ಎಲ್ಲಾ ವಿದ್ಯಾರ್ಥಿಗಳಿಗೂ ಉಚಿತ ಬಸ್ ಪಾಸ್‌: ಎಸ್‌ಎಫ್‌ಐ ಹೋರಾಟದ ಫಲಶೃತಿ

ಎಲ್ಲಾ ವಿದ್ಯಾರ್ಥಿಗಳಿಗೂ ಉಚಿತ ಬಸ್ ಪಾಸ್‌: ಎಸ್‌ಎಫ್‌ಐ ಹೋರಾಟದ ಫಲಶೃತಿ  Free bus passes for all students: The result of SFI's struggle

  ಹಾವೇರಿ 04:  ನಿರಂತರ ಹೋರಾಟಕ್ಕೆ ಸಂದ ಜಯ ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೂ ಉಚಿತ ಬಸ್ ಪಾಸ್ ವಿತರಣೆಗಾಗಿ ರಾಜ್ಯಾದ್ಯಂತ ಎಸ್‌ಎಫ್‌ಐ ನೇತೃತ್ವದಲ್ಲಿ ಒಂದು ದಶಕದಿಂದ ನಿರಂತರ ಹೋರಾಟ ರೂಪಿಸಲಾಗಿತ್ತು. ವಿಶೇಷವಾಗಿ "ಉಚಿತ ಬಸ್ ಪಾಸ್ ಉಚಿತ ಪ್ರಯಾಣ" ಹೆಸರಿನಲ್ಲಿ ರಾಜ್ಯವ್ಯಾಪಿ ಸಂಘರ್ಷತಾತ್ಮಕ ಹೋರಾಟವನ್ನು  2016 ರಿಂದ ಪ್ರಾರಂಭಿಸಲಾಗಿತ್ತು. ಆಗ ಎಸ್ಸಿ ಎಸ್ಟಿ ವಿದ್ಯಾರ್ಥಿಗಳಿಗೆ ರಿಯಾಯಿತಿ ದರದಲ್ಲಿ ಉಚಿತ ಬಸ್ ಪಾಸ್ ಒದಗಿಸಲಾಗಿತ್ತು. 

ಇದನ್ನು ಸ್ವಾಗತಿಸಿ ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೂ ಉಚಿತ ಬಸ್ ಪಾಸ್ ವಿತರಣೆಗಾಗಿ ಎಸ್‌ಎಫ್‌ಐ ಕರ್ನಾಟಕ ರಾಜ್ಯ ಸಮಿತಿ ಬೃಹತ್ ಹೋರಾಟವನ್ನು ರೂಪಿಸಿ ಸರ್ಕಾರದ ಗಮನೆ ಸೆಳೆದಿತ್ತು. ರಾಜ್ಯದ ನೂತನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಪ್ರಮಾಣ ವಚನದ ಬಳಿಕ ಮೊದಲ ಬಾರಿಗೆ ವಿದ್ಯಾರ್ಥಿ ಸಮುದಾಯದ ಎಲ್ಲಾ ಹುಡುಗರಿಗೆ "ವಿದ್ಯಾರ್ಥಿ ಸಾರಥಿ" ಹೆಸರಿನಲ್ಲಿ ಉಚಿತ ಬಸ್ ಪಾಸ್ ಘೋಷಣೆ ಮಾಡಿರುವುದು ಎಸ್‌ಎಫ್‌ಐ ಸಂಘಟನೆ ನಿರಂತರ ಹೋರಾಟಕ್ಕೆ ಸಂದ ಜಯವಾಗಿದ್ದು. 

       ಕರ್ನಾಟಕ ರಾಜ್ಯ ಸಮಿತಿಯು ವಿದ್ಯಾರ್ಥಿ ಸಮುದಾಯದ ಪರವಾಗಿ ಸ್ವಾಗತಿಸಿ, ಅಭಿನಂದನೆಗಳನ್ನು ಸಲ್ಲಿಸುತ್ತದೆ. ಅದೇ ರೀತಿಯಲ್ಲಿ ಡೊನೆಷನ್ ಹಾವಳಿ ನಿಯಂತ್ರಣ, 8 ನೇ ತರಗತಿ ವಿದ್ಯಾರ್ಥಿಗಳಿಗೆ ಉಚಿತ ಬೈಸಿಕಲ್, ವಿದ್ಯಾರ್ಥಿ ಸಂಖ್ಯೆಗೆ ಅನುಗುಣವಾಗಿ ಹೆಚ್ಚುವರಿ ಬಸ್ಸಿನ ವ್ಯವಸ್ಥೆ ಕಲ್ಪಿಸಬೇಕೆಂದು ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ಬಸವರಾಜ ಎಸ್ ಪತ್ರಿಕಾ ಹೇಳಿಕೆ ನೀಡಿದರು.