ಎಚ್‌.ಕೆ. ಪಾಟೀಲ ಸೇವಾ ತಂಡದಿಂದ ಸ್ವಾತಂತ್ರ್ಯೋತ್ಸವ ಸಂಭ್ರಮಾಚರಣೆಗೆ ವಿವಿಧ ಸಮಿತಿಗಳ ರಚನೆ

ಎಚ್‌.ಕೆ. ಪಾಟೀಲ ಸೇವಾ ತಂಡದಿಂದ ಸ್ವಾತಂತ್ರ್ಯೋತ್ಸವ ಸಂಭ್ರಮಾಚರಣೆಗೆ ವಿವಿಧ ಸಮಿತಿಗಳ ರಚನೆ Formation of various committees by the H.K. Patil Seva Team for Independence Day celebrations

ಲೋಕದರ್ಶನ ವರದಿ 

 ಗದಗ, ಜು. 29: 80ನೇ ಸ್ವಾತಂತ್ರ್ಯೋತ್ಸವವನ್ನು ಅರ್ಥಪೂರ್ಣವಾಗಿ ಹಾಗೂ ವೈಭವದಿಂದ ಆಚರಿಸುವ ಉದ್ದೇಶದಿಂದ ಎಚ್‌.ಕೆ. ಪಾಟೀಲ ಸೇವಾ ತಂಡವು ವಿವಿಧ ಸಮಿತಿಗಳನ್ನು ರಚಿಸಿದೆ.  ಆಗಸ್ಟ್‌ 15, 2026ರಂದು ನಡೆಯಲಿರುವ 80ನೇ ಸ್ವಾತಂತ್ರ್ಯೋತ್ಸವವನ್ನು ಯಶಸ್ವಿಯಾಗಿ ಆಯೋಜಿಸುವ ಕುರಿತು ಗದಗ ನಗರದ ಕಾಟನ್ ಸೇಲ್ ಸೊಸೈಟಿ ಆವರಣದಲ್ಲಿರುವ ಸೇವಾ ತಂಡದ ಕೇಂದ್ರ ಕಚೇರಿಯಲ್ಲಿ ತಂಡದ ಅಧ್ಯಕ್ಷ ಪ್ರಭು ಎಲ್‌. ಬುರಬುರೆ ಅವರ ನೇತೃತ್ವದಲ್ಲಿ ವಿಶೇಷ ಸಭೆ ನಡೆಯಿತು.  

ಸಭೆಯಲ್ಲಿ ಸ್ವಾತಂತ್ರ್ಯೋತ್ಸವದ ವಿವಿಧ ಕಾರ್ಯಕ್ರಮಗಳ ಸುಸೂತ್ರ ನಿರ್ವಹಣೆಗೆ ಪ್ರತ್ಯೇಕ ಸಮಿತಿಗಳನ್ನು ರಚಿಸಲಾಯಿತು.  ವೇದಿಕೆ ಸಮಿತಿಗೆ ಅಶೋಕ ಮಂಡಳಿ, ಸಿದ್ದಲಿಂಗೇಶ ಪಾಟೀಲ ಹಾಗೂ ಪರ​‍್ಪ ಕವತರ ಅವರನ್ನು ನೇಮಕ ಮಾಡಲಾಗಿದೆ.  ಡಿಜಿಟಲೀಕರಣ ಸಮಿತಿಗೆ ಮಂಜುನಾಥ ಜೋಗದಂಡಕರ, ಶಿವು ಚವ್ಹಾಣ ಹಾಗೂ ಮಹಮ್ಮದ್ ಜಾಫರ್ ಖಾಜಿ ಅವರನ್ನು ಆಯ್ಕೆ ಮಾಡಲಾಗಿದೆ.  

ಸರ್ಟಿಫಿಕೇಷನ್ ಸಮಿತಿಗೆ ಶಿವಪ್ಪ ಬಳ್ಳಾರಿ ಮತ್ತು ತಂಡ, ಮಾಧ್ಯಮ ಸಮಿತಿಗೆ ಉಮರ್ ಫಾರೂಕ್ ಹುಬ್ಬಳ್ಳಿ, ಸುಮಿತ್ ಮಲ್ಲಾಪುರ ಹಾಗೂ ರಾಘವೇಂದ್ರ ಪಾಲನಕರ, ಶಿಸ್ತು ಪಾಲನಾ ಸಮಿತಿಗೆ ಮಹಮ್ಮದ್ ಬೆಟಗೇರಿ, ಸಂಪರ್ಕ ಹಾಗೂ ಸಂವಹನ ಸಮಿತಿಗೆ ಸಾಗರ ಬಳ್ಳಾರಿ, ಅಂಗಾಂಗ ದಾನ ಜಾಗೃತಿ ಸಮಿತಿಗೆ ದೇವೇಂದ್ರ ಕಳಸಾಪೂರ ಅವರನ್ನು ನೇಮಕ ಮಾಡಲಾಗಿದೆ.  ಈ ಎಲ್ಲ ಸಮಿತಿಗಳು ಸ್ವಾತಂತ್ರ್ಯೋತ್ಸವದ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜಿಸಲು ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಿವೆ.