36 ವರ್ಷಗಳ ಕೇಂದ್ರದ ಸೇವೆಗೆ ನಾನು ಋಣಿ

36 ವರ್ಷಗಳ ಕೇಂದ್ರದ ಸೇವೆಗೆ ನಾನು ಋಣಿ I am indebted to the Center for 36 years of service

ಬೆಳಗಾವಿ 29: 24 ವರ್ಷ ಆರ್ಮಿಯಲ್ಲಿ ಸೇವೆ ಸಲ್ಲಿಸಿ, ನಂತರ 12 ವರ್ಷಗಳ ಕಾಲ ಭಾರತೀಯ ರೈಲ್ವೆ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದು ಕೇಂದ್ರ ಸರ್ಕಾರದ 36 ವರ್ಷ ನೌಕರಿ ಸಲ್ಲಿಸಿದ್ದು ಆ ಎರಡು ಪ್ರಮುಖ ಇಲಾಖೆಗಳಿಗೆ ನಾನು ಯಾವತ್ತೂ ಋಣಿಯಾಗಿ ಇರುತ್ತೇನೆ ಎಂದು ಲೋಂಡಾ ರೈಲು ಇಲಾಖೆಯ ಟ್ರ್ಯಾಕ್ ಮೆಂಟೇನನ್ಸ್ ಇಂಜಿನಿಯರ್    ಪ್ರಭು ತುಮ್ಮರಗುದ್ದಿ ಹೇಳಿದರು.    ಅವರು ಸಮೀಪದ ಬಾಳೆಕುಂದ್ರಿ ಕೆ 36 ವರ್ಷಗಳ ಕೇಂದ್ರದ ಸೇವೆಗೆ ನಾನು ಋಣಿ 

ಎಚ್ ಗ್ರಾಮದ ಸದಾಶಿವ ಕಾಲನಿಯಲ್ಲಿ ಏರ್ಪಡಿಸಲಾಗಿದ್ದ ಅವರ ಸೇವಾ ನಿವೃತ್ತಿ, ಸತ್ಕಾರ ಸಮಾರಂಭದಲ್ಲಿ ಮಾತನಾಡಿದರು.  ಈ ಕಾರ್ಯಕ್ರಮದಲ್ಲಿ ಇಂಜಿನೀಯರ ವಿಜಯ ದೇಸಿಂಗೆ, ಸಂಗಪ್ಪ ಗುಜನಟ್ಟಿ, ಶಂಬಪ್ಪ ಕುರಣಿ,ಶ್ರೀಮತಿ ಲಕ್ಷ್ಮಿ ತುಮ್ಮರಗುದ್ದಿ,  ಈರಯ್ಯ ಹಿರೇಮಠ ಶ್ರೀಗಳು, ಶಶಿಕಾಂತ ಪಾಟೀಲ, ನಿಜಗುಣಿ ತುಮ್ಮರಗುದ್ದಿ, ಮುಕ್ತಾ ನೇರಲಿ, ಯಲ್ಲಪ್ಪ ಗುಜನಟ್ಟಿ,ನಿವೃತ್ತ ಸೈನಿಕರು, ತುಮ್ಮರಗುದ್ದಿ ಪರಿವಾರದವರು, ಸದಾಶಿವ ಕಾಲನಿ ನಿವಾಸಿಗಳು ಭಾಗವಹಿಸಿದ್ದರು.