ವಸತಿ ನಿಲಯ: ಆನ್‌ಲೈನ್ ಪ್ರವೇಶ ಪ್ರಾರಂಭ

Hostel: Online admission begins

ಲೋಕದರ್ಶನ ವರದಿ 

ವಸತಿ ನಿಲಯ: ಆನ್‌ಲೈನ್ ಪ್ರವೇಶ ಪ್ರಾರಂಭ  

ಸಂಬರಗಿ 17: ಹಿಂದುಳಿದ ಅಲ್ಪಸಂಖ್ಯಾತರ ವಸತಿ ನಿಲಯ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿ ಆನ್‌ಲೈನ್ ಪ್ರವೇಶ ಪ್ರಾರಂಭವಾಗಿದ್ದು, ಅವಶ್ಯಕ ದಾಖಲೆ ಲಗತ್ತಿಸಿ 14 ಜೂನ್ ಒಳಗಾಗಿ ಹತ್ತಿರದ ವಸತಿ ನಿಲಯ ಇಲ್ಲವಾದರೆ ತಾಲೂಕಾ ಕಚೇರಿಗೆ ಆ ಅರ್ಜಿಯನ್ನು ಮಾಹಿತಿಗಾಗಿ ತಿಳಿಸಬೇಕೆಂದು ಬಿಸಿಎಮ್ ಇಲಾಖೆ ತಾಲೂಕು ಅಧಿಕಾರಿಯಾದ ವೆಂಕಟೇಶ ಕುಲಕರ್ಣಿ ಹೇಳಿದರು. 

ಶನಿವಾರ ಗಡಿ ಭಾಗದ ವಸತಿ ನಿಲಯ ಪರೀಶೀಲನೆ ಮಾಡಿ ಮದಬಾವಿ ಗ್ರಾಮದಲ್ಲಿ ಮಾಹಿತಿ ನೀಡಿದರು. ಒಟ್ಟು ವಿದ್ಯಾರ್ಥಿ ಸಂಖ್ಯೆ 980, ಅದರಲ್ಲಿ ವಿದ್ಯಾರ್ಥಿನಿಗಳ ಸಂಖ್ಯೆ 100, ವಿದ್ಯಾರ್ಥಿಗಳ ಸಂಖ್ಯೆ 980 ಇದ್ದು, ವಿದ್ಯಾರ್ಥಿನಿಗಳಿಗೆ ಅಡಹಳ್ಳಿ ಹಾಗೂ ಅಥಣಿ ವಸತಿ ನಿಲಯ ಇದ್ದು, ಇನ್ನುಳಿದ 13 ವಸತಿ ನಿಲಯ ವಿದ್ಯಾರ್ಥಿಗಳಿವೆ. 

ಆನ್‌ಲೈನ್ ಮುಖಾಂತರ ಅವಶ್ಯಕ ದಾಖಲೆಗಳನ್ನು ಲಗತ್ತಿಸಿ ಅರ್ಜಿ ಸಲ್ಲಿಸಬೇಕು. ಇಗಾಗಲೇ ಇಲಾಖೆಯಿಂದ ಮಾಹಿತಿ ಆ ವಸತಿ ನಿಲಯದ ಕಾರ್ಯಲಯದಲ್ಲಿ ಮಾಹಿತಿ ಲಭ್ಯವಿದೆ. ವಸತಿ ನಿಲಯ ಪ್ರಾರಂಭವಾಗುವುದಕ್ಕಿಂತ ಮುಂಚಿತವಾಗಿ ವಸತಿ ನಿಲಯದ ಕಟ್ಟಡವನ್ನು ಪರೀಶೀಲನೆ ಮಾಡಿ ಏನಾದರೂ ತೊಂದರೆ ಇದ್ದರೆ ದುರಸ್ಥಿ ಮಾಡಲಾಗುವುದು ಎಂದು ಹೇಳಿದರು.