ಇನ್ನರ್ ವೀಲ್ ಕ್ಲಬ್ನ ನೂತನ ಪದಾಧಿಕಾರಿಗಳ ಪದಗ್ರಹಣ
Induction of New Office Bearers of Inner Wheel Club
ಯಲಬುರ್ಗಾ 26: ಇನ್ನರ್ ವೀಲ್ ಕ್ಲಬ್ ಒಂದು ಕುಟುಂಬದಂತಿದ್ದು, ಕಳೆದ ಒಂದು ವರ್ಷದಲ್ಲಿ ಕ್ಲಬ್ ವತಿಯಿಂದ ಹಮ್ಮಿಕೊಂಡ ಸುಮಾರು 36 ಸಮಾಜಮುಖಿ ಕಾರ್ಯಕ್ರಮಗಳು ಶ್ಲಾಘನೀಯವಾಗಿವೆ ಎಂದು ಬೆಂಗಳೂರಿನ ಆರಾಮ್ ಫೌಂಡೇಶನ್ನ ಸಂಚಾಲಕಿ ಹಾಗೂ ವಕೀಲೆ ಮಮತಾ ಬಸವರಾಜ ರಾಯರಡ್ಡಿ ಹೇಳಿದರು.
ಪಟ್ಟಣದ ಸಾಯಿ ಪ್ಯಾಲೇಸ್ನಲ್ಲಿ ಭಾನುವಾರ ನಡೆದ 2026ಹಿ27್ಫೂ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮಹಿಳೆಯರು ಆತ್ಮವಿಶ್ವಾಸ ಬೆಳೆಸಿಕೊಂಡು ಸಮಾಜದ ಮುಖ್ಯವಾಹಿನಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. ಪರಸ್ಪರ ಸಹಕಾರ ಮತ್ತು ಸೇವಾ ಮನೋಭಾವದಿಂದ ಕಾರ್ಯನಿರ್ವಹಿಸಿದಾಗ ಸಮಾಜ ಹಾಗೂ ದೇಶದ ಅಭಿವೃದ್ಧಿಗೆ ಕೊಡುಗೆ ನೀಡಲು ಸಾಧ್ಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಇನ್ಸ್ಟಾಲೇಷನ್ ಅಧಿಕಾರಿ ಜಯಶ್ರೀ ಸಾಗರ್ ಮಾತನಾಡಿ, ಕರ್ನಾಟಕದಲ್ಲಿ 102 ವರ್ಷಗಳ ಇತಿಹಾಸ ಹೊಂದಿರುವ ಸಂಸ್ಥೆ ಯಲಬುರ್ಗಾ ಘಟಕವು ಕಳೆದ ಒಂಬತ್ತು ವರ್ಷಗಳಿಂದ ಸಮಾಜಮುಖಿ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸುತ್ತಿದೆ. ಸದಸ್ಯರು ತಮ್ಮ ಆರೋಗ್ಯದ ಜೊತೆಗೆ ಸಮಾಜಸೇವೆಯಲ್ಲೂ ಹೆಚ್ಚಿನ ಆಸಕ್ತಿ ತೋರಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಅಧ್ಯಕ್ಷೆ ಮಂಜುಳಾ ಮುಳಗೆ, ಮಾಜಿ ಅಧ್ಯಕ್ಷೆ ಚನ್ನಮ್ಮ ಆರ್. ಪಾಟೀಲ, ಹಿರಿಯ ಸದಸ್ಯೆ ಶಕುಂತಲಾದೇವಿ ಮಾಲಿಪಾಟೀಲ, ಪಪಂ ಸದಸ್ಯೆ ಡಾ. ನಂದಿತಾ ಶಿವನಗೌಡ ದಾನರೆಡ್ಡಿ ಹಾಗೂ ಮಹೇಶ್ವರಿ ಸಾವಣಿಗಿಮಠ ಮಾತನಾಡಿದರು. ಈ ಸಂದರ್ಭದಲ್ಲಿ 2025ಹಿ26್ಫೂ ಸಾಲಿನ ಅಧ್ಯಕ್ಷೆಯಾಗಿದ್ದ ಚನ್ನಮ್ಮ ಆರ್. ಪಾಟೀಲ ಅವರು ನೂತನ ಅಧ್ಯಕ್ಷೆ ಸವಿತಾ ಮುರಡಿಮಠ ಅವರಿಗೆ ಅಧಿಕಾರ ಹಸ್ತಾಂತರಿಸಿದರು.
2026ಹಿ27್ಫೂ ಸಾಲಿನ ನೂತನ ಪದಾಧಿಕಾರಿಗಳಾಗಿ ಸವಿತಾ ಮುರಡಿಮಠ (ಅಧ್ಯಕ್ಷೆ), ಸುನೀತಾ ಎಂ. ಪತಂಗರಾಯಿ (ಕಾರ್ಯದರ್ಶಿ), ನಾಗರತ್ನ ನೂಲ್ವಿ (ಖಜಾಂಚಿ), ಉಮಾ ಎಸ್. ಹೊಸಮನಿ (ಐಎಸ್ಒ) ಹಾಗೂ ಮಂಜುಳಾ ಹಾಲಕೇರಿ (ಸಂಪಾದಕಿ) ಅಧಿಕಾರ ಸ್ವೀಕರಿಸಿದರು.
ಕಾರ್ಯದರ್ಶಿ ಸುನೀತಾ ಎಂ. ಪತಂಗರಾಯಿ ಪ್ರಾಸ್ತಾವಿಕವಾಗಿ ಸಂಸ್ಥೆಯ ಚಟುವಟಿಕೆಗಳ ಕುರಿತು ವಿವರಿಸಿದರು. ಕಾರ್ಯಕ್ರಮವನ್ನು ಸವಿತಾ ಆರ್. ಓಜನಹಳ್ಳಿ ನಿರೂಪಿಸಿ ವಂದಿಸಿದರು. ಇದೇ ಸಂದರ್ಭದಲ್ಲಿ ಮಾಜಿ ಸೈನಿಕರನ್ನು ಗೌರವಿಸಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಇನ್ನರ್ ವೀಲ್ ಕ್ಲಬ್ ಸದಸ್ಯರು, ಅಕ್ಕನ ಬಳಗದ ಸದಸ್ಯರು, ಮಾಜಿ ಯೋಧರು, ಪತ್ರಿಕಾ ಪ್ರತಿನಿಧಿಗಳು, ಜನಪ್ರತಿನಿಧಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ
ನೀಟ್: ವಿದ್ಯಾರ್ಥಿಗಳ ಹೋರಾಟಕ್ಕೆ ಬೆಂಬಲ, ಮೃತ ವಿದ್ಯಾರ್ಥಿಗಳ ಆತ್ಮಕ್ಕೆ ಶಾಂತಿ ಕೋರಿ ಕ್ಯಾಂಡಲ್ ಪ್ರತಿಭಟನೆ
1991ರ ಆರ್ಥಿಕ ಸುಧಾರಣೆಗಳನ್ನು ಶ್ಲಾಘಿಸಿದ ಖರ್ಗೆ; ಸಮಗ್ರ ಅಭಿವೃದ್ಧಿಗೆ ಎರಡನೇ ಹಂತದ ಉದಾರೀಕರಣಕ್ಕೆ ಕರೆ 