ಗದಗ ರೋಟರಿ ಸೆಂಟ್ರಲ್ ನೂತನ ಅಧ್ಯಕ್ಷ ಹಾಗೂ ಕಾರ್ಯದರ್ಶಿ ಅವರಿಗೆ ಸನ್ಮಾನ
Felicitation of the new President and Secretary of Gadag Rotary Central
ಲೋಕದರ್ಶನ ವರದಿ
ಗದಗ 09: ಸಮಾಜಸೇವೆ ಮಾಡುವ ಮೂಲಕ ಸದೃಡ ಸಮಾಜ ಕಟ್ಟುವ ನಿಟ್ಟಿನಲ್ಲಿ ಕನಸು ಕಂಡಿರುವ ನನಗೆ ರೋಟರಿ ಗದಗ ಸೆಂಟ್ರಲ್ ಅಧ್ಯಕ್ಷ ಸ್ಥಾನ ಒದಗಿರುವದು ನನಗೆ ಆನೆ ಬಲ ತಂದಿದೆ ಮುಂದಿನ ದಿನಗಳಲ್ಲಿ ಸಂಸ್ಥೆಯಿಂದ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಗದಗ ಸೆಂಟ್ರಲ್ ನೂತನ ಅಧ್ಯಕ್ಷಮಲ್ಲಿಕಾರ್ಜುನ ಚಂದಪ್ಪನವರ ಅವರು ಹೇಳಿದರು.
ನಗರದ ಬ್ಯಾಂಕ್ ರಸ್ತೆಯಲ್ಲಿರುವ ಅಧ್ಯಕ್ಷರ ಕಚೇರಿಯಲ್ಲಿ ನೂತನ ಅಧ್ಯಕ್ಷ ಮಲ್ಲಿಕಾರ್ಜುನ ಚಂದಪ್ಪನವರ ಹಾಗೂ ನೂತನ ಕಾರ್ಯದರ್ಶಿ ಪರುಶುರಾಮ ನಾಯ್ಕರ ಅವರಿಗೆ ಹಮ್ಮಿಕೊಂಡ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿ, ಪ್ರತಿಯೊಬ್ಬರು ತಮ್ಮ ದುಡಿಮೆಯ ಲಾಭದಲ್ಲಿನ ಅಲ್ಪ ಪ್ರಮಾಣದಲ್ಲಿನ ಹಣವನ್ನು ಬಡವರಿಗೆ, ಸಂಕಷ್ಟದಲ್ಲಿರುವ ಜನರಿಗೆ ನೀಡುವ ಮೂಲಕ ಸಮಾಜವನ್ನು ಉತ್ತಮ ಗೊಳಿಸಬೇಕು ಎಂದು ಹೇಳಿದರು.
ಗದಗ ರೋಟರಿ ಸೆಂಟ್ರಲ್ ವತಿಯಿಂದ ಈ ವರ್ಷ ಸದಸ್ಯರ ಸಹಕಾರದಿಂದ ಗ್ರಾಮೀಣ ಪ್ರದೇಶಗಳಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ, ಶಾಲಾ ಮಕ್ಕಳಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸುವುದು, ಪರಿಸರ ದಿನಾಚರಣೆ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮ, ರಕ್ತದಾನ ಶಿಬಿರ, ಮಹಿಳಾ ಸಬಲೀಕರಣ, ಹಾಗೂ ಯವಜನರ ಕೌಶಲ್ಯಾಭಿವೃದ್ದಿಗೆ ವಿಶೇಷ ಆಧ್ಯತೆ ನೀಡಲಾಗುವುದು ಎಂದು ನೂತನ ಅಧ್ಯಕ್ಷ ಮಲ್ಲಿಕಾರ್ಜುನ ಚಂದಪ್ಪನವರ ಅವರು ಹೇಳಿದರು.
ನೂತನ ಕಾರ್ಯದರ್ಶಿ ಪರಶುರಾಮ ನಾಯ್ಕರ ಅವರು ಮಾತನಾಡಿ, ನೂತನ ಅಧ್ಯಕ್ಷಗೆ ಸಹಕಾರ ನೀಡುವ ಮೂಲಕ ಗದಗ ರೋಟರಿ ಸೆಂಟ್ರಲ್ನ್ನು ಜಿಲ್ಲೆಗೆ ಮಾದರಿಯಾಗಿ ಮಾಡುತ್ತೆವೆ ಎಂದು ಹೇಳಿದರು.
ಯುವ ಮುಖಂಡ ಶ್ರೀಕಾಂತ ಬಾಕಳೆ ಅವರು ಮಾತನಾಡಿ, ಸಮಾಜಸೇವೆಯಲ್ಲಿ ಪ್ರಮುಖರಾಗಿ ಗುರತಿಸಿಕೊಂಡಿರುವ ಇರ್ವರು ಮುಂದಿನ ದಿನಗಳಲ್ಲಿ ಗದಗ ಜಿಲ್ಲೆಯಲ್ಲಿ ಉತ್ತಮ ಕೆಲಸ ಮಾಡುವ ಮೂಲಕ ನಾಡಿಗೆ ಕೀರ್ತಿ ತರುವ ಕೆಲಸ ಮಾಡಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ರಿಯಲ್ ಎಸ್ಟೆಟ್ ಉದ್ಯಮಿಗಳಾದ ಎಸ್.ಕೆ.ತಗ್ಗಿನಮಠ, ಬಸವರಾಜ ಹಡಪದ, ರಾಮಚಂದ್ರ ಶಿದ್ಲಿಂಗ, ರಾಘವೇಂದ್ರ ಪವಾರ, ರಾಜೇಶ ಖೋಡೆ, ಉಮೇಶ ಮುಳ್ಳಾಳ, ಉದಯ ಜಾಧವ, ಲಿಂಗರಾಜ ಚಂದಪ್ಪನವರ, ಎಸ್.ಎಸ್. ಬಾಸಗಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ಅಧಿಕಾರ ದರ್ಪ : ಖಾನಾಪುರ ತಹಸೀಲ್ದಾರ್ ವಿರುದ್ಧ ಶಿಸ್ತುಕ್ರಮಕ್ಕೆ ಪಿಡಿಒಗಳಿಂದ ಡಿಸಿ, ಚು. ಆಯೋಗಕ್ಕೆ ದೂರು
ಗಗನಯಾನ ಮಿಷನ್ಗಾಗಿ ಮಹತ್ವದ ಪ್ಯಾರಾಶೂಟ್ ಏರ್ಡ್ರಾಪ್ ಪರೀಕ್ಷೆಯನ್ನು ಇಸ್ರೋ ಯಶಸ್ವಿಯಾಗಿ ನಡೆಸಿತು
ಗದಗದಲ್ಲಿ ಮಾನಸಿಕ ಅಸ್ವಸ್ಥ ಯುವತಿಯ ಮೇಲೆ ಅತ್ಯಾಚಾರ ಆರೋಪ
ಹಿಡಕಲ್ ಜಲಾಶಯದ ನೀರಿನಲ್ಲಿ ವೃದ್ದೆಯ ಶವ ಪತ್ತೆ : ಹಳೇಗುಡನಟ್ಟಿ ಬಳಿ ಘಟನೆ
ಡ್ರಗ್ ಅವೇರ್ನೆಸ್ ವೀಕ್: ಆಚರಣೆ, ಕಾರ್ಯಾಚರಣೆ 12.38 ಲಕ್ಷ ಮಾಕದ ವಶ, 16 ಪ್ರಕರಣ ದಾಖಲು, 4 ಬಂಧನ
ರಾಜ್ಯ ನೇಕಾರರ ಸಂಘದಿಂದ ನಾಳೆ ಬೆಳಗಾವಿ ಚಲೋ ಕಾರ್ಯಕ್ರಮ : ಸಿಎಂ ಮುಂದೆ ಬೇಡಿಕೆಗಳ ಪಟ್ಟಿ 