ದಾಂಡೇಲಿಯಲ್ಲಿ ಹೆಚ್ಚಿದ ಚಿರತೆಗಳ ಸಂಚಾರ: ಸಾರ್ವಜನಿಕರಲ್ಲಿ ಆತಂಕ, ಮುನ್ನೆಚ್ಚರಿಕೆಗೆ ಮನವಿ
Increased leopard movement in Dandeli: Public alarmed, caution urged
ಲೋಕದರ್ಶನ ವರದಿ
ದಾಂಡೇಲಿ 20 : ದಾಂಡೇಲಿ ನಗರದ ಟಿ.ಆರ್.ಟಿ, ಅಂಬೇವಾಡಿ ಹಾಗೂ ಗ್ರಾಮೀಣ ಪ್ರದೇಶಗಳಾದ ಹಸನಮಾಳ, ಸಕ್ಕಲಗಾ ಹಾಗೂ ಬೇಡರಶಿರಗೂರು, ಗೊಬ್ರಾಳ, ಬಡಾಕಾನಶಿರಡಾ ಮತ್ತಿತರ ಗ್ರಾಮಗಳ ಅರಣ್ಯ ಮತ್ತು ಜನವಸತಿ ಪ್ರದೇಶಗಳಲ್ಲಿ ಇತ್ತೀಚಿನ ದಿನಗಳಲ್ಲಿ ಚುಕ್ಕೆ ಚಿರತೆ ಹಾಗೂ ಅಪರೂಪದ ಸಂಕುಲಕ್ಕೆ ಸೇರಿದ ಕಪ್ಪು ಚಿರತೆಯ ಸಂಚಾರ ಹೆಚ್ಚುತ್ತಿರುವುದು ಸಾರ್ವಜನಿಕರಲ್ಲಿ ಆತಂಕಕ್ಕೆ ಕಾರಣವಾಗಿದೆ.
4- 5 ದಿನಗಳ ಹಿಂದೆ ಹಸನಮಾಳದ ರೆಸಾರ್ಟ ಒಂದಕ್ಕೆ ಕಪ್ಪು ಚಿರತೆ ನುಗ್ಗಿ ಸಾಕು ನಾಯಿಯೊಂದನ್ನು ಕಚ್ಚಿ ಎಳೆದೊಯ್ದು ಕೊಂದು ಹಾಕಿದ ಘಟನೆ ವರದಿಯಾಗಿದೆ. ಇದೇ ಚಿರತೆ ಟಿ.ಆರ್.ಟಿ ಕಾಲನಿಯ ಸಮೀಪದಲ್ಲೂ ಕಂಡು ಬಂದಿದೆ. ದ್ವಿ ಚಕ್ರ ವಾಹನಗಳಲ್ಲಿ ಸಂಚರಿಸುತ್ತಿದ್ದ ಹಲವರಿಗೂ ಚಿರತೆಗಳು ಕಾಣಿಸಿಕೊಂಡಿದೆ. ಇದುವರೆಗೂ ಚಿರತೆ ಮನುಷ್ಯನ ಮೇಲೆ ದಾಳಿ ನಡೆಸಿದ ಯಾವುದೇ ಪ್ರಕರಣಗಳು ಕಂಡು ಬಂದಿಲ್ಲ.
ಆದರೆ ನಾಯಿ, ದನಕರುಗಳಂತಹ ಸಾಕು ಪ್ರಾಣಿಗಳ ಮೇಲೆ ದಾಳಿ ನಡೆಸುತ್ತಿರುವುದು ದೃಢಪಟ್ಟಿದೆ. ಆಹಾರದ ಕೊರತೆ, ಕಾಡಿನ ಅಂಚಿನ ಪ್ರದೇಶಗಳಲ್ಲಿ ಮಾನವ ಚಟುವಟಿಕೆಗಳ ಹೆಚ್ಚಳ ಹಾಗೂ ಕಾಡು ಪ್ರಾಣಿಗಳ ನೈಸರ್ಗಿಕ ವಾಸ ಸ್ಥಾನದ ಮೇಲೆ ಉಂಟಾಗುತ್ತಿರುವ ಒತ್ತಡದಿಂದ ಚಿರತೆಗಳು ನಾಡಿನತ್ತ ಹೆಜ್ಜೆ ಹಾಕುತ್ತಿದೆ. ಇಂತಹ ಸಂದರ್ಭದಲ್ಲಿ ಅರಣ್ಯ ಇಲಾಖೆ ಮಾತ್ರವಲ್ಲದೆ ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸಬೇಕಿದೆ.
ರಾತ್ರಿ ವೇಳೆ ಒಂಟಿಯಾಗಿ ಸಂಚರಿಸುವದನ್ನು ತಪ್ಪಿಸುವದು ಕಾಡಿನ ಅಂಚಿನ ಪ್ರದೇಶಗಳಲ್ಲಿ ಮಕ್ಕಳನ್ನು ಏಕಾಂಗಿಯಾಗಿ ಬಿಡದಿರುವದು, ಸಾಕು ಪ್ರಾಣಿಗಳನ್ನು ಹೊರಗೆ ಕಟ್ಟದಿರುವದು ಮತ್ತು ಚಿರತೆ ಕಂಡು ಬಂದಲ್ಲಿ ಅದನ್ನು ಕಿರಿ ಕಿರಿ ಮಾಡದೇ ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡುವದು ಅಗತ್ಯವಾಗಿದೆ. ಸಂರಕ್ಷಣೆ ಮತ್ತು ಸುರಕ್ಷತೆಯ ಸಮತೋಲನವೇ ಇದಕ್ಕೆ ಪರಿಹಾರವಾಗಿದೆ.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 