ಗ್ರಂಥಾಲಯ ಮೇಲ್ವಿಚಾರಕಕೃಷ್ಣೇಗೌಡರಿಗೆ ಬೀಳ್ಕೊಡುಗೆ

ಗ್ರಂಥಾಲಯ ಮೇಲ್ವಿಚಾರಕಕೃಷ್ಣೇಗೌಡರಿಗೆ ಬೀಳ್ಕೊಡುಗೆ  Farewell to Library Supervisor Krishna Gowda

ಲೋಕದರ್ಶನ ವರದಿ 

ಹೂವಿನ ಹಡಗಲಿ 04:   ಗ್ರಂಥಾಲಯ ಮೇಲ್ವಿಚಾರಕರಾದ ಕೆ. ಕೃಷ್ಣೇಗೌಡರು ತಮ್ಮ ಸೇವಾ ಅವಧಿಯಲ್ಲಿ ಗ್ರಂಥಾಲಯ ಇಲಾಖೆಗೆ ಉತ್ತಮ ರೀತಿಯಲ್ಲಿ ಸೇವೆ ಸಲ್ಲಿಸಿದ್ದಾರೆ ಎಂದು ತಾಲೂಕು ಪಂಚಾಯಿತಿ ಇ.ಒ. ಜಿ ಪರಮೇಶ್ವರ ತಿಳಿಸಿದರು.ಪಟ್ಟಣದ ರಾಜೀವಗಾಂಧಿ ಸಭಾಂಗಣದಲ್ಲಿ ಗುರುವಾರ ಗ್ರಂಥಾಲಯ ಇಲಾಖೆಯ ಹ್ಯಾರಡ ಅರಿವು ಕೇಂದ್ರ ಗ್ರಾಮೀಣ ಮೇಲ್ವಿಚಾರಕರಾದ ಕೆ ಕೃಷ್ಣೇಗೌಡರು ನಿವೃತ್ತರಾದ ಹಿನ್ನೆಲೆಯಲ್ಲಿ ತಾಲೂಕು ಗ್ರಂಥಾಲಯ ಮೇಲ್ವಿಚಾರಕರಸಂಘದ ವತಿಯಿಂದ ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಗೌರವ ಸನ್ಮಾನ ನೆರೆವೇರಿಸಿದರು.

ಸರ್ಕಾರದ ಕಡಿಮೆ ಗೌರವಧನ ವೇತನದಲ್ಲಿ ಗ್ರಾಮೀಣ ಗ್ರಂಥಾಲಯದ ಅಭಿವೃದ್ಧಿಗೆ ಮೇಲ್ವಿಚಾರಕರು ಶ್ರಮಿಸುತ್ತಿದ್ದಾರೆ ಎಂದು ಹೇಳಿದರು. ಶಾಖ ಗ್ರಂಥಾಲಯ ಅಧಿಕಾರಿ ಬಿ. ನಾರಾಯಣ್ ದಾಸ್ ,ಹರಪನಹಳ್ಳಿ ತಾಲೂಕಿನಬೋವಿ ಮಂಜುನಾಥ,ತಾಲೂಕಿನ ನಾನಾ ಗ್ರಾಮೀಣ ಗ್ರಂಥಾಲಯ ಮೇಲ್ವಿಚಾರಕರು ಹಾಗೂ ಜಿಲ್ಲಾ ಸಂಘದ ಕಾರ್ಯದರ್ಶಿ ಬಿ ಲೋಕೇಶ್ ಇದ್ದರು.ಗ್ರಂಥಾಲಯ ಮೇಲ್ವಿಚಾರಕರಜಿಲ್ಲಾ ಸಂಘದ ಅಧ್ಯಕ್ಷ ಕುರಿ ಮಂಜುನಾಥ ಕೆ ಕೃಷ್ಣೇಗೌಡರ ಕಾರ್ಯ ಕುರಿತು ಮಾಹಿತಿ ನೀಡಿದರು.ಕೆ ದೊಡ್ಡಬಸಪ್ಪ ಕಾರ್ಯಕ್ರಮ ನಿರ್ವಹಿಸಿದರು.