ವೃದ್ದಾಶ್ರಮದ ಹಿರಿಯರನ್ನು ಸಂತುಷ್ಟಗೊಳಿಸಿ ಜಿ ಎಸ್ ಪಾಟೀಲರ ಜನ್ಮ ದಿನ ಆಚರಣೆ ಮಾಡಿದ ಗದಗ ಸ್ನೇಹ ಬಳಗ

ವೃದ್ದಾಶ್ರಮದ ಹಿರಿಯರನ್ನು ಸಂತುಷ್ಟಗೊಳಿಸಿ ಜಿ ಎಸ್ ಪಾಟೀಲರ ಜನ್ಮ ದಿನ ಆಚರಣೆ ಮಾಡಿದ ಗದಗ ಸ್ನೇಹ ಬಳಗ Gadag Sneha Balaga celebrated G.S. Patil's birthday, delighting the elderly at the old age home

ಲೋಕದರ್ಶನ ವರದಿ 

ಗದಗ  17:  ಕೃಷಿ ಸಂಘ ಸಂಸ್ಥೆಗಳನ್ನು ಅಭಿವೃದ್ಧಿ ಪಡಿಸಿ ಉದ್ಯೋಗದಾತ ರಾದ ಧೀಮಂತ ನಾಯಕ ರೈತರಿಗಾಗಿ ಕೃಷಿ ಹೊಂಡ ನಿರ್ಮಾಣ ಕಾಮಗಾರಿಯಲ್ಲಿ ದಾಖಲೆಯ ಸರದಾರರೇನಿಸಿದ ಸಮಸ್ತ ನಾಗರೀಕ ಬಂಧುಗಳ ನೆಚ್ಚಿನ ಶಾಸಕರಾದ ಸನ್ಮಾನ್ಯ ಜೀ ಎಸ್ ಪಾಟೀಲ್ ಸಾಹೇಬರವರ 78 ನೇ ಜನ್ಮ ದಿನಾಚರಣೆಯನ್ನು ಗದಗ ಸ್ನೇಹ ಬಳಗದ ವತಿಯಿಂದ ವಿಶಿಷ್ಠವಾಗಿ ವೃದ್ದಾಶ್ರಮದ ಹಿರಿಯರ ಮೊಗದಲ್ಲಿ ಸಂತೋಷವನ್ನು ಕಾಣುವಂತಹ ವಾತಾವರಣವನ್ನು ಸೃಷ್ಟಿಸುವ ಮೂಲಕ ವಿಶೇಷವಾಗಿ ಆಚರಣೆ ಮಾಡಲಾಯಿತು. 

ಗದಗ ಸ್ನೇಹ ಬಳಗದ ಪದಾಧಿಕಾರಿಗಳಾದ ವಿ ಬಿ ಸೋಮನಕಟ್ಟಿಮಠ, ಮುನ್ನಾ ಕಲ್ಮನಿ, ರಿಯಾಜ್ ಆನಂದಯ್ಯ ವೀರಕ್ತಿಮಠ, ಸರ್ಫಾರಾಜ, ಇವರನ್ನು ಒಳಗೊಂಡ ಸ್ನೇಹ ಬಳಗದ ತಂಡದವರು ಹುಲಕೋಟಿಯ ಸುರಭಿ ವೃದ್ದಾಶ್ರಮದ ಹಿರಿಯರನ್ನು ಸಂತೋಷ್ಠಗೊಳಿಸಿ ಅವರ ಮೊಗದಲ್ಲಿ ಹರ್ಷವನ್ನು ತುಂಬುವ ಮೂಲಕ ಸನ್ಮಾನ್ಯ ಜೀ ಎಸ್ ಪಾಟೀಲ್ ಸಾಹೇಬರವರ 78 ನೇ ಜನ್ಮ ದಿನಾಚರಣೆಯನ್ನು ಆಚರಣೆ ಮಾಡಲು ನಿರ್ಧರಿಸಿ, 

ಬಿಂಕದಕಟ್ಟಿ ಪ್ರಾಣಿ ಸಂಗ್ರಹಾಲಯದಲ್ಲಿನ ಆವರಣದಲ್ಲಿ ಕೇಕ್ ಕತ್ತರಿಸಿ, ಸಿಹಿ ಹಾಗೂ ತಂಪು ಪಾನೀಯಗಳಾದ ಮಜ್ಜಿಗೆ, ಮತ್ತು ಕೋಲ್ಡ್‌ ಡ್ರಿಂಕ್ಸ್‌ ಗಳನ್ನು ವಿತರಣೆ ಮಾಡಿ ಹಿರಿಯ ಜೀವಿಗಳಿಗೆ ಪ್ರಾಣಿ ಸಂಗ್ರಹಾಲಯದ ವಿಶಿಷ್ಟ ಪ್ರಾಣಿಗಳ ದರ್ಶನ ಮಾಡಿಸಿ ಸ್ವಚ್ಛಠ ಪರಿಸರದ ಮನೋಲ್ಲಾಸ ನೀಡಿ, ಸುಂದರ ಪರಿಸರದ ವಾತಾವರಣ ನಡುವೆ ಭರ್ಜರಿ ಬಾಡೂಟವನ್ನು ಮಾಡಿಸುವ ಮೂಲಕ ಆಚರಣೆ ಮಾಡಲಾಯಿತು. ಈ ಒಂದು ವೃದ್ದಾಶ್ರಮದ ಹಿರಿಯರ ಮೊಗದಲ್ಲಿ ಸಂತಸ ಮೂಡುವಂತಹ ವಾತಾವರಣವನ್ನು ಸ್ರಜನೆಯಾಗಲು ಕಾರಣಿಭೂತರಾದ ಫಾರೆಸ್ಟ್‌ ರೇಂಜ್ ಆಫೀಸರ್ ಸಹಕಾರ ಪ್ರಮುಖವಾಗಿ ನೆನೆಯುವಂತಹದಾಗಿತ್ತು. 

ಈ ಸಂಧರ್ಭದಲ್ಲಿ ಗದಗ ಸ್ನೇಹ ಬಳಗದ ಪದಾಧಿಕಾರಿಗಳಾದ ಮುನ್ನಾ ಕಲ್ಮನಿ, ಅಂದಾನಯ್ಯ ವೀರಕ್ತಿಮಠ, ಸರ್ಫರಾಜ್, ರಿಯಾಜ್, ರೆಂಜರ್ ಉಮೇಶ ಹೊಸಮನಿ,, ಮೇಗಿಲಮನಿ,, ಗದಗ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಗದಗ ಬೆಟಗೇರಿ ಶಹರ ಕಾಂಗ್ರೇಸ್ ಸಮಿತಿಯ ಅಧ್ಯಕ್ಷರಾದ ಬಿ ಬಿ ಅಸೂಟಿ, ಚನ್ನಬಸಪ್ಪ ಅಕ್ಕಿ, ಗದಗ ಬೆಟಗೇರಿ ಶಹರ ಕಾಂಗ್ರೇಸ್ ಸಮಿತಿಯ ಮಾಧ್ಯಮ ವಕ್ತಾರರಾದ ರಾಘವೇಂದ್ರ ಪಾಲನಕರ ಬಸವರಾಜ ಚಕ್ರಣ್ಣವರ ಸುರಭಿ ವೃದ್ದಾಶ್ರಮದ ವ್ಯವಸ್ಥಾಪಾಕರಾದ ರಾಜು ಏಕಲಾಸಪೂರ್, ಅಡುಗೆ ಸಹಾಯಕಿಯರಾದ   ಮಹಾಲಕ್ಷ್ಮೀ,ಮಾಜೀ ಸೈನಿಕರು ಹಾಗೂ ಅವರ ಕುಟುಂಬ ವರ್ಗದವರು ಉಪಸ್ಥಿತರಿದ್ದರು.