ಭಾರತೀಯ ಸೇನೆ ನಿವೃತ್ತ ಅಧಿಕಾರಿಗೆ ಸನ್ಮಾನ ಸಮಾರಂಭ

ಭಾರತೀಯ ಸೇನೆ ನಿವೃತ್ತ ಅಧಿಕಾರಿಗೆ ಸನ್ಮಾನ ಸಮಾರಂಭ  Honor ceremony for retired Indian Army officer

ತಾಳಿಕೋಟಿ 04: ಭಾರತೀಯ ಸೇನೆಯ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ನಲ್ಲಿ ಕಾರ್ಯನಿರ್ವಾಹಕ ಸಹಾಯಕ ಉಪ ನೀರೀಕ್ಷಕರಾಗಿ 38 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿ ತಾಯಿನಾಡಿಗೆ ಮರಳುತ್ತಿರುವ ದೇವರ ಹುಲುಗಬಾಳ ಗ್ರಾಮದ ಮೊಹಮ್ಮದ್ ಯೂಸೂಫ ಅಬ್ದುಲಸಾಬ ಹಾದಿಮನಿ ಇವರ ಸ್ವಾಗತ ಹಾಗೂ ಸನ್ಮಾನ ಸಮಾರಂಭ ಜೂನ್ 6 ಶನಿವಾರ ರಂದು ನಡೆಯಲಿದೆ.  

ಅಂದು ಪಟ್ಟಣದ ಈದ್ಗಾ ಶಾದಿ ಹಾಲ್ ನಲ್ಲಿ ಬೆಳಿಗ್ಗೆ 11:30 ಗಂಟೆಗೆ ನಡೆಯಲಿರುವ ಈ ಸಮಾರಂಭವನ್ನು ಮುದ್ದೇಬಿಹಾಳ ಶಾಸಕ ಹಾಗೂ ಕೆ ಎಸ್ ಡಿ ಎಲ್ ಅಧ್ಯಕ್ಷರಾದ ಸಿ ಎಸ್ ನಾಡಗೌಡ ಅಪ್ಪಾಜಿ ಅವರು ಉದ್ಘಾಟಿಸುವರು. ಜಮಾತೆ ಇಸ್ಲಾಮಿ ಹಿಂದ್ ರಾಜ್ಯ ಕಾರ್ಯದರ್ಶಿ ಮೊಹಮ್ಮದ್ ಯೂಸೂಫ ಕಣ್ಣಿ ವಿಶೇಷ ಆಹ್ವಾನಿತರಾಗಿರುವರು. ಬಿಜೆಪಿ ರಾಜ್ಯ ರೈತ ಮೋರ್ಚಾ ಅಧ್ಯಕ್ಷ ಎ ಎಸ್ ಪಾಟೀಲ(ನಡಹಳ್ಳಿ) ಮುಖ್ಯ ಅತಿಥಿಗಳಾಗಿ ಆಗಮಿಸುವರು.  

ಸಿಎಪಿಎಫ್ ಅಧ್ಯಕ್ಷ ರಾಮನಗೌಡ ಬಿರಾದಾರ ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ದೇವರ ಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ, ಗೋವಾ ಸ್ವಾತಂತ್ರ್ಯ ಹೋರಾಟಗಾರ ಬಿ ಎಚ್ ಮಾಗಿ, ವಿಡಿಸಿಸಿ ಬ್ಯಾಂಕ್ ನಿರ್ದೇಶಕ ಬಿಎಸ್ ಪಾಟೀಲ ಯಾಳಗಿ, ಮುದ್ದೇಬಿಹಾಳ ತಹಸಿಲ್ದಾರ್ ಕೀರ್ತಿ ಚಾಲಕ, ತಾಳಿಕೋಟಿ ತಹಸಿಲ್ದಾರ್ ಡಾ. ವಿನಯಾ ಹೂಗಾರ, ಬಿಇಓ ಬಿ.ಎಸ್‌.ಸಾವಳಗಿ, ಸಿಪಿಐ ಮೊಹಮ್ಮದ್ ಫಸಿಯುದ್ದೀನ, ಕ್ಷೇತ್ರ ಸಮನ್ವಯಾಧಿಕಾರಿ ಆರಿ​‍್ಬ. ದಮೂರಮಠ,ತಾಳಿಕೋಟಿ ಪಿಎಸ್‌ಐ ಜ್ಯೋತಿ ಕೋತ, ಮುದ್ದೇಬಿಹಾಳ ಪಿಎಸ್‌ಐ ಸಂಜು ತಿಪ್ಪಾರೆಡ್ಡಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಆನಂದಗೌಡ ದೊಡಮನಿ, ಬಿಜೆಪಿ ದುರೀಣೆ ಮಂಗಳಾದೇವಿ ಬಿರಾದಾರ, ಜಿ.ಪಂ. ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ,

ರೈತ ಸಂಘ ರಾಜ್ಯ ಉಪಾಧ್ಯಕ್ಷ ಶಾಂತಗೌಡ ಪಾಟೀಲ ನಡಹಳ್ಳಿ, ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ಆರ್ ಎಸ್ ಪಾಟೀಲ ಕೂಚಬಾಳ, ಶಿಕ್ಷಕ ಅಶೋಕ ಹಂಚಲಿ, ವಿ.ವಿ.ಸಂಘದ ನಿರ್ದೇಶಕ ಶಂಕರಗೌಡ ಹಿಪ್ಪರಗಿ, ಮುದ್ದೇಬಿಹಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ, ಪ್ಯಾರಾ ಮಿಲಿಟರಿ ನಿವೃತ್ತಿ ಸಂಘ ಅಧ್ಯಕ್ಷ ಅಬ್ದುಲ್ ಜಬ್ಬಾರ ಪಲ್ಟಾನ,ಜ.ಇ.ಹಿಂ. ಅಧ್ಯಕ್ಷ ಮುಜಾಹಿದ್ ನಮಾಜಕಟ್ಟಿ, ಕಾಂಗ್ರೆಸ್ ಮುಖಂಡರಾದ ಸಿ.ಬಿ.ಅಸ್ಕಿ, ಕಾಸಿಂ ಪಟೇಲ ಪಾಟೀಲ,ಇಂಜನೀಯರ ಮುರ್ತುಜಾ ಮೇತ್ರಿ, ಬಸನಗೌಡ ಹಡಲಗೇರಿ ಕೊಣ್ಣೂರ, ಇಮಾಮಸಾಬ ಅವಟಿ, ವಕೀಲ ಏನ್ ಆರ್ ಮೊಕಾಶಿ, ಆಗಮಿಸುವರು.  ಸದರಿ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.