ಅಕ್ರಮ ಮರಳು ಸಾಗಾಣಿಕೆ : ಲಾರಿ, ಯಾಂತ್ರಿಕ ದೊಣಿ ವಶಕ್ಕೆ

ಅಕ್ರಮ ಮರಳು ಸಾಗಾಣಿಕೆ : ಲಾರಿ, ಯಾಂತ್ರಿಕ ದೊಣಿ ವಶಕ್ಕೆ Illegal sand transportation: Lorry, motorboat seized

ಲೋಕದರ್ಶನ ವರದಿ 

ಹುನಗುಂದ 02 : ಹುನಗುಂದ-ಇಳಕಲ್ ಅವಳಿ ತಾಲೂಕಿನಲ್ಲಿ ನಿರಂತರವಾಗಿ ನಡೆಯುತ್ತಿದ್ದ ಅಕ್ರಮ ಮರಳು ಸಾಗಾಟ ಲೋಕಾಯುಕ್ತ ದಾಳಿಯ ನಂತರ ಸ್ತಬ್ದವಾಗಿದೆ. ಆದರೆ, ಆಡಳಿತಶಾಯಿ ನೆರಳಲ್ಲಿ ನಡೆಸುತ್ತಿದ್ದ ಈ ಅಕ್ರಮ ಕೊರರ ವಿರುದ್ದ ಅಧಿಕಾರಿಶಾಯಿ ಪ್ರಾಮಾಣಿಕ ಕ್ರಮ ಜರುಗಿಸುವುದೆ? ಎಂಬುದನ್ನು ಕಾದು ನೊಡಬೇಕಿದೆ.  ಹೌದು, ಮೇ.20 ರಂದು ಅವಳಿ ತಾಲೂಕಿನ ಸುಮಾರು 8 ಅಕ್ರಮ ಮರಳು ಅಡ್ಡೆಗಳ ಮೇಲೆ ದಾಳಿ ನಡೆಸಿದ್ದ ಲೋಕಾಯುಕ್ತ ತಂಡ ಅಕ್ರಮ ಮರಳು ಸಾಗಾಣಿಕೆಗೆ ಬಳಸಲಾಗುತ್ತಿದ್ದ ಲಾರಿ, ಯಾಂತ್ರಿಕ ದೊಣಿ ಸೇರಿ ಇತರ ಯಂತ್ರೋಪಕರಣಗಳನ್ನು ವಶಪಡಿಸಿಕೊಂಡು ಪೊಲೀಸ್ ಕಸ್ಟಡಿಗೆ ನೀಡಿದ್ದಾರೆ.

ಅಕ್ರಮ ಮರಳುಗಾರಿಕೆ ಆದಾಯ, ಪರಿಸರ, ಅರಣ್ಯ, ರಸ್ತೆಗಳ ಹಾನಿಗೆ ಕಾರಣವಾಗಿದ್ದರಿಂದ ಈ ಎಲ್ಲ ಇಲಾಖೆ ಅಧಿಕಾರಿಗಳು ಸೇರಿ ಗಣಿ ಮತ್ತು ಭೂವಿಜ್ಞಾನ, ಕಂದಾಯ, ಪೊಲೀಸ್ ಇಲಾಖೆ ಅಧಿಕಾರಿಗಳು ಅಕ್ರಮ ಮರಳುಗಾರಿಕೆಯಲ್ಲಿ ತೊಡಗಿದವವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಂಡು, ಕೈಗೊಂಡ ಕ್ರಮದ ಬಗ್ಗೆ ವರದಿ ಸಲ್ಲಿಸುವಂತೆ ಸೂಚನೆ ನೀಡಿದ್ದಾರೆ. ಅದರಂತೆ ಹುನಗುಂದ, ಇಳಕಲ್, ಅಮೀನಗಡ ಪೊಲೀಸ್ ಠಾಣೆಗಳಲ್ಲಿ ಒಟ್ಟು 8 ಪ್ರಕರಣಗಳು ದಾಖಲಾಗಿವೆ.  ಮಣ್ಣು ಹಾಕಿ ಮುಚ್ಚಲಾಗುತ್ತಿದೆ 

ಲೋಕಾಯುಕ್ತರ ಸೂಚನೆಯಂತೆ ತಾಲೂಕು ಆಡಳಿತ ಕ್ರಮಕ್ಕೆ ಮುಂದಾಗಿರುವ ಕಾರ್ಯಗಳು ನಡೆಯುತ್ತಿದ್ದರೂ, ಅಕ್ರಮ ಮರಳುಗಾರಿಕೆ ಅಡ್ಡೆಗಳಲ್ಲಿ ನಡೆದಿರುವ ಬೆಳವಣಿಗೆಗಳನ್ನು ಗಮಣಿಸಿದರೆ ಅಕ್ರಮ ಮುಚ್ಚಿ ಹಾಕಲು ಪಿಠಿಕೆ ಹಾಲಾಗುತ್ತಿದೆಯೇ? ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಕಾನೂನಿನ ಪ್ರಕಾರ ತಾಲೂಕು ಆಡಳಿತ ಸಂಬಂದಿಸಿದ ಗ್ರಾಮ ಲೇಕ್ಕಾಧಿಕಾರಿ ಮತ್ತು ಕಂದಾಯ ನೀರೀಕ್ಷಕರಿಂದ ವರದಿ ಪಡೆದುಕೊಂಡು, ಅಕ್ರಮ ಮರಳು ಅಡ್ಡೆಗಳಲ್ಲಿ ಎಷ್ಟು ಪ್ರಮಾಣದ ಮರಳು ತೆಗೆಯಲಾಗಿದೆ ಎಂಬುದನ್ನು ಸರ್ವೆ ಮಾಡಲು ಸರ್ವೆ ಇಲಾಖೆಗೆ ಸೂಚನೆ ನೀಡಬೇಕು.

ಸರ್ವೆಯ ನಂತರ ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ನಷ್ಟದ ಪ್ರಮಾಣವನ್ನು ಪಡೆದು, ಅಕ್ರಮ ಮರಳು ಸಾಗಿಸಿದ ಭೂಮಿಯ ಪಹನಿಯಲ್ಲಿ ಬೋಜಾ ದಾಖಲು ಮಾಡಬೇಕು. ಈ ಪ್ರಕ್ರಿಯೆ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ. ಆದರೆ, ಪಟ್ಟಾ ಭೂಮಿಯಲ್ಲಿ ಅಕ್ರಮ ಮರಳು ತೆಗೆದ ಜಾಗೆಯಲ್ಲಿ ಬೇರೆಕಡೆಗಳಿಂದ ಮಣ್ಣು ತಂದು ಹಾಕುವ ಕಾರ್ಯ ಬಹಿರಂಗವಾಗಿ ನಡೆದಿದ್ದು ಇದು ಪ್ರಕರಣ ಮುಚ್ಚಿ ಹಾಕಲು ನಡೆದಿರುವ ಕಾರ್ಯವೇ? ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಇದು ಸರ್ವೆಯ ವರದಿ ಬಂದ ನಂತರವೆ ಬಹಿರಂಗವಾಗಲಿದೆ.