ಲಕ್ಷ್ಮಣ್ ಸವದಿಗೆ ಸಚಿವ ಸ್ಥಾನ ನೀಡಲು ಕೊಪ್ಪಳದಲ್ಲಿ ಗಾಣಿಗೇರ್ ಸಮಾಜ ಆಗ್ರಹ

ಲಕ್ಷ್ಮಣ್ ಸವದಿಗೆ ಸಚಿವ ಸ್ಥಾನ ನೀಡಲು ಕೊಪ್ಪಳದಲ್ಲಿ ಗಾಣಿಗೇರ್ ಸಮಾಜ ಆಗ್ರಹ  Ganiger Samaj demands ministerial berth for Laxman Savadi in Koppal

ಕೊಪ್ಪಳ 08:  ರಾಜ್ಯದ ನೂತನ ಮುಖ್ಯಮಂತ್ರಿ ಡಿಕೆಶಿ ಸಚಿವ ಸಂಪುಟದಲ್ಲಿ ಅಥಣಿ ಶಾಸಕ ಲಕ್ಷ್ಮಣ್ ಸವದಿ ಅವರಿಗೆ ಸಚಿವ ಸ್ಥಾನ ನೀಡುವಂತೆ ಕಾಂಗ್ರೆಸ್ ಹೈಕಮಾಂಡ್, ಮುಖ್ಯಮಂತ್ರಿಗಳನ್ನು ಕೊಪ್ಪಳ ಜಿಲ್ಲಾ ಗಾಣಿಗೇರ ಸಮಾಜದ ಮುಖಂಡರಾದ ರುದ್ರಮುನಿ ಗಾಳಿಯವರು ಆಗ್ರಹಿಸಿದ್ದಾರೆ. ಅವರು ಸೋಮವಾರದಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ ಕರ್ನಾಟಕ ರಾಜ್ಯದ ಕಾಂಗ್ರೆಸ್ ಸರ್ಕಾರದ ಇತಿಹಾಸದಲ್ಲಿ ಗಾಣಿಗ ಸಮಾಜದ ಯಾರೊಬ್ಬರಿಗೂ ಮಂತ್ರಿ ಮಂಡಲದಲ್ಲಿ ಸಚಿವ ಸ್ಥಾನ ನೀಡದೆ ಇರುವುದು ಶೋಚನೀಯ ಹಾಗೂ ನೋವಿನ ಸಂಗತಿ, ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರೇ ಶಾಸಕ ಲಕ್ಷ್ಮಣ ಸವದಿ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಕರೆತಂದಿದ್ದಾರೆ, ಬಿಜೆಪಿ ಸರ್ಕಾರದಲ್ಲಿ ಉಪಮುಖ್ಯಮಂತ್ರಿಗಳಾಗಿ ಉತ್ತಮವಾಗಿ ಕಾರ್ಯನಿರ್ವಹಿಸಿ ಸಾಕಷ್ಟು ಅನುಭವ ಇದೆ ಹೀಗಾಗಿ ಎರಡನೇ ಪಟ್ಟಿಯಲ್ಲಿ ಲಕ್ಷ್ಮಣ್ ಸವದಿ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದರು.

ಕೊಪ್ಪಳ ಜಿಲ್ಲಾ ಗಾಣಿಗರ ಸಮಾಜದ ಅಧ್ಯಕ್ಷ ತೋಟಪ್ಪ ಕಾಮನೂರ್ ಮಾತನಾಡಿ ರಾಜ್ಯದಲ್ಲಿ ಗಾಣಿಗ ಸಮಾಜ 40-50 ಲಕ್ಷ ಜನಸಂಖ್ಯೆ ಇದ್ದು ಸಾಮಾಜಿಕ ನ್ಯಾಯದಡಿ ಸಚಿವ ಸ್ಥಾನ ನೀಡಬೇಕು, ಲಕ್ಷ್ಮಣ ಸವದಿ ಅವರು ಕಳೆದ ಲೋಕಸಭಾ ಚುನಾವಣೆಯಲ್ಲಿ ಸಂಘಟನಾ ಸಾಮರ್ಥ್ಯ ಹಾಗೂ ಜನಪ್ರಿಯತೆಯಿಂದ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಗೆಲ್ಲಲು ಬಹುದೊಡ್ಡ ಕಾಣಿಕೆ ಸಲ್ಲಿಸಿದ್ದಾರೆ, ವಿಧಾನಸಭಾ ಚುನಾವಣೆಯಲ್ಲಿ ವಿವಿಧ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ನಡೆಸಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ಸಾಕಷ್ಟು ಶ್ರಮವಹಿಸಿದ್ದಾರೆ ಹೀಗಾಗಿ ಮುಖ್ಯಮಂತ್ರಿ ಡಿಕೆಶಿ ಅವರು ಎರಡನೇ ಪಟ್ಟಿಯಲ್ಲಿ ಸಚಿವ ಸ್ಥಾನ ನೀಡಬೇಕೆಂದು ಒತ್ತಾಯಿಸಿದರು.ಸುದ್ದಿಗೋಷ್ಠಿಯಲ್ಲಿ ಗಾಣಿಗೇರ್ ಸಮಾಜದ ಮುಖಂಡರಾದ ಸಂಗನಗೌಡ ಬಿಟಿ ಪಾಟೀಲ್, ವೀರಣ್ಣ ಗಾಣಿಗೇರ್, ಮಂಜು ಪಾಟೀಲ್ ಹಂದ್ರಾಳ, ಎನ್‌. ಸಿ ಗೌಡರ, ಸಂಗನಗೌಡ ಪೊಲೀಸ್ ಪಾಟೀಲ್, ಮಾರುತಿ ನಿಲೂಗಲ್, ಶಂಕರಗೌಡ ಮಾಲಿ ಪಾಟೀಲ್ ಉಪಸ್ಥಿತರಿದ್ದರು.