ನೂತನ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಗೌರವ ಸನ್ಮಾನ

ನೂತನ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಗೌರವ ಸನ್ಮಾನ Honorary honors to new Minister Satish Jarkiholi

ಪಾಲಬಾವಿ 08 : ನೂತನ ಸಿಎಂ ಡಿಕೆ ಶಿವಕುಮಾರ್ ಅವರ ಸಚಿವ ಸಂಪುಟದಲ್ಲಿ ಕರದಂಟು ನಾಡಿನ ಕರುಣಾಮಯಿ, ಸಾಹುಕಾರ್ ಸತೀಶ್ ಜಾರಕಿಹೊಳಿಯವರು ಲೋಕೋಪಯೋಗಿ ಇಲಾಖೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಪ್ರಯುಕ್ತ ಜೂನ್‌. 07ರಂದು ರವಿವಾರ ಸಂಜೆ 5ಗಂಟೆಗೆ ಗೋಕಾಕದ ಹಿಲ್ ಗಾರ್ಡನ್ ನಿವಾಸದಲ್ಲಿ ಪಾಲಬಾವಿ ಗ್ರಾಮಸ್ಥರು ಕಾಂಗ್ರೆಸ್ ಪಕ್ಷದ ಕಟ್ಟಾ ಕಾರ್ಯಕರ್ತರಾದ ಗಿರೆಪ್ಪ ಬಳಗಾರ, ಕುಮಾರ ಬಾಬಣ್ಣವರ, ಸಾಗರ ಕುರಬೆಟ್ಟಿ ನೇತ್ರತ್ವದಲ್ಲಿ ಕಾರ್ಯಕರ್ತರು ಸೇರಿಕೊಂಡು ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಶಾಲು ಹೊದಿಸಿ ಫಲಪುಷ್ಪ, ಹಾಕಿ ಗೌರವಿಸಿ ಸನ್ಮಾನಿಸಿದರು.ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಗಿರೆಪ್ಪ ಬಳಗಾರ, ಕುಮಾರ ಬಾಬಣ್ಣವರ, ಸಾಗರ ಕುರಬೆಟ್ಟಿ, ಹೈದರ್ ಮುಜಾವರ, ಮಹಾಲಿಂಗ ಮೂಡಲಗಿ, ಸಚಿವರ ಆಪ್ತ ಸಹಾಯಕ ಬಸವರಾಜ ಸಾಯನ್ನವರ, ರಾಮಪ್ಪ ತೇಗೂರ, ಮಹಾಲಿಂಗ ಜನವಾಡ, ಬರಮಪ್ಪ ಬಡಚಿ, ಸಂದೇಶ ಹಿರೇಮಠ, ಅಲ್ಲಪ್ಪ ಕಾಡಶೆಟ್ಟಿ ಇತರರು ಇದ್ದರು.