40ನೇ ದಿನಕ್ಕೆ ಕಾಲಿಟ್ಟ ಸರಕಾರಿ ವೈದ್ಯಕೀಯ ಕಾಲೇಜು ಹೋರಾಟ
Government medical college protest enters 40th day
ವಿಜಯಪುರ, 28 : 40 ನೇ ದಿನಕ್ಕೆ ಕಾಲಿಟ್ಟ ಸರಕಾರಿ ವೈದ್ಯಕೀಯ ಕಾಲೇಜು ಹೋರಾಟ ಸಮಿತಿಯು ರಕ್ತ ಸಹಿ ಸಂಗ್ರಹಣ ಚಳುವಳಿಯನ್ನು ಹಮ್ಮಿಕೊಳ್ಳಲಾಗಿತ್ತು. ಈ ರಕ್ತದಲ್ಲಿ ಸಹಿಸಂಗ್ರಹ ಮಾಡಿದ ಬಟ್ಟೆಯನ್ನು ಮಾನ್ಯ ಜಿಲ್ಲಾಧಿಕಾರಿ ಗಳ ಮೂಲಕ ಮಾನ್ಯ ಮುಖ್ಯಮಂತ್ರಿಗಳಿಗೆ ಕಳಿಸಿಕೊಡಲಾಯಿತು.
ಈ ಹೋರಾಟಕ್ಕೆ ವಿಜಯಪುರ ಜಿಲ್ಲೆಯ ಸಾರ್ವಜನಿಕರು, ವಿದ್ಯಾರ್ಥಿಗಳು, ಯುವಜನರು, ಮಹಿಳೆಯರು, ಹೋರಾಟಗಾರರು ಬೆಂಬಲಿಸಿ ರಕ್ತದ ಮೂಲಕ ಸಹಿ ಹಾಕಿದರು. ಈ ರಕ್ತ ಸಹಿ ಸಂಗ್ರಹ ಜನರ ಒಗ್ಗಟ್ಟು ಮತ್ತು ತ್ಯಾಗದ ಶಕ್ತಿಯನ್ನು ಬಿಂಬಿಸುತ್ತದೆ. ಇದು ಸರಕಾರಕ್ಕೆ ಒಗ್ಗಟ್ಟು ಮತ್ತು ಹೋರಾಟದ ಶಕ್ತಿಯನ್ನು ತೋರಿಸುತ್ತದೆ.
ಈ ರಕ್ತ ಸಹಿ ಚಳುವಳಿ ಹಿಂಸಾತ್ಮಕ ಪ್ರತಿರೋಧದ ಬದಲು ಅಹಿಂಸೆಯ ಶಸ್ತ್ರ. ಈ ಒಂದು ರಕ್ತ ಸಹಿ ಸಂಗ್ರಹ ಚಳುವಳಿ ಸರಕಾರಿ ವೈದ್ಯಕೀಯ ಕಾಲೇಜಿಗಾಗಿ ಜೀವನವನ್ನೆ ಒತ್ತೆ ಇಡುವ ಸನ್ನದ್ದತೆ ಎಂಬ ಸಂದೇಶವು ಸರಕಾರಕ್ಕೆ ಹೋರಾಟಗಾರರ ದೃಡ ನಿಶ್ಚಯವನ್ನು ತಿಳಿಸುತ್ತದೆ.
ಈ ನಿಯೋಗದಲ್ಲಿ ಹೋರಾಟ ಸಮಿತಿಯ ಅರವಿಂದ ಕುಲಕರ್ಣಿ, ಅಕ್ರಂಮಾಷಳಕರ, ಮಲ್ಲಿಕಾರ್ಜುನ ಬಟಗಿ, ಸಿದ್ದಲಿಂಗ ಬಾಗೇವಾಡಿ,ಲಲಿತಾ ಬಿಜ್ಜರಗಿ, ಸುರೇಶ ಬಿಜಾಪುರ, ಲಕ್ಷ್ಮಣ ಹಂದ್ರಾಳ, ಭರತಕುಮಾರ ಹೆಚ್ ಟಿ, ಶ್ರೀನಾಥ ಪೂಜಾರಿ, ಲಕ್ಷ್ಮಣ ಕಂಬಾಗಿ, ನೀಲಾಂಬಿಕಾ ಬಿರಾದರ, ಮೀನಾಕ್ಷಿ ಸಿಂಗೆ, ಕಿರಣ ಮೇಲಿಕೆರಿ, ಕಾವೇರಿ ರಜಪೂತ, ಎಮ್ ಎಮ್ ಗುರಿಕಾರ ಹಾಗೂ ಮುಂತಾದವರು ಭಾಗವಹಿಸಿದ್ದರು.
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ 