ಮೆರವಣಿಗೆಯೊಂದಿಗೆ ಬಸವ ಹೊಂಡದಲ್ಲಿ ಗಣೇಶ ಮೂರ್ತಿಗಳ ವಿಸರ್ಜನೆ

ಮೆರವಣಿಗೆಯೊಂದಿಗೆ ಬಸವ ಹೊಂಡದಲ್ಲಿ ಗಣೇಶ ಮೂರ್ತಿಗಳ ವಿಸರ್ಜನೆ Immersion of Ganesha idols in Basava Honda following a procession



ಮುಂಡಗೋಡ 21 : ಪಟ್ಟಣದಲ್ಲಿ ಡಿಜೆ ಸೌಂಡ್ ಹಾಗೂ ಬಣ್ಣ ಬಣ್ಣದ ಲೈಟಿಂಗ್ಸ್‌ ನಡುವೆ 7ನೇ ದಿನದ ಸಾರ್ವಜನಿಕ ಗಣೇಶ ಮೂರ್ತಿಗಳ ವಿಸರ್ಜನಾ ಮೆರವಣಿಗೆಯು ರವಿವಾರ ಅತ್ಯಂತ ವಿಜೃಂಭಣೆ ಮತ್ತು ಸಡಗರದಿಂದ ನೆರವೇರಿತು. ಡಿಜೆ ಸದ್ದಿಗೆ ಹೆಜ್ಜೆ ಹಾಕಿದ ಯುವಪಡೆ: ಡಿಜೆ ಹಾಡುಗಳ ಅಬ್ಬರ ಹಾಗೂ ಆಕರ್ಷಕ ಲೈಟಿಂಗ್ಸ್‌ ನಡುವೆ ಸಾವಿರಾರು ಯುವಕ-ಯುವತಿಯರು ಉತ್ಸಾಹದಿಂದ ಹೆಜ್ಜೆ ಹಾಕಿ, ಕುಣಿದು ಕುಪ್ಪಳಿಸಿ ಹಬ್ಬದ ಖುಷಿಯನ್ನು ಪಡಕೊಂಡರು. ತಾಲೂಕಿನ ಯುವಜನತೆ ಮಾತ್ರವಲ್ಲದೆ, ಅಕ್ಕಪಕ್ಕದ ತಾಲೂಕುಗಳಿಂದಲೂ ಆಗಮಿಸಿದ್ದ ಸಾವಿರಾರು ಭಕ್ತಾದಿಗಳು ಮೆರವಣಿಗೆಯ ವೈಭವಕ್ಕೆ ಸಾಕ್ಷಿಯಾದರು.

ವಿವಿಧ ಯುವಕ ಮಂಡಳಗಳಿಂದ ಅದ್ಧೂರಿ ವಿಸರ್ಜನೆ: ಪಟ್ಟಣದ ಗಾಂಧಿನಗರ ಆಂಜನೇಯ ಯುವಕ ಮಂಡಳ, ಕಂಬಾರಗಟ್ಟಿ, ನೆಹರು ನಗರ, ಗೆಳೆಯರ ಬಳಗ, ಕಲಾಲ ಓಣಿ, ಪಾದಗಟ್ಟಿ, ಗಣಪ ಹಾಗೂ ಜೈ ಭೀಮ ಯುವಕ ಮಂಡಳಗಳಲ್ಲಿ ಪ್ರತಿಷ್ಠಾಪಿಸಲಾಗಿದ್ದ ಸಾರ್ವಜನಿಕ ಗಣೇಶ ಮೂರ್ತಿಗಳ ವಿಸರ್ಜನೆಗಾಗಿ ಅದ್ದೂರಿ ಮೆರವಣಿಗೆಯನ್ನು ಆಯೋಜಿಸಲಾಗಿತ್ತು. ರಾಜಬೀದಿಗಳಲ್ಲಿ ಸಾಗಿದ ವೈಭವದ ಮೆರವಣಿಗೆಯ ಬಳಿಕ ಪಟ್ಟಣದ ಬಸವ ಹೊಂಡದಲ್ಲಿ ಗಣೇಶ ಮೂರ್ತಿಗಳ ವಿಸರ್ಜನೆ ನೆರವೇರಿಸಲಾಯಿತು. ಬಿಗಿ ಪೊಲೀಸ್ ಬಂದೋಬಸ್ತ್‌: ಕಾರ್ಯಕ್ರಮವು ಶಾಂತಿಯುತವಾಗಿ ನೆರವೇರಲು ಮುಂಡಗೋಡ ಸಿಪಿಐ ರಮೇಶ್ ಹಾನಪೂರ್ ಹಾಗೂ ಪಿ.ಎಸ್‌.ಐ.ಗಳ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್‌ ಏರಿ​‍್ಡಸಲಾಗಿತ್ತು.