ರಾಗಿ ಖರೀದಿ ಹಣ ನೀಡಲು ಸರ್ಕಾರಕ್ಕೆ ರೈತ ಸಂಘ ಆಗ್ರಹ
Farmers' association urges government to provide money for purchasing millet
ಲೋಕದರ್ಶನ ವರದಿ
ಹೂವಿನಹಡಗಲಿ 15: ’ರಾಜ್ಯ ಸರ್ಕಾರವು ಎಂಎಸ್ಪಿ(ಕನಿಷ್ಠ ಬೆಂಬಲ ಬೆಲೆ)ಯಡಿ ರೈತರಿಂದ ಖರೀದಿಸಿರುವ ರಾಗಿ ಬಾಕಿ ಹಣವನ್ನು ರೈತರಿಗೆ ನೀಡಬೇಕು ಎಂದು ಆಗ್ರಹಿಸಿ ರೈತ ಸಂಘದವರು ತಹಶಿಲ್ದಾರ ಕೆ.ಎಂ.ಗುರುಬಸವರಾಜ ಅವರ ಮೂಲಕ ಸರ್ಕಾರಕ್ಕೆ ಸೋಮವಾರ ಮನವಿ ಸಲ್ಲಿಸಿದರು.ರೈತ ಸಂಘದ ತಾ.ಅದ್ಯಕ್ಷ ಸಿದ್ದಪ್ಪ ಹೊಸಮನಿ, ಪ್ರಧಾನ ಕಾರ್ಯದರ್ಶಿ ಎಂ.ಶಿವರಾಜ ಹೊಳಗುಂದಿ ಮಾತನಾಡಿ, ’ಕಷ್ಟಪಟ್ಟು ಬೆಳೆದ ರಾಗಿಯನ್ನು ಮಾರಾಟ ಮಾಡಿದ ರೈತರಿಗೆ ಇನ್ನೂ ಹಣ ನೀಡಿಲ್ಲ. ಕಾಂಗ್ರೆಸ್ ಸರ್ಕಾರದಿಂದಾಗಿ ?2,310 ರಾಗಿ ಬೆಳೆದ ರೈತರಿಂದ ನಿಗದಿ ಮಾಡಿದ ಕ್ವಿಂಟಲ್ ಗೆ ? 4,886 ರೂ. ನಂತೆ ಒಟ್ಟು 71,500 ಕ್ವಿಂಟಲ್ ಖರೀದಿ ಮಾಡಿ ಕೇವಲ 26 ಜನ ರೈತರಿಗೆ ಹಣ ಜಮೆ ಆಗಿದೆ . 1928 ರೈತರಿಂದ 59 ಸಾವಿರ ಕ್ವಿಂಟಲ್ ಹಣ ಬಂದಿಲ್ಲ. ಬರೋಬ್ಬರಿ ? 288,274 ಕೋಟಿ ಹಣ ಬರಬೇಕಿದೆ’ ಎಂದು ಆರೋಪಿಸಿದರು.
’ಹಣ ನೀಡದೇ ಇರುವುದರಿಂದ ರೈತರು ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ. ಕಷ್ಟಪಟ್ಟು ಬೆಳೆದ ರಾಗಿಯನ್ನು ಮಾರಾಟ ಮಾಡಿದ್ದರೂ ಒಟ್ಟಾರೆ ತಾಲ್ಲೂಕಿನ 1928 ರೈತರಿಗೆ ಅವರ ಹಣ ಕೈಸೇರಿಲ್ಲ. ಈಗಾಗಲೇ ಮುಂಗಾರು ಮಳೆ ಆರಂಭವಾಗುತ್ತಿದ್ದು, ರೈತರು ಹೊಸದಾಗಿ ಭೂಮಿ ಹದಗೊಳಿಸಲು, ಬಿತ್ತನೆ ಬೀಜ ಮತ್ತು ರಸಗೊಬ್ಬರ ಕೊಳ್ಳಲು ಕೈಯಲ್ಲಿ ಹಣವಿಲ್ಲ, ಈಗಲಾದರೂ ಹಣ ಬಿಡುಗಡೆ ಮಾಡಬೇಕು’ ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ರಾಜ್ಯ ರೈತ ಸಂಘದ ಉಪಾಧ್ಯಕ್ಷರು ವಿಠಲ್ ನಾಯ್ಕ, ಜಿಲ್ಲಾ ಉಪಾಧ್ಯಕ್ಷರು ಕೆ ಮಂಜುನಾಥ್, ಗನಿಸಾಬ್.ಜಿಲ್ಲಾ ಕಾರ್ಯದರ್ಶಿ ದುರುಗಪ್ಪ ಹೊಳಗುಂದಿ. ಸಲಹಾ ಸಮಿತಿ ಸದ್ಯಸರು ಮುಜ್ಜು ರಹಿಮಾನ್, ಕೆ.ಆರ್.ಎಸ್. ಪಕ್ಷದ ಚಂದ್ರಶೇಖರ್ ದೊಡ್ಡಮನಿ ಮತ್ತು ಸುಭಾನ ಸಾಬ್ ಮಹಾತೇಶ್ ನಾಯ್ಕ ಇದ್ದರು
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು
ಚುಚ್ಚುಮದ್ದು ನೀಡಿ ಪತಿ ಹತ್ಯೆ ಮಾಡಿದ್ದ ಪತ್ನಿ, ಪ್ರೀಯಕರ: ಸಮಾಧಿಯಿಂದ ಮಾಜಿ ಸೈನಿಕನ ಶವ ಹೊರಕ್ಕೆ, ತನಿಖೆ ಚುರುಕು
ತಿಲಾರಿ ಘಾಟ್ ಅರಣ್ಯದಲ್ಲಿ ಬೆಳಗಾವಿ ಮಹಿಳೆಯ ಹತ್ಯೆ: ಮಹಾ ಪೊಲೀಸರಿಂದ 3 ಬಂಧನ, ಅನಾಥ ಶವ ಪ್ರಕರಣಕ್ಕೆ ರೋಚಕ ತಿರುವು
ಕುಟುಂಬ ಸಮೇತ ಯಲ್ಲಮ್ಮನ ದರ್ಶನ ಪಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಪೊಲೀಸರ ವಾಹನ ಮೇಲೆ ಮುಗುಚಿಬಿದ್ದ ಲಾರಿ: ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು ಓರ್ವನಿಗೆ ಗಾಯ 