ಯರಗಲ್ನಲ್ಲಿ ರುಕ್ಮಿಣಿ ಪಾಂಡುರಂಗ ವಿಠ್ಠಲ ಮಂದಿರ ಉದ್ಘಾಟನೆ
Inauguration of the Rukmini Panduranga Vitthala Temple in Yaragal
ಸಿಂದಗಿ : ಯರಗಲ್ ಗ್ರಾಮವೆಂದರೆ ಧಾರ್ಮಿಕ ನೆಲೆಗಟ್ಟಿನಲ್ಲಿರುವ ಗ್ರಾಮವೆಂದರೆ ತಪ್ಪಾಗದು ದೇವಾನುದೇವತೆಗೆ ನೆಲಸಿರುವ ಈ ಗ್ರಾಮದಲ್ಲಿ ಪಾಂಡುರಂಗ ರುಕ್ಮೀಣಿ ಧರ್ಶನ ಸಿಕ್ಕಿರುವ ನಮ್ಮೆಲ್ಲರ ಸೌಬಾಗ್ಯ. ಮನುಷ್ಯರ ಹುಟ್ಟು ಎನ್ನುವುದು ಆಕಸ್ಮಿಕ ಸಾವು ಎನ್ನುವುದು ಮಾತ್ರ ನಿಶ್ಚಿತ. ಹುಟು ಸಾವಿನ ಮಧ್ಯ ಮನುಷ್ಯ ಸ್ವಾರ್ಥಕಕ್ಕಾಗಿ ಬದುಕದೇ ನಾವು ಸಮಾಜಕ್ಕಾಗಿ ನಾವು ಎನು ಕೊಡುಗೆ ನೀಡಿದ್ದೇವೆ ಎನ್ನುವುದು ಮುಖ್ಯ. ಬದುಕಿನುದ್ದಕ್ಕೂ ನಿಸ್ವಾರ್ಥಿಗಳಾಗಿ ಬದುಕಿದಾಗ ಮಾತ್ರ ಆ ಬಗವಂತ ಮೆಚ್ಚಲು ಸಾಧ್ಯವಿದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ತಾಲೂಕಿನ ಯರಗಲ್ ಬಿ.ಕೆ.ಗ್ರಾಮದಲ್ಲಿ ಸದ್ಬಕ್ತ ಮಂಡಳಿ ನಿರ್ಮಿಸಿರುವ ರುಕ್ಮೀಣಿ ಪಾಂಡುರಂಗನ ಮಂದಿರದ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಇಂದಿನ ತಂತ್ರಜ್ಞಾನ ಯುಗದಲ್ಲಿ ಅವಸರದ ಜೀವನ ಕಳೇಯುತ್ತಿದ್ದೇವೆ ನಮ್ಮ ಸಮಾಜ, ಮಠ-ಮಂದಿರಗಳೆಂದರೆ ಏನು ಎನ್ನುವ ಸಂಸ್ಕಾರ ತಂದೆ ತಾಯಿಗಳು ಮನೆಯಿಂದಲೆ ಕಳಿಸಬೇಕಾಗಿದೆ ಇಲ್ಲದಿದ್ದರೆ ಮುಂದೆ ಬರೀ ಚಿತ್ರಗಳಲ್ಲಿ ತೊರಿಸುವ ಸಂದರ್ಭ ಬರಬಹುದು ಅದಕ್ಕೆ ಮಠ-ಮಾನ್ಯಗಳಲ್ಲಿ ನಡೆಯುವ ಪುರಣಾ ಪುಣ್ಯಕಥೆಗಳ ಅರಿವು ಮೂಡಿಸಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
ಪಂಚಮಸಾಲಿ ಸಮಾಜದ ಅಧ್ಯಕ್ಷ ಎಂ.ಎಂ.ಹಂಗರಗಿ ಮಾತನಾಡಿ, ಸತತ 30 ವರ್ಷಗಳ ಕಾಲ ವರ್ಷಕ್ಕೆ ನಾಲ್ಕು ಬಾರಿ ಪಾದಯಾತ್ರೆ ಮೂಲಕ ದರ್ಶನ ಪಡೆದು ರುಕ್ಮೀಣಿ ಪಾಂಡುರಂಗರನ್ನು ಒಲಿಸಿಕೊಂಡು ರಾಮರಾವ ಕುಲಕರ್ಣಿ ಅವರು ನಂಬಿಕೆಯಿಂದ ದುಡಿದಿದ್ದಾರೆ ಅದಕ್ಕೆ ಪ್ರತಿಫಲ ಆ ಪಾಂಡುರಂಗ ನೀಡಿದ್ದಾರೆ. ನಂಬಿಕೆ ಇದ್ದರೆ ಎನ್ನನ್ನಾದರು ಪಡೆಯಬಹುದು ಎನ್ನುವ ತಾಜಾ ಉದಾಹರಣೆ ಎಂದರೆ ರಾಮರಾವು ಕುಲಕರ್ಣಿ ಅವರ ಜೀವನದ ದೃಷ್ಠಾಂತಗಳನ್ನು ಬಿಚ್ಚಿಟ್ಟರು. ಅಧ್ಯಕ್ಷತೆ ವಹಿಸಿದ ರಾಮರಾವ ಕುಲಕರ್ಣಿ ಮಾತನಾಡಿ, ನಮ್ಮ ನಾಡಿನ ದೊರೆಗಳು ಧರ್ಮವಂತರಾದರೆ,
ನೀತಿವಂತರಾದರೆ ಮಾತ್ರ ಅವರು ತೊರಿಸಿದ ಮಾತ್ರದಲ್ಲಿ ನಡೆದರೆ ಜೀವನ ಸಾರ್ಥಕವಾಗುತ್ತದೆ ಅಂತೆಯೇ ಈ ಕ್ಷೇತ್ರದ ಶಾಸಕರು ನುಡಿದಂತೆ ನಡೆದುಕೊಂಡು ಧರ್ಮ, ನೀತಿಗೆ ನ್ಯಾಯಕೊಟ್ಟು ಎಲ್ಲರೊಡಗುಡಿ ಸ್ನೇಹ ಬಾವದ ಜೊತೆಗೆ ಜನಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಅವರ ಕಾರ್ಯ ಇನ್ನೂ ಉತ್ತಂಗಕ್ಕೇರಲಿ ಎಂದು ಶುಭ ಹಾರೈರಿಸಿದರು. ದಿವ್ಯ ಸಾನಿಧ್ಯ ವಹಿಸಿದ ಸಿದ್ಧ ಶಂಕರಾನಂದ ಸಂಸ್ಥಾನ ಮಠದ = ಸಿದ್ಧರಾಜ ಮಹಾಸ್ವಾಮಿಗಳು, ವೇ.ಮೂ ಬಸಯ್ಯಸ್ವಾಮಿ ಹಿರೇಮಠ ಆಶಿರ್ವಚನ ನೀಡಿದರು.
ಈ ಸಂದರ್ಭದಲ್ಲಿ ಮಹಾಂತಯ್ಯ ಹಿರೇಮಠ, ಗುರಲಿಂಗಪ್ಪಗೌಡ ಪಾಟೀಲ, ದತ್ತಾತ್ರೇಯ ಕುಲಕಣೀರ್, ಲಕ್ಷ್ಮಣರಾವ ಕುಲಕರ್ಣಿ, ಸಿದ್ದಗೊಂಡಪ್ಪ ಪರಗೊಂಡ, ಎನ್.ವ್ಹಿ.ಕುಲಕಣೀರ್, ನಾರಾಯಣ ಕುಲಕರ್ಣಿ, ಮುತ್ತು ಮುಂಡೆವಾಡಗಿ, ವ್ಹಿ.ಬಿ.ಕುರಡಿ, ಮಡಿವಾಳಪ್ಪ ಕಡ್ಲಗೊಂಡ, ಡಾ.ಡಿ.ಕೆ.ಕುಲಕರ್ಣಿ ವೇದಿಕೆ ಮೇಲಿದ್ದರು. ಶಿಕ್ಷಕ ಎಂ.ಎಸ್.ಅಂಬಿಗೇರ ನಿರೂಪಿಸಿದರು. ಸ್ನೇಹಾ ಬಿರಾದಾರ ಪ್ರಾರ್ಥನಾ ಗೀತೆ ಹಾಡಿದರು. ಪ್ರಥಮ ಧರ್ಜೆ ಗುತ್ತಿಗೆದಾರ ಎನ್.ವ್ಹಿ.ಕುಲಕಣೀರ್ ಸ್ವಾಗತಿಸಿದರು. ರವಿಂದ್ರ ನಾಯ್ಕೋಡಿ ವಂದಿಸಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 