ಅಜ್ಞಾನದ ಕತ್ತಲೆಯನ್ನು ಹೋಗಲಾಡಿಸಿ ಜ್ಞಾನದ ಬೆಳಕು ಚೆಲ್ಲುವುದೇ ಗುರುಪೂರ್ಣಿಮೆ: ಶ್ರೀಗಳು
Guru Purnima is about dispelling the darkness of ignorance and shedding the light of knowledge: Sri
ಲಕ್ಷ್ಮೇಶ್ವರ, ಜು.30: ಗುರುಪೂರ್ಣಿಮೆ ಅಂಗವಾಗಿ ಮುಕ್ತಿಮಂದಿರ ಕ್ಷೇತ್ರದಲ್ಲಿ ಶ್ರೀ ಶ್ರೀ ಶ್ರೀ 1008 ಜಗದ್ಗುರು ಲಿಂಗೈಕ್ಯ ವೀರ ಗಂಗಾಧರ ಜಗದ್ಗುರುಗಳ ಗದ್ದುಗೆ ಪೂಜೆ ಹಾಗೂ ಶ್ರೀ ಷ.ಬ್ರ. ವಿಮಲರೇಣುಕ ವೀರ ಮುಕ್ತಿಮುನಿ ಶಿವಾಚಾರ್ಯ ಮಹಾಸ್ವಾಮೀಜಿಗಳ ಆಶೀರ್ವಾದ ಕಾರ್ಯಕ್ರಮ ಭಕ್ತಿಭಾವದಿಂದ ನಡೆಯಿತು.
ಈ ಸಂದರ್ಭದಲ್ಲಿ ಆಶೀರ್ವಚನ ನೀಡಿದ ಶ್ರೀಗಳು, "ಗುರುಪೂರ್ಣಿಮೆ ಭಾರತೀಯ ಸಂಸ್ಕೃತಿಯ ಅಮೂಲ್ಯ ಪರಂಪರೆಯಾಗಿದೆ. ಈ ಹಬ್ಬ ವಿನಯ, ಶೀಲ, ಕೃತಜ್ಞತೆ ಮತ್ತು ಜ್ಞಾನದ ಮಹತ್ವವನ್ನು ನೆನಪಿಸುತ್ತದೆ.
ಜೀವನದಲ್ಲಿ ಎಷ್ಟೇ ಎತ್ತರಕ್ಕೇರಿದರೂ ನಮಗೆ ಮೊದಲ ಹೆಜ್ಜೆ ಇಡಲು ಕಲಿಸಿದ ಗುರುಗಳನ್ನು ಎಂದಿಗೂ ಮರೆಯಬಾರದು. ಅವರ ಆಶೀರ್ವಾದವೇ ವ್ಯಕ್ತಿಯ ಸಾಧನೆಗೆ ಭದ್ರ ಬುನಾದಿಯಾಗಿದೆ" ಎಂದು ಹೇಳಿದರು.
"ಗುರು ಎಂದರೆ ಅಜ್ಞಾನದ ಕತ್ತಲೆಯನ್ನು ದೂರ ಮಾಡಿ ಜ್ಞಾನದ ಬೆಳಕನ್ನು ತೋರಿಸುವ ದಿವ್ಯಶಕ್ತಿ. ಆತ್ಮಜಾಗೃತಿ ಮೂಡಿಸಿ ಸತ್ಪಥದಲ್ಲಿ ಸಾಗಲು ಮಾರ್ಗದರ್ಶನ ನೀಡುವವರೇ ಗುರುಗಳು. ಗುರುಪೂರ್ಣಿಮೆಯನ್ನು ಗುರುಗಳ ಆಶೀರ್ವಾದ, ಜ್ಞಾನದ ಬೆಳಕು ಹಾಗೂ ಸತ್ಕಲ್ಪಗಳೊಂದಿಗೆ ಆಚರಿಸಿದಾಗ ಅದರ ನಿಜವಾದ ಮಹತ್ವ ಸಾಕಾರವಾಗುತ್ತದೆ" ಎಂದು ತಿಳಿಸಿದರು.
ಜ್ಞಾನಸಂಪನ್ನ ಸಮಾಜವೇ ಶಾಂತಿ, ಸಂಸ್ಕೃತಿ ಹಾಗೂ ಸದಾಚಾರದ ಭವ್ಯ ರಾಷ್ಟ್ರ ನಿರ್ಮಾಣಕ್ಕೆ ಕಾರಣವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು. ಈ ಸಂದರ್ಭದಲ್ಲಿ ನಿರ್ಮಲಾದೇವಿ ವೀರಣ್ಣ ಪವಾಡದ, ಲಾವಣ್ಯ ಅನ್ನದಾನೇಶ್ವರ ಪವಾಡದ, ಲಕ್ಷ್ಮೀ ವೀರಸೋಮೇಶ್ವರ ಪವಾಡದ, ಶಿವಯೋಗರಾಜ, ವಿಜಯ ವೀಣಾ, ನಮ್ರತಾ, ನಂದೀಶ್ವರ ಸೇರಿದಂತೆ ಭಕ್ತರು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 