ಪೊಲೀಸ್ ಇಲಾಖೆಯ ಹಳೇ ಸಂಪ್ರದಾಯಕ್ಕೆ ಪ್ರವೀಣ್ ಸೂದ್ ಗುಡ್ ಬೈ; ಸರಳತೆ ಮೊರೆ ಹೋದ ಡಿಜಿ
ಬೆಂಗಳೂರು, ಜೂ.5, ಪೊಲೀಸ್ ಇಲಾಖೆಯ ಹಳೆಯ ಸಂಪ್ರದಾಯವೊಂದಕ್ಕೆ ರಾಜ್ಯ ಪೊಲೀಸ್ ಮಹಾ ನಿರ್ದೇಶ ಪ್ರವೀಣ್ ಸೂದ್ ಅವರು ತೀಲಾಂಜಲಿ ಹಾಡಿದ್ದಾರೆ.ಇನ್ನು, ಮುಂದಿನ ದಿನಗಳಲ್ಲಿ ಐಜಿಪಿ ಅವರು ತಮ್ಮ ಕಚೇರಿಯಿಂದ ಹೊರಗಡೆ ಬಂದಾಗ ಹಾಗೂ ರಾಜ್ಯ ಪ್ರವಾಸ ಕೈಗೊಂಡಾಗ ಸ್ಥಳೀಯ ಪೊಲೀಸರು ರಸ್ತೆ ಬದಿ ಅಲ್ಲಲ್ಲಿ ಶಿಸ್ತಾಗಿ ನಿಂತು ಅವರಿಗೆ ಸೆಲ್ಯೂಟ್ ಹೊಡೆಯುತ್ತಿದ್ದರು. ಆದರೀಗ ಈ ಪದ್ದತಿಗೆ ಗುಡ್ ಬೈ ಹೇಳಲಾಗಿದೆ.ಡಿಜಿ ಮತ್ತು ಐಜಿಪಿ ಯಾವುದೇ ವೇಳೆ ರಾಜ್ಯ ಪ್ರವಾಸ ಕೈಗೊಂಡಾಗ ಜಿಲ್ಲಾ ಸರಹದ್ದು ದಾಟುವವರೆಗೂ ಪೊಲೀಸರನ್ನು ಕಳುಹಿಸಲಾಗುತ್ತಿತ್ತು. ಅಲ್ಲದೇ, ಈ ಸಂದರ್ಭದಲ್ಲಿ ಆಯಾ ಜಿಲ್ಲೆಗಳ ಡಿಎಸ್ಪಿ, ಇನ್ಸ್ಪೆಕ್ಟರ್, ಸಬ್ ಇನ್ಸ್ಪೆಕ್ಟರ್ಗಳು ರಸ್ತೆ ಬದಿ ನಿಲ್ಲುತ್ತಿದ್ದರು. ಆದರೀಗ ಯಾವ ಅಧಿಕಾರಿಯೂ ರಸ್ತೆಯಲ್ಲಿ ನಿಂತು ಕಾಯುವ ಅವಶ್ಯಕತೆ ಇಲ್ಲ. ತಮ್ಮ ಪಾಡಿಗೆ ತಾವು ಕೆಲಸ ಮಾಡಿ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಅವರು ಸಿಬ್ಬಂದಿಗೆ ಸೂಚಿಸಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 