ದೇವರಹಿಪ್ಪರ್ಗಿ ಸೊಲಾರ್ ಪಾರ್ಕ್ ಯೋಜನೆ ವಿರುದ್ಧ ರೈತರ ಆಕ್ರೋಶ
Farmers' outrage against Devarhippargi Solar Park project
ಲೋಕದರ್ಶನ ವರದಿ
ವಿಜಯಪುರ 29: ಜಿಲ್ಲೆಯ ದೇವರಹಿಪ್ಪರ್ಗಿ ತಾಲೂಕಿನ ಕೊರವಾರ ಗ್ರಾಮದಲ್ಲಿ ಸನ್ಸೂರ್ ಸೊಲಾರ್ ಪಾರ್ಕ್ ಪ್ರೈವೇಟ್ ಲಿಮಿಟೆಡ್ (ವಿಂಡ್ಪ್ಯಾನ್) ಕಂಪನಿಯು ರೈತರಿಂದ ಭೂಮಿ ಪಡೆದು ಸೊಲಾರ್ ಯೋಜನೆ ನಡೆಸುತ್ತಿದೆ ಎಂದು ಆರೋಪ ಕೇಳಿಬಂದಿದೆ. ಸುಮಾರು 10 ಎಕರೆ ಭೂಮಿಯನ್ನು ಯೋಜನೆಗೆ ತೆಗೆದುಕೊಳ್ಳಲಾಗಿದ್ದು, 1 ಎಕರೆ ಖರೀದಿ ಮತ್ತು 6ಹಿ7 ಎಕರೆ 29 ವರ್ಷ 11 ತಿಂಗಳು ಬಾಡಿಗೆಗೆ ನೀಡಲಾಗಿದೆ ಎಂಬ ಮಾಹಿತಿ ಇದೆ.
ಆದರೆ ಬಾಡಿಗೆ, ಎನ್ಎ (ಭೂ ಪರಿವರ್ತನೆ), ಪವರ್ ಆಫ್ ಅಟಾರ್ನಿ ಹಾಗೂ ದಾಖಲೆಗಳ ಸಹಿ ವಿಚಾರದಲ್ಲಿ ಅನ್ಯಾಯ ನಡೆದಿದೆ ಎಂದು ರೈತರು ಆರೋಪಿಸುತ್ತಿದ್ದಾರೆ. ಸರ್ಕಾರಿ ಅನುಮತಿ ಇಲ್ಲದೆ ಯೋಜನೆ ಮುಂದುವರಿಸಲಾಗುತ್ತಿದೆ ಹಾಗೂ ಕೃಷಿಭೂಮಿಯನ್ನು ಅನ್ಯಾಯವಾಗಿ ಬಳಸಲಾಗುತ್ತಿದೆ ಎಂಬುದು ಪ್ರಮುಖ ಆರೋಪವಾಗಿದೆ. ರೈತ ಸಂಘ ಮತ್ತು ಹಸಿರು ಸೇನೆಯ ಪ್ರತಿನಿಧಿಗಳು ಈ ವಿಷಯದಲ್ಲಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಅನ್ಯಾಯ ಮುಂದುವರಿದರೆ ನ್ಯಾಯಾಲಯದಲ್ಲಿ ದಾವೆ ಹಾಕಿ ಯೋಜನೆ ಆರಂಭ ತಡೆಯಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಬೆಳಗಾವಿಯ ನಡುರಸ್ತೆಯಲ್ಲಿ ಹೊತ್ತಿ ಉರಿದ ಕಾರು : ತಡರಾತ್ರಿ ಘಟನೆಯಿಂದ ಬೆಚ್ವಿಬಿದ್ದ ಜನ
ಸಮೃದ್ಧಿ ಎಕ್ಸ್ಪ್ರೆಸ್ವೇಯಲ್ಲಿ ನಿಂತಿದ್ದ ಟ್ರಕ್ಗೆ ಕಾರು ಡಿಕ್ಕಿ ಹೊಡೆದು ಒಂದೇ ಕುಟುಂಬದ ಐವರು ಮೃತ
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ 