ಸಾಧನೆಗೆ ಶ್ರಮವೊಂದೇ ರಹದಾರಿ : ಪ್ರೊ. ಎಸ್ ಎಸ್ ಹರ್ಲಾಪುರ

ಸಾಧನೆಗೆ ಶ್ರಮವೊಂದೇ ರಹದಾರಿ : ಪ್ರೊ. ಎಸ್ ಎಸ್ ಹರ್ಲಾಪುರ Hard work is the only path to success: Prof. SS Harlapura

ಗದಗ  27: ಪ್ರತಿಯೊಬ್ಬರೂ ಶ್ರಮತತ್ವದ ಮೂಲಕವೇ ಬದುಕನ್ನು ಕಟ್ಟಿಕೊಳ್ಳಬೇಕು. ಸಾಧನೆಗೆ ಅಡ್ಡದಾರಿಗಳಿಲ್ಲ, ಶ್ರಮದ ರಹದಾರಿಯಿದೆ. ಅದರ ಮೂಲಕ ಸಾಗಿದಾಗಲೇ ಮನುಷ್ಯ ಪರಿಪೂರ್ಣ ವ್ಯಕ್ತಿತ್ವವಂತನಾಗುತ್ತಾನೆ ಎಂದು ಹಿರಿಯ ಸಾಹಿತಿಗಳಾದ ಪ್ರೊ. ಎಸ್‌. ಎಸ್‌. ಹರ್ಲಾಪುರ ತಿಳಿಸಿದರು.  

ಗದುಗಿನ ಕೆ.ಎಲ್‌.ಇ ಸಂಸ್ಥೆಯ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ನಡೆದ 2025-26 ನೇ ಸಾಲಿನ ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು. 

ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು ನಮ್ಮ ದಿನನಿತ್ಯದ ಚಟುವಟಿಕೆಗಳು ನಮ್ಮ ವ್ಯಕ್ತಿತ್ವವನ್ನು ನಿರೂಪಿಸುತ್ತವೆ. ಅಂತೆಯೇ ವಿದ್ಯಾರ್ಥಿಗಳಲ್ಲಿ ಶಿಕ್ಷಕರು ಏನನ್ನು ಬಿತ್ತುತ್ತಾರೆಯೋ ಅಂತೆಯೇ ವಿದ್ಯಾರ್ಥಿಗಳ ಬೆಳವಣಿಗೆ ಇರುತ್ತದೆ. ಶಿಕ್ಷಣದ ಮೂಲ ಉದ್ದೇಶ ವಿಚಾರವಂತ ಸ್ವತಂತ್ರ್ಯ ಆಲೋಚನಾಶೀಲ ವಿದ್ಯಾರ್ಥಿಗಳನ್ನು ಸೃಷ್ಠಿಸ   

ಕಾರ್ಯಕ್ರಮದ ಅಧ್ಯಕ್ಷೀಯ ನುಡಿಗಳನ್ನಾಡಿದ  ಕೆ.ಎಲ್‌.ಇ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರಾದ ಶ್ರೀ. ಮುಂಜುನಾಥ ಮುನವಳ್ಳಿ ಅವರು ಮಾತನಾಡಿ ಶಿಕ್ಷಣ ಸಂಸ್ಥೆಗಳು ಮತ್ತು ಪ್ರಾಧ್ಯಾಪಕರು ವರ್ಷದುದ್ದಕ್ಕೂ ಆಯೋಜಿಸುವ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಸಂಸ್ಕಾರ-ಸಂಸ್ಕೃತಿ ಮಾನವೀಯ ಮೌಲ್ಯಗಳನ್ನು ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಾರೆ. ವಿಜ್ಞಾನ ಮತ್ತು ತಂತ್ರಜ್ಞಾನದಿಂದಾಗಿ ಸೆಲ್ಫೀ ಲೋಕಗಳಲ್ಲಿ ಮುಳುಗಿದ ವಿದ್ಯಾರ್ಥಿ ಸಮುದಾಯವು ಅದರಿಂದ ಹೊರಬಂದು ಸಮಾಜವೇ ಗುರುತಿಸುವಂತಹ ಸಾಧಕರಾಗಬೇಕು. ವ್ಯಕ್ತಿಗಿಂತ ವ್ಯಕ್ತಿತ್ವ ದೊಡ್ಡದು, ಉತ್ತಮ ವ್ಯಕ್ತಿತ್ವ ನಿರ್ಮಾಣದ ಗುಣಗಳಾದ ಜೀವನಕ್ಕೊಂದು ಗುರಿ, ಸಾಧನೆಗೆ ಕಠಿಣ ಪರಿಶ್ರಮ, ಶಿಸ್ತು, ಸಮಯ ಪಾಲನೆ, ಬದ್ಧತೆಯನ್ನು ಮೈಗೂಡಿಸಿಕೊಳ್ಳಬೇಕು. ಇಲ್ಲದಿದ್ದರೆ ಗುರಿ ಇರದ ಬದುಕು ಚುಕ್ಕಾಣಿ ಇಲ್ಲದ ಹಡಗಿನಂತಾಗುತ್ತದೆ ಎಂದು  ವಿದ್ಯಾರ್ಥಿಗಳಿಗೆ ಕರೆ ನೀಡಿದರು 

ಸ್ನೇಹಾ ತಳವಾರ ಪ್ರಾರ್ಥಿಸಿದರು. ಪ್ರಾಚಾರ್ಯರಾದ ಡಾ. ಎ. ಕೆ. ಮಠ ಪ್ರಾಸ್ತಾವಿಕ ಹಾಗೂ ಸ್ವಾಗತನುಡಿಗಳನ್ನಾಡಿದರು. ಪ್ರೊ. ಯಲ್ಲಪ್ಪ ಅಡಕಾವು ಅತಿಥಿಗಳನ್ನು ಪರಿಚಯಿಸಿದರು. ಕಾಲೇಜು ಒಕ್ಕೂಟದ ಉಪಾಧ್ಯಕ್ಷರಾದ ಡಾ. ವೀಣಾ ಈ ಕಾಲೇಜಿನ ವಾರ್ಷಿಕ ಹಾಗೂ ಒಕ್ಕೂಟದ ವರದಿ, ಡಾ. ವಿಠ್ಠಲ ಕೋಳಿ ಸಾಂಸ್ಕೃತಿಕ ಸಂಘದ ವರದಿಯನ್ನು ಮತ್ತು ಕ್ರೀಡಾ ವರದಿಯನ್ನು ಪ್ರೊ. ರಾಜು ಯಲಬುರ್ಗಿ ಪ್ರಸ್ತುತಪಡಿಸಿದರು. ಅಂತಿಮ ವರ್ಷದ ಹಲವು ವಿದ್ಯಾರ್ಥಿಗಳು ತಮ್ಮ ಅನಿಸಿಕೆಯನ್ನು ಹಂಚಿಕೊಂಡರು. 

ಕಾರ್ಯಕ್ರಮದಲ್ಲಿ ವಿವಿಧ ವಿಷಯಗಳಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ನಗದು ಬಹುಮಾನ, ಕ್ರೀಡಾ ಮತ್ತು ಸಾಂಸ್ಕೃತಿಕ ವಿಭಾಗದ ವತಿಯಿಂದ ಬಹುಮಾನಗಳನ್ನು ವಿತರಿಸಲಾಯಿತು. ಡಾ. ವೀಣಾ ಈ ಎಲ್ಲರಿಗೂ ವಂದಿಸಿದರು. ಕು.ಪಲ್ಲವಿ ಮತ್ತು ಮೌಲಾಲಿ ನಿರೂಪಿಸಿದರು. ವಿದ್ಯಾರ್ಥಿ ಪ್ರಧಾನ ಕಾರ್ಯದರ್ಶಿಗಳಾದ ಕು. ಸವಿತಾ ಕಾಮತ್ ಮತ್ತು ಕು.ಪಲ್ಲವಿ ಹಂಚಿನಾಳ ಉಪಸ್ಥಿತರಿದ್ದರು. ಮಹಾವಿದ್ಯಾಲಯದ ಸಮಸ್ತ ಸಿಬ್ಬಂದಿ ವರ್ಗ, ವಿದ್ಯಾರ್ಥಿ ವೃಂದದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.