ಹಾವೇರಿ ವಿಶ್ವವಿದ್ಯಾಲಯ ಪದವಿ ವಿದ್ಯಾರ್ಥಿಗಳ ಪರೀಕ್ಷೆ ವೇಳಾಪಟ್ಟಿ ಯಡವಟ್ಟು ಒಂದೇ ದಿನ ಎರಡು ಪರೀಕ್ಷೆ: ಗೊಂದಲ ಸರಿಪಡಿಸಲು ಎಸ್‌ಎಫ್‌ಐ ಆಗ್ರಹ

ಹಾವೇರಿ ವಿಶ್ವವಿದ್ಯಾಲಯ ಪದವಿ ವಿದ್ಯಾರ್ಥಿಗಳ ಪರೀಕ್ಷೆ ವೇಳಾಪಟ್ಟಿ ಯಡವಟ್ಟು ಒಂದೇ ದಿನ ಎರಡು ಪರೀಕ್ಷೆ:  ಗೊಂದಲ ಸರಿಪಡಿಸಲು ಎಸ್‌ಎಫ್‌ಐ ಆಗ್ರಹ Haveri University graduate students' exam schedule is confusing, two exams on the same day: SFI dema

ಪ್ರಾಂಶುಪಾರ ಮೂಲಕ ವಿವಿ ಉಪಕುಲಪತಿ ಸುರೇಶ್ ಜಂಗಮಶೆಟ್ಟಿ ಅವರಿಗೆ ಮನವಿ ಸಲ್ಲಿಸಿದ ವಿದ್ಯಾರ್ಥಿಗಳು 

ಹಾವೇರಿ 04 : ಹಾವೇರಿ ವಿಶ್ವವಿದ್ಯಾಲಯಪದವಿ ವಿದ್ಯಾರ್ಥಿಗಳ ಸೆಮಿಸ್ಟರ್ ಪರೀಕ್ಷೆ ವೇಳಾಪಟ್ಟಿ ಗೊಂದಲ ಪರಿಹರಿಸಿ, ಕೆಲವು ವಿಷಯ ಪರೀಕ್ಷೆಗಳನ್ನು ಮುಂದೂಡವಂತೆ ಆಗ್ರಹಿಸಿ ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್‌ಎಫ್‌ಐ) ಹಾವೇರಿ ಜಿಲ್ಲಾ ಸಮಿತಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ಗಾಂಧಿಪುರ ಸರಕಾರಿ ಪ್ರಥಮ ದರ್ಜೆ ಕಾಲೇಜ್ ಎದುರು ಪ್ರಾಂಶುಪಾಲರ ಮೂಲಕ ಹಾವೇರಿ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೋ. ಸುರೇಶ್ ಜಂಗಮಶೆಟ್ಟಿ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಎಸ್‌ಎಫ್‌ಐ ಜಿಲ್ಲಾ ಮುಖಂಡ ಅರುಣ್ ನಗವತ್ ಮಾತನಾಡಿ, ಹಾವೇರಿ ವಿವಿ ವ್ಯಾಪ್ತಿಯಲ್ಲಿ ಬರುವ  ಪದವಿ ವಿದ್ಯಾರ್ಥಿಗಳ ಪರೀಕ್ಷೆ ವೇಳಾಪಟ್ಟಿನ ಧಿಡೀರನೆ  ಪ್ರಕಟಿಸುತ್ತಿದ್ದಾರೆ.

ವಿದ್ಯಾರ್ಥಿ ವಿರೋಧಿ ನೀತಿಯನ್ನು ಮುಂದುವರೆಸಿಕೊಂಡು ಬರುತ್ತಿರುವ ವಿವಿ ಆಡಳಿತ ಮಂಡಳಿ ಸರಿಯಿಲ್ಲ. ಶೈಕ್ಷಣಿಕ ವರ್ಷದ ವೇಳಾ ಪಟ್ಟಿ ಸರಿದೂಗಿಸುವ ಉದ್ದೇಶದಿಂದ ವಿದ್ಯಾರ್ಥಿಗಳ ಮೇಲೆ ಒತ್ತಡ ಹೇರುವುದು ಸರಿಯಲ್ಲ. ಒಂದೇ ದಿನದಲ್ಲಿ  ಎರಡು ಪರೀಕ್ಷೆಗಳನ್ನು ನಡೆಸುವುದು ವಿದ್ಯಾರ್ಥಿಗಳ ಮಾನಸಿಕ ಒತ್ತಡ, ಹಿಂಸೆ ನೀಡಿದಂತೆ ಆಗುತ್ತದೆ ಆದರಿಂದ ಕೂಡಲೇ ಈಗಾಗಲೇ ಬಿಡುಗಡೆ ಮಾಡಿದ ಪರೀಕ್ಷಾ ವೇಳಾ ಪಟ್ಟಿ ಹಿಂಪಡೆದು ವಿದ್ಯಾರ್ಥಿಗಳ ಅನುಕೂಲಕ್ಕೆ ತಕ್ಕಂತೆ ವೇಳಾಪಟ್ಟಿ ಪರಿಷ್ಕರಣೆ ಮಾಡಬೇಕೆಂದು ಆಗ್ರಹಿಸಿದರು. ವಿದ್ಯಾರ್ಥಿಗಳ ಮನವಿಗೆ ಸ್ಪಂದಿಸದಿದರೆ ಹಾವೇರಿ ವಿವಿ ಎದುರು ಬೃಹತ್ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ವಿದ್ಯಾರ್ಥಿನಿ ಜ್ಯೋತಿ ಮಾತನಾಡಿ, ಒಂದೇ ದಿನದಲ್ಲಿ ಎರಡೆರಡು ಪರೀಕ್ಷೆ ಬರೆಯುವುದು ತುಂಬಾ ಕಷ್ಟವಾಗುತ್ತದೆ. ಓದುವುದು ಪರೀಕ್ಷೆಗೆ ತಯಾರಿಯಾಗುವುದು ತುರಾತುರಿಯಾಗುತ್ತದೆ. ಸಮಯಕ್ಕೆ ಸರಿಯಾಗಿ ಬಸ್ ಗಳು ಇಲ್ಲದೆ ಪರೀಕ್ಷೆಯನ್ನು ಎದುರಿಸಲು ಹಿನ್ನಡೆ ಆಗುತ್ತದೆ ನಮ್ಮ ಮನವಿಗೆ ಸ್ಪಂದಿಸಿ ವಿದ್ಯಾರ್ಥಿಗಳಿಗೆ ಆದ ಅನ್ಯಾಯವನ್ನು ತಡೆಗಟ್ಟ ಬೇಕು ಎಂದರು.  ಈ ಪರೀಕ್ಷೆ ವೇಳಾಪಟ್ಟಿನ ಮುಂದೂಡಬೇಕೆಂದು ವಿದ್ಯಾರ್ಥಿನಿ ಅಳಲು ತೊಡಿಕೊಂಡರು.

ಈ ಸಂದರ್ಭದಲ್ಲಿ ಮುಖಂಡರಾದ ಕಿರಣ್ ನಾಯ್ಕ್‌, ದಿಲ್ಲೇಪ್ಪ ಗೋಣೆಪ್ಪನವರ, ಕಿರಣ್ ಪೂಜಾರ್,  ಸುನಿಲ್ ಎಲ್, ನಾಗರಾಜ್ ದೊಡ್ಡಮನಿ, ನಾಗರಾಜ್ ತಿಮ್ಮಣ್ಣನವರ್, ನರಶಿಮ್ಮ  ಮ್ಯಗಳಕಟ್ಟಿ, ಪ್ರೇಮ್ ಕುಮಾರ್ ಲಮಾಣಿ, ಆಕಾಶ್ ನಾಯ್ಕ್‌, ವಿನೋದ್ ಎಲ್, ಸಾಗರ್ ರಂಗಣ್ಣನವರ,  ಪರಶುರಾಮ್ ಬಸಾಪುರ, ಸುನಿಲ್ ಲಮಾಣಿ,  ಪ್ರೀತಿ ಭದ್ರಪುರ, ಲಕ್ಷ್ಮೀ  ಕೊಲ್ಲೂರು, ಕೀರ್ತಿ ಎನ್, ಪೂಜಾ ಮೇಲ್ಮುರಿ, ಪವಿತ್ರ ಕಂಚರಗಟ್ಟಿ, ಸೌಂದರ್ಯ ಎಲ್, ಪಲ್ಲವಿ ಗೆಜ್ಜೆಹಳ್ಳಿ  ಅನೇಕ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.