿಕೊಂಡು ಸಮಾಜದ ಅಬೀವೃದ್ದಿಗೆ ಶ್ರಮಿಸುವದಾಗಿ ಭರವಸೆ ನೀಡಿದರು. ಮುಖ್ಯ ಅತಿಥಿಗಳಾಗಿ ವೀರಶೈವ ಸೇವಾ ಸಂಘದ ಅಧ್ಯಕ್ಷ ಬಸವರಾಜ ಕಲಶೆಟ್ಟಿ, ನ್ಯಾಯವಾದಿ ಹೇಮಲತಾ ಶಿವಪ್ರಭು ಹಿರೇಮಠ, ಎಸ್.ಜಿ. ಬಿರಾದಾರ, ಡಾ, ಶೇಖರ ಹಂಚಿನಾಳ ಹಾಗೂ ಶಾರದಾ ಹಿರೇಮಠ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳು ಪದಗ್ರಹಣ ಸ್ವೀಕರಿಸಿದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹಾಗೂ ಶೈಕ್ಷಣಿಕವಾಗಿ ಉತ್ತಮ ಸಾಧನೆ ತೋರಿದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರತಿಭಾ ಪುರಸ್ಖಾರ ನೀಡಿ ಸನ್ಮಾನಿಸಲಾಯಿತು.
ನೂತನ ಪದಾಧಿಕಾರಿಗಳು ಸಿದ್ದಪ್ಪ ರುದ್ರ್ಪ ಕುರುಗುಂದ- ಅಧ್ಯಕ್ಷರು, ಅಶ್ವಿನ್ ಕುಮಾರ ಸೋಮಶೇಖರ ಝುಟ್ಟಿ- ಉಪಾಧ್ಯಕ್ಷರು, ಸುಜಾತಾ ಶಶಿಕಾಂತ ಗಡದ, -ಉಪಾಧ್ಯಕ್ಷರು, ಲಿಂಗರಾಜ ಬಸವರಾಜ ಮೊದಗಿ -ಪ್ರಧಾನ ಕಾರ್ಯದರ್ಶಿ , ಶಂಕರಯ್ಯ ಜಡೆಹಿರೆಮಠ- ಖಜಾಂಚಿ, ರಂಗಯ್ಯ ರುದ್ರಯ್ಯ ಹಿರೇಮಠ ಸಹಕಾರ್ಯದರ್ಶಿ, ಸವಿತಾ ನಂದೀಶ ಮುಂಗರವಾಡಿ-ಸಹಕಾರ್ಯದರ್ಶಿ ಹಾಗೂ 14 ಜನ ಸದಸ್ಯರಾಗಿ ಪದಗ್ರಹಣ ಸ್ವೀಕರಿಸಿದರು.