ಅಗ್ನಿಶಾಮಕ ಠಾಣೆಯ ನೂತನ ಕಟ್ಟಡ ಉದ್ಘಾಟನೆ

ಅಗ್ನಿಶಾಮಕ ಠಾಣೆಯ ನೂತನ ಕಟ್ಟಡ ಉದ್ಘಾಟನೆ  Inauguration of the new fire station building

ತಾಳಿಕೋಟಿ 12 : ಪಟ್ಟಣದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಅಗ್ನಿಶಾಮಕ ಠಾಣೆಯ ಕಟ್ಟಡವನ್ನು ಕೆ ಎಸ್ ಡಿ ಎಲ್ ಅಧ್ಯಕ್ಷ ಹಾಗೂ ಮುದ್ದೇಬಿಹಾಳ ಮತಕ್ಷೇತ್ರ ಶಾಸಕರಾದ ಅಪ್ಪಾಜಿ ನಾಡಗೌಡರು ಗುರುವಾರ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ತಾಳಿಕೋಟಿ ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಯಾವುದೇ ರೀತಿಯ ಅವಘಡಗಳು ಹಾಗೂ ನೈಸರ್ಗಿಕ ವಿಕೋಪಗಳು ಸಂಭವಿಸಿದಾಗ ತುರ್ತು ಸೇವೆಯನ್ನು ನೀಡಲು 24 ಗಂಟೆಯವರೆಗೆ ಕಾರ್ಯನಿರ್ವಹಿಸುವ ಈ ಠಾಣೆಗೆ ಎಲ್ಲ ರೀತಿಯಿಂದಲೂ ಸುಸಜ್ಜಿತವಾದ ಕಟ್ಟಡದ ಅವಶ್ಯಕತೆ ಇತ್ತು ಇದರ ನಿರ್ಮಾಣಕ್ಕಾಗಿ ವಿಶೇಷ ಆಸಕ್ತಿ ವಹಿಸಿ ಅನುದಾನವನ್ನು ಬಿಡುಗಡೆ ಗೊಳಿಸಿ ಕೆಲಸ ಮಾಡಿಸಿದ್ದೇನೆ.  

ಇಲ್ಲಿರುವ ಸಿಬ್ಬಂದಿಗಳಿಗೆ ವಸತಿ ಗೃಹಗಳ ಅವಶ್ಯಕತೆ ಇದ್ದು ಇದರ ಬೇಡಿಕೆಯನ್ನು ಇಟ್ಟಿದ್ದಾರೆ ಅವುಗಳನ್ನು ಸಹ ಮುಂದಿನ ದಿನಗಳಲ್ಲಿ ಆದಷ್ಟು ಬೇಗ ಮಂಜೂರು ಮಾಡಿಕೊಳ್ಳಲು ಸರ್ಕಾರದ ಮಟ್ಟದಲ್ಲಿ ಶಕ್ತಿಮೀರಿ ಪ್ರಯತ್ನಿಸುತ್ತೇನೆ ಎಂದರು. ಇದೇ ಸಂದರ್ಭದಲ್ಲಿ ಠಾಣೆಗೆ ಮಂಜೂರಾದ ನೂತನ ವಾಹನವನ್ನೂ ಶಾಸಕ ಅಪ್ಪಾಜಿ ನಾಡಗೌಡರು ಉದ್ಘಾಟಿಸಿದರು. ಅಗ್ನಿಶಾಮಕ ಠಾಣೆಯ ಹುಬ್ಬಳ್ಳಿ ವಲಯ ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿ ಮಂಜುನಾಥ ಸಾಲಿ ಹಾಗೂ ಸಿಬ್ಬಂದಿಗಳು ಶಾಸಕ ನಾಡಗೌಡರಿಗೆ ಸನ್ಮಾನಿಸಿ ಗೌರವಿಸಿದರು.  

ಈ ಸಂದರ್ಭದಲ್ಲಿ ಮುಸ್ಲಿಂ ಧಾರ್ಮಿಕ ಮುಖಂಡ ಸಯ್ಯದ್ ಶಕೀಲ ಅಹ್ಮದ್ ಖಾಜಿ, ತಾಳಿಕೋಟಿ ಅಗ್ನಿಶಾಮಕ ಠಾಣೆ ಪ್ರಭಾರಿ ಅಫ್ರೋಜ್ ಕಂದಗಲ್, ಮುಖಂಡರಾದ ಎಂ.ಜಿ.ಪಾಟೀಲ, ಬಿ.ಎನ್‌.ಹಿಪ್ಪರಗಿ, ಸುರೇಶಧಣಿ ನಾಡಗೌಡ ಬಿಂಜಲಭಾವಿ, ಪ್ರಭುಗೌಡ ಮದರಕಲ್ಲ, ಸಿದ್ದನಗೌಡ ಪಾಟೀಲ ನಾವದಗಿ,ಸಿ.ಎಸ್‌.ಮಾಳಿ, ಶರಣುಧಣಿ ದೇಶಮುಖ, ಮಲ್ಲಿಕಾರ್ಜುನ ಪಟ್ಟಣಶೆಟ್ಟಿ, ಸಂಗನಗೌಡ ಅಸ್ಕಿ, ಗುತ್ತಿಗೆದಾರ ಹಣಮಂತ ನಾಯಕ, ಇಬ್ರಾಹಿಂ ಮನ್ಸೂರ, ಮೋದಿನಸಾ ನಗಾರ್ಚಿ, ಫಯಾಜ ಉತ್ನಾಳ, ಸಿಕಂದರ್ ಡೋಣಿ, ಸದ್ದಾಮ ಹೊನ್ನಳ್ಳಿ ಹಾಗೂ ಅಗ್ನಿ ಶಾಮಕ ಠಾಣೆಯ ಸಿಬ್ಬಂದಿಗಳು ಮತ್ತಿತರರು ಇದ್ದರು.