ಪಿಎಚ್ಡಿ ಪದೋನ್ನತಿ ಹೊಂದಿದ ಗಣ್ಯರಿಗೆ ಸನ್ಮಾನ ಕಾರ್ಯಕ್ರಮ
Honorary program for dignitaries who have been awarded PhD degrees
ಹುಬ್ಬಳ್ಳಿ 23 : ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವ, ಪಿಎಚ್ಡಿ ಪದವಿ ಪಡೆದ, ಪದೋನ್ನತಿ ಹೊಂದಿದ, ನಿವೃತ್ತಿ ಹೊಂದಿದ, 60 ವರ್ಷದ, ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಗಣ್ಯರನ್ನು ಪ್ರೊ ಎಸ್. ವಿ ಪಟ್ಟಣಶೆಟ್ಟಿ ಅವರ 83ನೇ ಹುಟ್ಟು ಹಬ್ಬದ ಸಂಭ್ರಮದಲ್ಲಿ ಹಾಗೂ ಪ್ರೊ. ಎಸ್. ವಿ ಪಟ್ಟಣಶೆಟ್ಟಿ ಅವರ ವಚನ ಸುಧೆ, ತುಪ್ಪದ ತಲೆಯವರು ಮತ್ತು ಸಂಕ್ಷಿಪ್ತ ಕನ್ನಡ ಸಾಹಿತ್ಯ ಚರಿತ್ರೆ ಎಂಬ ಮೂರು ಕೃತಿಗಳ ಲೋಕಾರೆ್ಣ ಹಾಗೂ ಸಾಧಕರ ಸನ್ಮಾನ ಕಾರ್ಯಕ್ರಮದಲ್ಲಿ ಸ್ವಾಮೀಜಿಗಳ, ಗಣ್ಯರ, ಸಾವಿರಾರು ಜನರ ಉಪಸ್ಥಿತಿಯಲ್ಲಿ ಗೌರವದಿಂದ ಆತ್ಮೀಯವಾಗಿ ನೆನಪಿನ ಕಾಣಿಕೆ, ಶಾಲು, ಮಾಲಾರೆ್ಣ ಮಾಡಿ ಹೃದಯ ಸ್ಪರ್ಶಿಯಾಗಿ ಸನ್ಮಾನಿಸಿದರು. ಆಶೀರ್ವದಿಸಿದರು, ಶುಭ ಕೋರಿದರು.
ರೇವಾ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪಡೆದ, ಬೆಂಗಳೂರು ಸರಕಾರಿ ಕಲಾ ಮಹಾವಿದ್ಯಾಲಯದ ಅಸೋಸಿಯೇಟ್ ಪ್ರೊಫೆಸರ್ ಡಾ. ಪೂರ್ಣಿಮಾ ಬಗಲಿ, ಬೆಂಗಳೂರು, ಶಾಲಾ ಶಿಕ್ಷಣ ಮತ್ತು ಸಾಕ್ಷರತೆ,ಇಲಾಖೆಯ ಉಪ ಕಾರ್ಯದರ್ಶಿ ಉಮಾದೇವಿ, ಬೆಂಗಳೂರು, ಕರ್ನಾಟಕ ರಾಜ್ಯಾಪಾಲರ ವಿಶೇಷ ಕಾರ್ಯದರ್ಶಿ ಆರ್. ಪ್ರಭುಶಂಕರ್, ಕರ್ನಾಟಕ ವಿಶ್ವವಿದ್ಯಾಯದಿಂದ ಗ್ರಂಥಾಲಯ ಹಾಗೂ ಮಾಹಿತಿ ವಿಜ್ಞಾನ ವಿಷಯದಲ್ಲಿ ಪಿಎಚ್ಡಿ ಪದವಿ ಪಡೆದಿರುವ, ಕಳೆದ 23 ವರ್ಷಗಳಿಂದ ಕರ್ನಾಟಕ ಲಿಂಗಾಯತ ಶಿಕ್ಷಣ ಸಂಸ್ಥೆಯಲ್ಲಿ ಗ್ರಂಥಪಾಲಕರಾಗಿ ಸೇವೆ ಸಲ್ಲಿಸುತ್ತಿರುವ ಜೊತೆಗೆ ಸಾಹಿತ್ಯ, ಸಂಗೀತ, ಸಾಂಸ್ಕೃತಿಕ, ಧಾರ್ಮಿಕ, ಸಾಮಾಜಿಕ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ ಕಾರ್ಯದರ್ಶಿ, ಬಸವ ಪರಿಸರ ಸಂರಕ್ಷಣಾ ಸಮಿತಿಯ ಕಾರ್ಯದರ್ಶಿ, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಘಟಕದ ಉಪಾಧ್ಯಕ್ಷ, ಕರ್ನಾಟಕ ವಚನ ಸಾಹಿತ್ಯ ಪರಿಷತ್ನ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ, ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ ಟ್ರಸ್ಟಿ, ಗ್ರಂಥಪಾಲಕ ಡಾ. ಸುರೇಶ ಡಿ. ಹೊರಕೇರಿ, ಪ್ರೊ ಎಸ್ ವಿ ಪಟ್ಟಣಶೆಟ್ಟಿ ಅವರ 83ನೇ ಹುಟ್ಟು ಹಬ್ಬದ ಸಂಭ್ರಮ ಹಾಗೂ ಪ್ರೊ ಎಸ್ ವಿ ಪಟ್ಟಣಶೆಟ್ಟಿ ಅವರ ವಚನ ಸುಧೆ, ತುಪ್ಪದ ತಲೆಯವರು ಮತ್ತು ಸಂಕ್ಷಿಪ್ತ ಕನ್ನಡ ಸಾಹಿತ್ಯ ಚರಿತ್ರೆ ಎಂಬ ಮೂರು ಕೃತಿಗಳ ಜೊತೆಗೆ ಹಲವಾರು ಕೃತಿಗಳನ್ನು ರಚಿಸಿರುವ, ಬಸವತತ್ವ ಚಿಂತಕರು, ಪ್ರಸಾರಕರು, ಬಸವ ಪರಿಸರ ಸಂರಕ್ಷಣಾ ಸಮಿತಿಯ ಅಧ್ಯಕ್ಷರು, ಬಸವ ಕೇಂದ್ರದ ಕಾರ್ಯಾಧ್ಯಕ್ಷರು, ನಿವೃತ್ತ ಪ್ರಾಧ್ಯಾಪಕರು, ಸಾಹಿತಿಗಳು, ಹಿರಿಯರು, ಮಾರ್ಗದರ್ಶಕರು, ಹಿತೈಸಿಗಳಾದ ಪ್ರೊ ಎಸ್.ವಿ.ಪಟ್ಟಣಶೆಟ್ಟಿ ಅವರಿಗೆ ಗೌರವದಿಂದ ಹುತ್ಪೂರ್ವಕವಾಗಿ ಸನ್ಮಾನ ಮಾಡಿದರು.
ಕಾರ್ಯಕ್ರಮವನ್ನು ಹಿರಿಯ ಪತ್ರಕರ್ತರಾದ, ಪ್ರೊ ಎಸ್.ವಿ.ಪಟ್ಟಣಶೆಟ್ಟಿ ಅವರ ಮಗ ಗೀರೀಶ್ ಪಟ್ಟಣಶೆಟ್ಟಿ ಅವರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಹಯೋಗದೊಂದಿಗೆ ಅತ್ಯಂತ ವ್ಯವಸ್ಥಿತವಾಗಿ, ಅಚ್ಚುಕಟ್ಟಾಗಿ, ರುಚಿ, ಶುಚಿಯಾದ ಪ್ರಸಾದ್ದ ಜೊತೆಗೆ ಆಯೋಜನೆ ಮಾಡಿದ್ದರು. ಮುಂಡರಗಿ ಜಗದ್ಗುರು ತೋಂಟದಾರ್ಯ ಶಾಖಾ ಮಠದ ಪರಮಪೂಜ್ಯ ನಿಜಗುಣಪ್ರಭು ತೋಂಟದಾರ್ಯ ಮಹಾಸ್ವಾಮಿಗಳು, ಕರ್ನಾಟಕ ಸರ್ಕಾರದ ಬಸವ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರಾದ ಡಾ ವೀರಣ್ಣ ರಾಜೂರ, , ಲೆಕ್ಕಪರಿಶೋಧಕ ಸಿಎ ನಟರಾಜ್ ಮೂರಶಿಳ್ಳಿ, ಕನ್ನಡ ಪ್ರಭ ಬ್ಯುರೋ ಮುಖ್ಯಸ್ಥ ಮಲ್ಲಿಕಾರ್ಜುನ ಸಿದ್ದಣ್ಣನವರ, ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನ ಅಧ್ಯಕ್ಷ ಡಾ ಲಿಂಗರಾಜ ಅಂಗಡಿ, ಮಾಜಿ ಸಂಸದ ಐಜಿ ಸನದಿ, ಜಾಗತಿಕ ಲಿಂಗಾಯತ ಮಹಾಸಭಾದ ಧಾರವಾಡ ಜಿಲ್ಲಾಧ್ಯಕ್ಷ ಎಂ.ವಿ ಗೊಂಗಡಶೆಟ್ಟಿ, ಪ್ರೊ ಕೆ ಎಸ್ ಕೌಜಲಗಿ, ಪ್ರೊ ಶೋಭಾ ಜಾಬಿನ್, ಪ್ರತಿಭಾ ಪಟ್ಟಣಶೆಟ್ಟಿ , ಡಾ ಮೈತ್ರೇಯಿಣಿ ಗದಿಗೆಪ್ಪಗೌಡರ, ಗೀರೀಶ್ ಪಟ್ಟಣಶೆಟ್ಟಿ, ನಿವೃತ್ತ ಪ್ರಾಚಾರ್ಯ ಡಾ ಲಿಂಗರಾಜ ಡಿ. ಹೊರಕೇರಿ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ ಅಧ್ಯಕ್ಷ ಪ್ರೊ ಎಸ್.ಎಂ.ಸಾತ್ಮಾರ,
ಭರತ್, ವಿಭವ, ಪ್ರಣವ, ಪ್ರಿಯಾ ಬಗಲಿ, ಆರ್.ಸಿ ಹಲಗತ್ತಿ, ವಿಬಿ ನಿಟಾಲಿ, ವಿಜಿ ಪಾಟೀಲ್, ಚನ್ನಬಸಪ್ಪ ಧಾರವಾಡ ಶೆಟ್ಟರ್, ಪ್ರೊ ನಾಗವೇಣಿ, ಮೃತ್ಯುಂಜಯ ಮಟ್ಟಿ , ಎನ್ ಬಿ ಬೆಳ್ಳಿಗಟ್ಟಿ, ಬಿ ವಿ ಅಂಗಡಿ , ಪ್ರೊ ಎಸ್ ಆರ್ ಆಶಿ, ಕೆ. ಎಸ್ ಇನಾಮತಿ , ಪ್ರಭು ಅಂಗಡಿ, ಪ್ರಭು ಶೆಟ್ಟರ್, ವಿಜಯ ಬಾಕಳೆ , ಡಾ. ಬಸವಕುಮಾರ ತಲವಾಯಿ, ಬಸವರಾಜ ಹೊಸಕೇರಿ, ಮಲ್ಲಿಕಾರ್ಜುನ ಕಮ್ಮಾರ,ವೀರಣ್ಣ ಗೋವೇಶ್ವರ,ಬಸವರಾಜ್ ಯಕಲಾಸಪೂರ, ಸಿದ್ದಲಿಂಗೇಶ್ ವಾಲಿ, ಪ್ರೊ ವಿ.ಬಿ. ಮಾಗನೂರ, ಶಿವಾನಂದ ಬೆನ್ನಾಳೆ, ಎಂ. ಪಿ ಕುಂಬಾರ, ಡಿ.ಆರ್ ಕುಂಬಾರ , ವಿಜಯಲಕ್ಷ್ಮಿ ಗಂಗಲ್, ಶಾಂತಿ ಪಟ್ಟಣಶೆಟ್ಟಿ, ಡಾ ವೀರೇಶ್ ಹಂಡಗಿ , ಶಿವಯೋಗಿ ಮೂರ್ಖಂಡೆ, ವಸಂತ್ ಅಗಸಿಮನಿ, ಬಿ. ಎಸ್ ಮಾಳವಾಡ , ವಿದ್ಯಾ ವಂಟಮುರಿ, ಸಿದ್ದಮ್ಮ, ಅಜ್ಜಪ್ಪ ಬೆಂಡಿಗೇರಿ, ಸೇರಿದಂತೆ ಪ್ರೊ ಎಸ್ ವಿ ಪಟ್ಟಣಶೆಟ್ಟಿ ಅವರ ಸ್ನೇಹಿತರು, ಬಂಧುಗಳು, ಅಪಾರ ಸಂಖ್ಯೆಯಲ್ಲಿ ಭಾಗವಹಿಸಿ. ಪ್ರೊ ಎಸ್.ವಿ ಪಟ್ಟಣಶೆಟ್ಟಿ ಅವರಿಗೆ ಹುಟ್ಟು ಹಬ್ಬದ ಶುಭಾಶಯ ಕೋರಿದರು.
ಬೆಳಗಾವಿಗೆ ಬಂದ 20 ಜನ ಬಾಂಗ್ಲಾದವರಲ್ಲ : ಬಂಗಾಳ ಮೂಲದ ಚಿನ್ನದಂಗಡಿ ಕೂಲಿ ಕಾರ್ಮಿಕರು
ಭೀಕರ ಅಪಘಾತಕ್ಕೆ ಓರ್ವ ಸಾವು : ಮೂವರಿಗೆ ಗಂಭೀರ ಗಾಯ
ಶವ ವಾಹನದಲ್ಲಿ ಹಾಳಾದ ಸ್ಟ್ರೆಚರ್ : ಶವ ಸಾಗಿಸಲು ನಾಗರಿಕರ ಪರದಾಟ : ಸ್ಟ್ರೆಚರ್ ಖರೀದಿಗೆ ಪುರಸಭೆಯಲ್ಲಿ ದುಡ್ಡು ಇಲ್ಲವಾ?
ನೀಲಣ್ಣವರ ಪರ ಮಹಾರಾಷ್ಟ್ರದ ಹೂಡಿಕೆದಾರನ ಬ್ಯಾಟಿಂಗ್: ಪೊಲೀಸರ ವಿರುದ್ದ ಆಕ್ರೋಶದ ಅಡಿಯೊ ವೈರಲ್
ಒಳಚರಂಡಿಗೆ ನುಗ್ಗುತ್ತಿದೆ ಮಳೆಯ ನೀರು : ಗಲ್ಲಿಯಲ್ಲಾ ಗಬ್ಬು ವಾಸನೆ, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜನರ ಹಿಡಿಶಾಪ
ಭಾರಿ ಮಳೆ, ಗಾಳಿಯಿಂದ ಹಾರಿಹೋದ ಸರ್ಕಾರಿ ಶಾಲೆಗಳ ಮೇಲ್ಚಾವಣಿ : ಮರ ಕಂಬಗಳು ಧರೆಗೆ 