ಬಸವಣ್ಣನವರು ವಚನಗಳು ಚಿರಸ್ಥಾಯಿಯಾಗುವಂತೆ ಮಾಡಿದ್ದಾರೆ: ಡಾ. ಅಲ್ಲಮಪ್ರಭುಶ್ರೀ
Basavanna ensured that the Vachanas would endure forever: Dr. Allamaprabhushri
ಲೋಕದರ್ಶನ ವರದಿ
ಬೆಳಗಾವಿ(ನೇಸರಗಿ) 20: ವಿಶ್ವಗುರು ಬಸವಣ್ಣನವರು ಜಗತ್ತಿಗೆ ಬಹುದೊಡ್ಡ ಕಾಣಿಕೆ ಕೊಟ್ಟರು. ಬಹು ಮಹತ್ವದ ವಚನ ಸಾಹಿತ್ಯವನ್ನು ಎಲ್ಲಾ ಧರ್ಮಗಳಿಗೆ ಕೊಟ್ಟು ವಚನಗಳು ಚಿರಸ್ಥಾಯಿಯಾಗುವಂತೆ ಮಾಡಿದ್ದಾರೆಂದು ಬೆಳಗಾವಿಯ ನಾಗನೂರು ರುದ್ರಾಕ್ಷಿಮಠದ ಡಾ. ಅಲ್ಲಮಪ್ರಭು ಸ್ವಾಮೀಜಿ ಹೇಳಿದರು.
ನೇಸರಗಿ ಗ್ರಾಮದಲ್ಲಿ ಶ್ರಾವಣ ಮಾಸದ ನಿಮಿತ್ತವಾಗಿ ಗುರುವಾರ ನಡೆದ ಬಸವ ನಡಿಗೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಎಲ್ಲರಿಗೂ ಮಾನವ ಧರ್ಮ ಮುಖ್ಯವಾಗಿದೆ. ಬಸವಾದಿ ಶರಣರಂತೆ ನಡೆಯಬೇಕು.
ಲೋಕದಲ್ಲಿ ಗಂಡು ಹೆಣ್ಣಿಗಿಂತ ಭವಿ, ಭಕ್ತರು ಎರಡು ಜಾತಿಗಳು ಮುಖ್ಯ. ಈ ನಾಡನ್ನು 900 ವರ್ಷಗಳ ಹಿಂದೆ ಬಸವಾದಿ ಶರಣರು ವಿಶ್ವದಲ್ಲಿ ಬಹುಮುಖ್ಯ ಪರಂಪರೆಯನ್ನು ಹಾಕಿಕೊಟ್ಟಿದ್ದಾರೆ. ಹಿರಿಯರು ಹಾಕಿಕೊಟ್ಟ ಪರಂಪರೆ ಬಹುಮುಖ್ಯವಾದುದು. ಅದನ್ನು ಇಂದಿನ ಯುವಕರು ಪಾಲಿಸಬೇಕು ಎಂದರು.
ಜಾಗತಿಕ ಲಿಂಗಾಯತ ಸಂಘಟನೆ ಜಿಲ್ಲಾಧ್ಯಕ್ಷ ಬಸವರಾಜ ರೊಟ್ಟಿ ಮಾತನಾಡಿ, ನೇಸರಗಿಯ ಬಸವ ವೃತ್ತದಲ್ಲಿ ಅಶ್ವಾರೂಢ ಬಸವೇಶ್ವರ ಪುತ್ಥಳಿಯನ್ನು ನಿರ್ಮಾಣ ಮಾಡಲು ಪಣ ತೊಡೋಣ. ಎಲ್ಲ ಕಡೆ ಜಾಗತಿಕ ಲಿಂಗಾಯತ ಸಂಘಟನೆಯಿಂದ ನಾನಾ ಕಾರ್ಯಕ್ರಮಗಳು ನಡೆಯುತ್ತಿವೆ ಎಂದರು.
ಮಾಜಿ ಜಿ.ಪಂ ಸದಸ್ಯೆ ರೋಹಿಣಿ ಪಾಟೀಲ ಮಾತನಾಡಿ, ನಾಗನೂರ ಮಠವು ಈ ಹಿಂದೆ ಬೆಳಗಾವಿಯಲ್ಲಿ ಕನ್ನಡಿಗರ ಶ್ರೇಯೋಭಿವೃದ್ಧಿಗೆ ಶ್ರಮಿಸಿದೆ. ಸರ್ವರು ಬಸವಣ್ಣನ ಹೆಸರು ತೆಗೆದುಕೊಂಡು ಮುನ್ನೆಡೆಯಬೇಕೆಂದರು.
ಬೆಳಗ್ಗೆ ನೇಸರಗಿಯ ಬಸವೇಶ್ವರ ವೃತ್ತದಿಂದ ಗ್ರಾಮದ ಪ್ರಮುಖ ಬೀದಿಗಳ ಮೂಲಕ ವೀರಭದ್ರೇಶ್ವರ ದೇವಸ್ಥಾನದ ಕಲ್ಯಾಣ ಮಂಟಪದವರೆಗೆ ಬಸವ ನಡಿಗೆ ವಿನೂತನ ಕಾರ್ಯಕ್ರಮ ನಡೆಯಿತು.
ನ್ಯಾಯವಾದಿಗಳಾದ ಎಂ.ವಾಯ್.ಸೋಮಣ್ಣವರ, ರಾಜಶೇಖರ ಯತ್ತಿನಮನಿ, ಸಚೀನ ಪಾಟೀಲ, ಜಾಗತಿಕ ಲಿಂಗಾಯತ ಸಂಘಟನೆ ಕಾರ್ಯದರ್ಶಿ ಅಶೋಕ ಮಳಗಲಿ, ಮುರಗೇಶ ಶಿವಪೂಜಿ, ಪ್ರೇಮಕ್ಕ ಅಂಗಡಿ, ಲಿಂಗಾಯತ ಸಂಘಟನೆ ಪದಾಧಿಕಾರಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು. ಎಫ್.ಬಿ.ಸೋಮಣ್ಣವರ ಸ್ವಾಗತಿಸಿ, ವಂದಿಸಿದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 